ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಮೊಬೈಲ್ (Mobile) ಗೀಳು ಎಲ್ಲ ವಯಸ್ಕರಲ್ಲೂ ಹೆಚ್ಚಾಗಿದೆ. ಯಾವುದೇ ವಿಷಯಕ್ಕೂ ಮೊಬೈಲ್ ತೆಗೆದು ನೋಡುವಂತಾಗಿದ್ದು, ನಮ್ಮ ಜೀವನದ ಒಂದು ಭಾಗವೇ ಆಗಿಬಿಟ್ಟಿದೆ. ಮೊಬೈಲ್ ಇಲ್ಲದ ದಿನವನ್ನು ಕಲ್ಪಿಸಿಕೊಳ್ಳೋದಕ್ಕೂ ಸಾಧ್ಯವಾಗದಷ್ಟು ಗೀಳು ಹೆಚ್ಚಾಗಿದೆ.
ಇದೇ ರೀತಿ ಮೊಬೈಲ್ ಗೀಳು ಅತಿಯಾಗಿ ಅಂಟಿಸಿಕೊಂಡಿದ್ದ ಯುವತಿ, ತನ್ನ ಸಹೋದರ ಪಾಸ್‌ವರ್ಡ್ (Mobile Password) ಬದಲಾಯಿಸಿದ್ದಕ್ಕೆ ಮನನೊಂದು ಆತ್ಮಹತ್ಯೆ (Suicide) ಮಾಡಿಕೊಂಡಿರುವ ದೊಡ್ಡಬಳ್ಳಾಪುರ ನಗರದ ಗಾಣಿಗರಪೇಟೆಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಬೆಳಗಾವಿ ಲಾಕಪ್‌ಡೆತ್ ಕೇಸ್: ಪೊಲೀಸರಿಂದ್ಲೇ ಚಿತ್ರಹಿಂಸೆ – ಮೃತನ ಪುತ್ರಿ ಆರೋಪ
ಏನಿದು ಘಟನೆ?
ಯುವತಿ ರುಚಿತಾ (19) ಅತಿಯಾಗಿ ಮೊಬೈಲ್ ಬಳಸುತ್ತಿದ್ದರು. ಮೊಬೈಲ್ ಬಳಕೆಯಿಂದ ಬೇಸತ್ತಿದ್ದ ಯುವತಿಯ ತಮ್ಮ ಪಾಸ್‌ವರ್ಡ್ ಬದಲಾವಣೆ ಮಾಡಿದ್ದಾನೆ. ಇದರಿಂದ ಕೋಪಗೊಂಡ ಅಕ್ಕ ಮೊಬೈಲ್ ಪಾಸ್ ವರ್ಡ್ ಹೇಳುವಂತೆ ತಮ್ಮನಿಗೆ ಪಿಡಿಸಿದ್ದಳು. ಆದರೆ ಸಹೋದರ ಮೊಬೈಲ್ ಬಳಕೆ ಮಾಡಬೇಡ ಎಂದು ಸಲಹೆ ನೀಡುತ್ತಲೇ ಇದ್ದ. ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿತ್ತು. ಅಷ್ಟಾದರೂ ತಮ್ಮ ಪಾರ್ಸ್ವರ್ಡ್ ಹೇಳದೇ ಇದ್ದರಿಂದ ಮೊಬೈಲ್‌ಗಾಗಿ ಹಠಹಿಡಿದಿದ್ದ ಯುವತಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ (Doddaballapur Police Station) ಪ್ರಕರಣ ದಾಖಲಾಗಿದೆ.