ಕೋಲಾರ: ಅವರಿಬ್ಬರದು ಹಲವು ವರ್ಷಗಳ ಹಳೆಯ ಪ್ರೇಮ, ತನ್ನ ಪ್ರೇಯಸಿ ಬೇರೆ ಯುವಕರೊಂದಿಗಿನ ಸಲಹೆ ಹಾಗೂ ಸಂಬಂಧದಿಂದ ಬೇಸತ್ತ ಆ ಯುವಕ ಆಕೆಯನ್ನ ಹಲವು ವರ್ಷಗಳ ಕಾಲ ನಿರಾಕರಿಸಿದ್ದ, ಆದ್ರೂ ಬಿಟ್ಟು ಬಿಡದ ಅವರಿಬ್ಬರ ಸ್ನೇಹ ಪ್ರೀತಿ, ಮತ್ತೆ ಒಂದಾಗಬೇಕೆನ್ನುವಷ್ಟರಲ್ಲಿ ವಿಧಿಯಾಟ ಬೇರೆಯಾಗಿತ್ತು. ಪರ ಪುರಷರೊಂದಿಗಿನ ಅತಿಯಾದ ಸಲಹೆ ಲವರ್ ಜೀವವನ್ನು ಪ್ರಿಯಕರನೇ ತೆಗೆಯುವಂತೆ ಮಾಡಿತ್ತು.
ಹೌದು. ಹೆಣವಾಗಿ ಬಿದ್ದಿರುವ ಯುವತಿ, ಯುವತಿಯ ಮೃತ ದೇಹವನ್ನ ಕಂಡು ಕಂಗಾಲಾಗಿರುವ ಗ್ರಾಮಸ್ಥರು, ಮತ್ತೊಂದೆಡೆ ಆರೋಪಿ ಪ್ರಿಯಕರನನ್ನ ಬಂಧಿಸಿ ವಶಕ್ಕೆ ಪಡೆದಿರುವ ಪೊಲೀಸರು. ಇದೆಲ್ಲದಕ್ಕೂ ಅರ್ಧ ಗಂಟೆಯ ಒಂದು ದುರಂತ ಪ್ರೇಮ ಕಥೆಯಿದೆ.
Advertisement
ಪ್ರೇಮ ಶುರುವಾಗಿದ್ದು ಎಲ್ಲಿ?: ಹೌದು. ಕೋಲಾರ ತಾಲೂಕು ಶೆಟ್ಟಿಕೊತ್ತನೂರು ಒಂದು ಸಣ್ಣ ಗ್ರಾಮ, ಈ ಗ್ರಾಮದಲ್ಲಿ ಬಹುತೇಕರು ವ್ಯವಸಾಯವನ್ನೆ ಮುಖ್ಯ ಕಸುಬಾಗಿ ಅವಲಂಭಿಸಿದ್ದಾರೆ. ಇಂತಹ ಸನ್ನಿವೇಶದಲ್ಲಿ ಇಲ್ಲಿ ತೋಟದ ಕೆಲಸಕ್ಕೆ ಹೋಗುವವರ ಸಂಖ್ಯೆಗೂ ಏನ್ ಕಮ್ಮಿ ಇಲ್ಲ. ಟೊಮೆಟೊ, ಕ್ಯಾರೇಟ್, ಮಾವು ಹೀಗೆ ಸಾಕಷ್ಟು ಹಣ್ಣು ತರಕಾರಿಗಳನ್ನ ಇಲ್ಲಿಯ ಜನರು ಕಿತ್ತು ಮಾರುಕಟ್ಟೆಗೆ ಹಾಕುವುದು ಒಂದು ಉದ್ಯೋಗ. ಈ ಉದ್ಯೋಗದಲ್ಲಿ ಹುಟ್ಟಿಕೊಂಡ ಒಂದು ಪ್ರೇಮ ಕಥೆಯೊಂದು ದುರಂತ ಅಂತ್ಯ ಕಂಡಿದೆ.
Advertisement
Advertisement
ಸೆಪ್ಟಂಬರ್ 18ರಂದು ಶೆಟ್ಟಿಕೊತ್ತನೂರು ಗ್ರಾಮದ ಕಾವ್ಯಾ ಮೃತದೇಹ ಕೆರೆಯ ಬಳಿ ಪತ್ತೆಯಾಗಿದ್ದು. ಕೊಲೆಯಾಗಿ ಶವವನ್ನು ಎಸೆದಿರಬಹುದು ಎನ್ನುವ ಶಂಕೆಯ ಆಧಾರದಲ್ಲಿ ಕೋಲಾರ ಗ್ರಾಮಾಂತರ ಪೊಲಿಸರು ಸತತ ಒಂದು ತಿಂಗಳ ಕಾಲ ತನಿಖೆ ನಡೆಸಿ ಕೊಲೆ ಆರೋಪಿಗಾಗಿ ಬಲೆ ಬೀಸಿದ್ರು. ಮೊದ ಮೊದಲಿಗೆ ಪೊಲೀಸರಿಗೆ ತಲೆ ನೋವಾಗಿದ್ದ ಅನುಮಾನಸ್ಪದ ಕೊಲೆ ಪ್ರಕರಣ ಯಾರೋ ಅತ್ಯಾಚಾರ ಮಾಡಿ ಬಿಸಾಡಿರಬಹುದಾ ಅಥವಾ ಉದ್ದೇಶ ಪೂರ್ವಕವಾಗಿ ಕೊಲೆ ಮಾಡಿರಬಹುದಾ ಹೀಗೆ ಹಲವು ರೀತಿಯ ಆಯಾಮಗಳಲ್ಲಿ ತನಿಖೆಯನ್ನ ಪೊಲೀಸರು ಆರಂಭಿಸಿದ್ರು. ಜೊತೆಗೆ ಕಾವ್ಯಾಳ ಪ್ರಿಯಕರನ ಮೇಲೆ ಸಂಬಂಧಿಕರು ಅನುಮಾನ ವ್ಯಕ್ತಪಡಿಸಿದ್ರು. ಅದರಂತೆ ಬಯಲಾದ ಸತ್ಯವೇ ಪ್ರಿಯಕರ ಅಭಿಲಾಶ್ ತನ್ನ ಪ್ರಿಯತಮೆ ಕಾವ್ಯಳನ್ನ ಕೊಲೆ ಮಾಡಿರುವುದಾಗಿ ಬೆಳಕಿಗೆ ಬಂದಿದೆ.
Advertisement
ಪ್ರೀತಿಸಿ, ಬೇರೆಯಾದ್ರು: ಶೆಟ್ಟಿಕೊತ್ತನೂರು ಗ್ರಾಮದ ಯುವತಿಯ ಮಾಜಿ ಪ್ರಿಯಕರ ಅದೇ ಗ್ರಾಮದ ಅಭಿಲಾಶ್ ಎಂಬಾತನೆ ಕೊಲೆ ಮಾಡಿರುವುದಾಗಿ ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ. ಇಬ್ಬರು ದೂರದ ಸಂಬಂಧಿಗಳಾಗಿದ್ದು ಅಭಿಲಾಶ್ ಹಾಗೂ ಕಾವ್ಯ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ರು. ಅಲ್ಲದೆ ಇಬ್ಬರು ಕ್ಯಾರೇಟ್ ಹಾಗೂ ತರಕಾರಿ ಬಿಡಿಸುವ ಕೂಲಿ ಕೆಲಸಕ್ಕೆ ಒಂದೆ ಕಡೆ ಹೋಗುತ್ತಿದ್ರು. ಈ ಮಧ್ಯೆ ಕಾವ್ಯಾಳ ಪರ ಪುರಷರೊಂದಿಗಿನ ಸಂಬಂಧ ಒಂದಿಷ್ಟು ಅಭಿಲಾಶ್ ಗೆ ಹಿಡಿಸಿರಲಿಲ್ಲ. ಹೀಗಾಗಿ ಮೊದಲು ಮದುವೆಯಾಗಬೇಕೆಂದುಕೊಂಡಿದ್ದ ಇವರಿಬ್ಬರು ಕ್ರಮೇಣ ದೂರವಾಗಿದ್ರು. ಇದರಿಂದ ಜೋಡಿ ಹಕ್ಕಿಗಳಂತಿದ್ದ ಅವರಿಬ್ಬರ ಸಂಬಂಧ ಹಳಸಿತ್ತು. ಇದಲ್ಲದೆ ಈ ಮಧ್ಯೆ ಕಾವ್ಯಾ ಮತ್ತೊಬ್ಬ ಯುವಕನ ಜೊತೆ ಓಡಿ ಹೋಗಿ ವಾಪಸ್ಸು ಬಂದಿದ್ದಳು. ಇತ್ತ ಮದುವೆಯಾಗದೇ, ಮಗಳ ನಡವಳಿಕೆಯಿಂದ ಬೇಸತ್ತ ಕುಟುಂಬಸ್ಥರು ಆಗಾಗ ಕಾವ್ಯಾಳ ಮನೆಯಲ್ಲಿ ಆಕೆಯನ್ನ ನಿಂದಿಸುತ್ತಿದ್ರು. ಮನೆಯಲ್ಲಿ ಗೊತ್ತಿದ್ದ ಹಾಗೆ ಅಭಿಲಾಶ್ ನನ್ನಾದ್ರು ಮದುವೆಯಾಗುವಂತೆ ಬಲವಂತ ಮಾಡುತ್ತಿದ್ರು. ಆದ್ರೆ ಕಾವ್ಯಾ ಕೆಲಸಕ್ಕೆ ಹೋದ ಕಡೆ, ಗ್ರಾಮದಲ್ಲಿ ಅವಳ ಬಗ್ಗೆ ಇಲ್ಲ ಅಲ್ಲದ ಗುಸು ಗುಸು ಕೇಳಿ ಬಂದಿತ್ತು, ಅಭಿಲಾಶ್ ಕೂಡ ಕಣ್ಣಾರೆ ನೋಡಿ ಬೇಸತ್ತಿದ್ದ.
ಕರೆ ಮಾಡಿದ್ಳು ಕಾವ್ಯಾ: ಈ ಮಧ್ಯೆ ತನ್ನ ಪಾಡಿಗೆ ತಾನು ಅಂತ್ತಿದ್ದ ಅಭಿಲಾಶ್ ಗೆ ಅಂದು ಸಂಜೆ ಅಂದ್ರೆ ಸೆಪ್ಟೆಂಬರ್ 18 ರಂದು ಖುದ್ದು ಕಾವ್ಯಾ ಪೋನ್ ಮಾಡಿ ಕೆರೆಯ ಬಳಿ ಬರುವುದಕ್ಕೆ ಹೇಳಿದ್ದಾಳೆ. ಈ ಮಧ್ಯೆ ದೀಪಾವಳಿ ರಜೆಯನ್ನ ಮುಗಿಸಿದ್ದ ಅಭಿಲಾಶ್, ಪ್ರಿಯತಮೆ ಕರೆದ್ರೆ ಯಾರ್ ತಾನೆ ಬರದೆ ಇರ್ತಾರೆ ಹೇಳಿ. ಆದ್ರೂ ಕೂಡ ಒಂದ್ಸಾರಿ ಹಿಂದು ಮುಂದು ಯೋಚನೆ ಮಾಡಿದ ಅಭಿಲಾಶ್ ಕೆರೆ ಬಳಿ ಹೋಗುವುದಕ್ಕೆ ನಿರಾಕರಿಸಿದ್ದಾನೆ. ಆದ್ರೆ ನಮ್ಮ ತಾಯಿ ನಿನ್ನ ಬಳಿ ಮಾತನಾಡಬೇಕೆಂದು ಹೇಳಿ ಕರೆಸಿಕೊಂಡಾಗ ಅಭಿಲಾಶ್ ಅಂದು ಸಂಜೆ ಕೆರೆ ಬಳಿ ಹೋಗಿದ್ದಾನೆ. ಇಬ್ಬರು ಕೆಲಕಾಲ ಮಾತನಾಡಿದ್ದು, ಮಾತಿಗೆ ಮಾತು ಬೆಳೆದು ಅದು ವಿಕೋಪಕ್ಕೆ ತಿರುಗಿದೆ. ಆ ಜಗಳ ಕಾವ್ಯಾಳ ಪರ ಪುರುಷರೊಂದಿಗಿನ ಅತಿಯಾದ ಸಲುಗೆ ಹಾಗೂ ಸಂಬಂಧದ ವಿಚಾರವೇ ಆಗಿತ್ತು. ಇತ್ತ ಕಾವ್ಯಾ ಮನೆಯಲ್ಲಿ ಅಭಿಲಾಶ್ ನನ್ನ ಮದುವೆಯಾಗುವಂತೆ ಹೇಳುತ್ತಿದ್ದು, ಜೊತೆಗೆ ಆಕೆಯ ನಡವಳಿಕೆಯನ್ನ ಕಂಡಿದ್ದ ಇಬ್ಬರ ಜಗಳದಲ್ಲಿ ಅಭಿಲಾಶ್ ತನ್ನ ಪ್ರಿಯತಮೆ ಕಾವ್ಯಾಳ ಜೀವ ತೆಗೆದಿದ್ದ.
ಕೊಲೆ ಮಾಡಿದ್ದು ಯಾಕೆ? ಆ ಸಂಜೆ ಅವರಿಬ್ಬರು ಅನ್ಯೋನ್ಯವಾಗಿ ಮದುವೆಯಾಗುವ ನಿರ್ಧಾರ ಮಾಡಿದ್ರೆ ಸರಿಯಾಗುತಿತ್ತು ಏನೋ? ಆದ್ರೆ ಮಾತಿನ ಮಧ್ಯೆ ಕಾವ್ಯಾ ನಿನ್ನನ್ನು ಕೊಲ್ಲಲು ಪರಿಚಯಸ್ಥರಿಗೆ ಸುಪಾರಿ ಕೊಟ್ಟಿದ್ದೇನೆ ಎಂದು ಅಭಿಲಾಶ್ ಗೆ ಬೆದರಿಕೆ ಹಾಕಿದ್ದಾಳೆ. ಇದರಿಂದ ರೊಚ್ಚಿಗೆದ್ದ ಅಭಿಲಾಶ್ ವೇಲ್ ನಿಂದ ಕಾವ್ಯಾಳ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ.
ಅನುಮಾನ ಮೂಡಿದ್ದು ಹೇಗೆ?
ಮೊದಲಿನಿಂದಲೂ ಅಭಿಲಾಶ್ ಮೇಲೆ ಕಾವ್ಯಾಳ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದರು. ಹೀಗಾಗಿ ಪೊಲೀಸರು ವಶಕ್ಕೆ ಪಡೆದು ಅಭಿಲಾಶ್ ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಕೆರೆಯಲ್ಲಿ ನಡೆದ ಮಾತುಕತೆ, ಸವಾಲ್ ಗೆ ಸವಾಲ್ ಆ ಪ್ರಿಯತಮೆ ಜೀವ ತೆಗೆಯಬೇಕಾಯಿತು ಎಂದು ಆರೋಪಿ ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾನೆ.