ಹುಡುಗಿ ವಿಚಾರಕ್ಕೆ ಗಲಾಟೆ- ಸ್ನೇಹಿತರಿಬ್ಬರಿಗೆ ಚಾಕು ಇರಿದು ಬರ್ಬರ ಹತ್ಯೆ!

Public TV
1 Min Read
HBL DOUBAL MURDER AV 2 RAIZA FRIZO

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಡಬಲ್ ಮರ್ಡರ್ ಆಗಿದ್ದು, ಜನ ಬೆಚ್ಚಿಬಿದ್ದಿದ್ದಾರೆ. ಹಳೇ ದ್ವೇಷದಿಂದ ಚಾಕು ಇರಿದು ಕೊಲೆ ಮಾಡಿದ ಘಟನೆ ಅಂಜತಾ ಹೋಟೆಲ್ ತಡರಾತ್ರಿ ನಡೆದಿದೆ.

ಕೇಶ್ವಾಪುರ ನಿವಾಸಿ ರಿಯಾಜ್ ಸವಣೂರ (23) ಹಾಗೂ ಮಂಟೂರು ರಸ್ತೆಯ ಮಿಲತ್ ನಗರ ನಿವಾಸಿ ಫಿರೋಜ್ ಹನಸಿ (23) ಕೊಲೆಯಾದವರು. ರಿಯಾಜ್ ಹಾಗೂ ಫಿರೋಜ್ ಸ್ನೇಹಿತರಾದ ವಾಸಿಂ, ಅಖಿಲ್ ಸೇರಿದಂತೆ ಇನ್ನೊಬ್ಬ ಈ ಕೃತ್ಯವನ್ನು ಎಸಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಆದರೆ ಮೊದಲು ಸ್ನೇಹಿತರಾಗಿದ್ದ ಐದು ಜನರು ಎರಡು ತಿಂಗಳ ಹಿಂದೆ ಹುಡುಗಿ ವಿಷಯಕ್ಕೆ ಜಗಳವಾಡಿದ್ದರು. ಇದೇ ದ್ವೇಷವನ್ನು ಸಾಧಿಸಲು, ತಡರಾತ್ರಿ ಫೋನ್ ಮಾಡಿ ಕರೆಸಿಕೊಂಡು ಈ ಕೃತ್ಯ ಎಸಗಿದ್ದಾರೆ ಎನ್ನುವ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

HBL DOUBAL MURDER

ಹುಬ್ಬಳ್ಳಿ-ಧಾರವಾಡ ಪೊಲೀಸ್  ಆಯುಕ್ತ ಎಂ.ಎನ್ ನಾಗರಾಜ್ ಅವರು ಕಿಮ್ಸ್ ಶವಾಗಾರಕ್ಕೆ ಭೇಟಿಯಿತ್ತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಇವರೆಲ್ಲಾ ಸ್ನೇಹಿತರು, ಅವರ ಮಧ್ಯೆ ತಡರಾತ್ರಿ ಗಲಾಟೆ ನಡೆದು ಇಬ್ಬರ ಕೊಲೆ ಮಾಡಿ, ಮೂವರು ಪರಾರಿಯಾಗಿದ್ದಾರೆ. ಮಾಹಿತಿ ಪ್ರಕಾರ, ವಾಸಿಂ, ಅಖಿಲ್ ಸೇರಿದಂತೆ ಇನ್ನೊಬ್ಬರು ಈ ಕೃತ್ಯವನ್ನು ಮಾಡಿದ್ದಾರೆ. ಕೂಡಲೇ ಅವರನ್ನು ಬಂಧಿಸಲಾಗುವುದು ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *