ಮೈಸೂರು: ಮಡಿಕೇರಿ ಮೂಲದ ಯುವತಿಯೊಬ್ಬರು ನಗರದ ಹೊರವಲಯದಲ್ಲಿ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಭಾನುವಾರ ಘಟನೆ ನಡೆದಿದ್ದು, ಯುವತಿ ಇಂದು (ಸೋಮವಾರ) ಪೊಲೀಸ್ ಠಾಣೆಗೆ ಹಾಜರಾಗಿ ದೂರು ದಾಖಲಿಸಿದ್ದಾರೆ.
ಅತ್ಯಾಚಾರ ಎಸಗಿದ ಯುವಕರು ಸಹ ಮಡಿಕೇರಿ ಮೂಲದವರು ಎನ್ನಲಾಗುತ್ತಿದೆ. ನಗರದ ಹೊರ ವಲಯದ ಭಾಗದಲ್ಲಿ ಕೆಲವೊಂದು ಲಾಡ್ಜ್‌ಗಳಿವೆ. ಈ ಪ್ರದೇಶದಲ್ಲಿ ಗ್ಯಾಂಗ್ ರೇಪ್ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಸಂಬಂಧ ಮೂರು ಜನರನ್ನು ವಶಕ್ಕೆ ಪಡೆಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.