ಮೆಟ್ರೋದಲ್ಲಿ ಬಿಕಿನಿ ಗರ್ಲ್; ಉರ್ಫಿ ಜಾವೇದ್ ತಂಗಿ ಎಂದ ನೆಟ್ಟಿಗರು

Public TV
2 Min Read
Delhi Metro Girl

ನವದೆಹಲಿ: ಬಿಗ್‌ ಬಾಸ್ ಮಾಜಿ ಸ್ಪರ್ಧಿ, ಫ್ಯಾಷನ್‌ ತಾರೆ ಉರ್ಫಿ ಜಾವೇದ್ (Urfi Javed) ತನ್ನ ವಿಭಿನ್ನ ಉಡುಗೆಗಳಿಂದಲೇ ಫೇಮಸ್‌ ಆಗಿದ್ದಾರೆ. ಅದೇ ರೀತಿ ದೆಹಲಿಯಲ್ಲಿ ಯುವತಿಯೊಬ್ಬಳು ಬಿಕಿನಿ (Bikini) ತೊಟ್ಟು ದೆಹಲಿ ಮೆಟ್ರೋದಲ್ಲಿ ಸಂಚರಿಸಿರುವುದು ಕಂಡುಬಂದಿದೆ.

ಎನ್‌ಸಿಎಂ ಇಂಡಿಯಾ ಕೌನ್ಸಿಲ್‌ ಫಾರ್‌ ಮೆನ್‌ ಅಫೇರ್ಸ್‌ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಳ್ಳಲಾದ ಸುಮಾರು 9 ಸೆಕೆಂಡುಗಳ ವೀಡಿಯೋದಲ್ಲಿ, ಯುವತಿ ಬಿಕಿನಿ ಧರಿಸಿ ಸಂಚರಿಸಿರುವುದು ಕಂಡುಬಂದಿದೆ. ಇದನ್ನೂ ಓದಿ: ಮೈತುಂಬಾ ಬಟ್ಟೆ ಹಾಕುವೆ ಎನ್ನುತ್ತಾ ಏಪ್ರಿಲ್ ಫೂಲ್ ಮಾಡಿದ ಉರ್ಫಿ

ಯುವತಿ ದೆಹಲಿ ಮೆಟ್ರೋದಲ್ಲಿ (Delhi Metro Girl) ಸಂಚರಿಸುತ್ತಿದ್ದ ವೇಳೆ ತೊಡೆಯ ಮೇಲೆ ಬ್ಯಾಗ್‌ ಇಟ್ಟುಕೊಂಡು ಕುಳಿತಿದ್ದಳು. ಆಕೆ ಎದ್ದು ನಿಂತಾಗ ಬಿಕಿನಿ ತೊಟ್ಟಿರುವುದು ಕಂಡಿದೆ. ತಕ್ಷಣವೇ‌ ಚಾಲಾಕಿಯೊಬ್ಬ ವೀಡಿಯೋ ಸೆರೆಹಿಡಿದು ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. 

ನೆಟ್ಟಿಗರಿಂದ ಫುಲ್‌ ಕ್ಲಾಸ್‌: ದೆಹಲಿ ಯುವತಿಯ ವೀಡಿಯೋ ಜಾಲತಾಣದಲ್ಲಿ (Social Media) ಹರಿದಾಡುತ್ತಿದ್ದಂತೆ ನೆಟ್ಟಿಗರು ಫುಲ್‌ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಕೆಲವರು ಇದು ಪ್ರಜಾಪ್ರಭುತ್ವ, ಸ್ವಾತಂತ್ರ್ಯದ ಹಕ್ಕು ಎಂದು ಆಕೆಯನ್ನು ಬೆಂಬಲಿಸಿದರೆ ಉಳಿದವರು ಆಕೆಯ ನಡವಳಿಕೆಯನ್ನು ಖಂಡಿಸಿದ್ದಾರೆ. ಇದನ್ನೂ ಓದಿ: IPL 2023 – ಚಿಯರ್‌ ಗರ್ಲ್ಸ್‌ ಝಲಕ್‌ ನೋಡಿ

Metro Girl

ಮೆಟ್ರೋ ಸಿಬ್ಬಂದಿ ಆಕೆಯನ್ನು ಹೇಗಾದರೂ ಒಳಗೆ ಬಿಟ್ಟರು? ಐಪಿಸಿ ಸೆಕ್ಷನ್‌ 293 (ಯುವ ವ್ಯಕ್ತಿಗೆ ಅಶ್ಲೀಲ ವಸ್ತುಗಳನ್ನು ಮಾರಾಟ ಮಾಡುವುದು), ಸೆಕ್ಷನ್‌ 294ರ (ಅಶ್ಲೀಲ ಕೃತ್ಯಗಳು ಮತ್ತು ಹಾಡುಗಳು) ಅಡಿಯಲ್ಲಿ ಕೇಸ್‌ ದಾಖಲಿಸಬಹುದು ಎಂದು‌ ಕಾಮೆಂಟ್‌ ಮಾಡಿದ್ದಾರೆ. ಈ ಮಧ್ಯೆ ಮತ್ತಷ್ಟು ಮಂದಿ ಆಕೆಗೆ ʻದೆಹಲಿಯ ಮೆಟ್ರೊ ಹುಡುಗಿʼ ಅಂತಾ ಬಿರುದು ಕೊಟ್ಟಿದ್ದು, ಉರ್ಫಿ ಜಾವೇದ್‌ನಿಂದ ಪ್ರೇರಣೆ ಪಡೆದಿರಬೇಕು, ಪಾಪ ಬಟ್ಟೆ ಖರೀದಿಸಲು ಹಣವಿಲ್ಲ ಅನ್ನಿಸುತ್ತೆ ಎಂದು ಹಾಸ್ಯ ಮಾಡಿದ್ದಾರೆ.

Urfi Javed 3

ಈ ಕುರಿತು ಪ್ರತಿಕ್ರಿಯೆ ನೀಡಿರುವ ಡಿಎಂಆರ್‌ಸಿ ನಿರ್ದೇಶಕ ಅನುಜ್ ದಯಾಳ್, ಪ್ರತಿದಿನ 60 ಲಕ್ಷ ಮಂದಿ ಮೆಟ್ರೋದಲ್ಲಿ ಪ್ರಯಾಣಿಸುತ್ತಾರೆ. ಆಕೆಯೊಬ್ಬಳನ್ನೇ ಪತ್ತೆಹಚ್ಚಲು ಸಾಧ್ಯವಿಲ್ಲ. ಆದರೆ ಆಕೆ ಅನುಚಿತ ಉಡುಗೆ ಧರಿಸಿರುವುದಕ್ಕಾಗಿ ಕ್ರಮ ಕೈಗೊಳ್ಳಬಹುದು ಎಂದು ಹೇಳಿದ್ದಾರೆ.

Share This Article