ಸೀರೆ ಜೋಕಾಲಿಯಲ್ಲಿ ಸಿಲುಕಿ ಬಾಲಕಿ ಸಾವು

Public TV
1 Min Read
DEATH 1 1

ಉಡುಪಿ: ಸೀರೆ ಜೋಕಾಲಿಯಲ್ಲಿ (Swing) ಸಿಲುಕಿ ಬಾಲಕಿ ಸಾವನ್ನಪ್ಪಿದ ಘಟನೆ ಉಡುಪಿ (Udupi) ಜಿಲ್ಲೆಯ ಕಾರ್ಕಳದಲ್ಲಿ (Karkala) ನಡೆದಿದೆ.

ಕಾರ್ಕಳ ತಾಲೂಕು ನಿಟ್ಟೆ (Nitte) ಗ್ರಾಮ ಕೆಮ್ಮಣ್ಣುವಿನ ಲಕ್ಷ್ಮಿ ಪೂಜಾರಿ ಎಂಬವರ ಮಗಳು ಮಾನ್ವಿ (9) ಮೃತ ಬಾಲಕಿ. ಚಿಕ್ಕಪ್ಪನ ಮನೆಗೆ ಆಟವಾಡಲೆಂದು ಹೋಗಿದ್ದ ವೇಳೆ ಘಟನೆ ನಡೆದಿದೆ. ಇದನ್ನೂ ಓದಿ: ರೈಲಿನ ರೇಕ್ ಹರಿದು ಗುತ್ತಿಗೆ ಕಾರ್ಮಿಕ ಸಾವು

ಸಮೀಪದ ಮನೆಯ ಮತ್ತೊಬ್ಬ ಬಾಲಕಿಯ ಜೊತೆ ಚಿಕ್ಕಪ್ಪನ ಮನೆಯಲ್ಲಿ ಸೀರೆಯಲ್ಲಿ ಜೋಕಾಲಿ ಕಟ್ಟಿ ಆಡುತ್ತಿದ್ದರು. ಈ ವೇಳೆ ಸೀರೆ ಕುತ್ತಿಗೆಗೆ ಸುತ್ತಿಕೊಂಡ ಪರಿಣಾಮ ಅವಘಡ ಸಂಭವಿಸಿದೆ. ಸ್ಥಳದಲ್ಲಿದ್ದವರು ತಕ್ಷಣ ಬಾಲಕಿಯನ್ನು ಆಸ್ಪತ್ರೆಗೆ ರವಾನಿಸಿದರಾದರೂ ಚಿಕಿತ್ಸೆಗೆ ಸ್ಪಂದಿಸದೆ ಬಾಲಕಿ ಮೃತಪಟ್ಟಿದ್ದಾಳೆ. ಇದನ್ನೂ ಓದಿ: ರಾಮನಾಥಪುರ ಕೆರೆಯಲ್ಲಿ ಈಜಲು ಹೋದ ನಾಲ್ವರು ಯುವಕರು ನೀರುಪಾಲು

ನಿಟ್ಟೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದಿದೊಯ್ದು ಚಿಕಿತ್ಸೆ ನೀಡಲು ಪ್ರಯತ್ನಿಸಲಾಯಿತು ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಶವಸಂಸ್ಕಾರದ ವೇಳೆ ಕೊಲೆ ಶಂಕೆ ಪ್ರಕರಣಕ್ಕೆ ಟ್ವಿಸ್ಟ್ – ಪತ್ನಿಯೇ ಮಾಸ್ಟರ್‌ಮೈಂಡ್

Share This Article