ಚಿಕ್ಕಬಳ್ಳಾಪುರ: ಹಾಡಹಗಲೇ ಬೈಕ್‍ನಲ್ಲಿ ತೆರಳುತ್ತಿದ್ದ ವ್ಯಕ್ತಿಯನ್ನು ದುಷ್ಕರ್ಮಿಗಳು ಹಿಂಬಾಲಿಸಿ ಲಾಂಗ್ ಬೀಸಿ ಕೊಲೆಗೆ ಯತ್ನಿಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರದ ಸಂತೆ ಬೀದಿಯ ಶಾಮಣ್ಣ ಬಾವಿ ರಸ್ತೆಯಲ್ಲಿ ನಡೆದಿದೆ.
ತಮಿಳುನಾಡು ಮೂಲದ 32 ವರ್ಷದ ಯುವರಾಜ್ ಹಲ್ಲೆಗೊಳಗಾದವರಾಗಿದ್ದು, ಅಂದಹಾಗೆ ತಮಿಳುನಾಡು ಮೂಲದ ಯುವರಾಜ್ ಇದೇ ಶಿಡ್ಲಘಟ್ಟ ತಾಲೂಕಿನ ದಬರನಾಯಕನಹಳ್ಳಿಯ ಯುವತಿ ಜೊತೆ ಕಳೆದ ವರ್ಷ ಡಿಸೆಂಬರ್‍ನಲ್ಲಿ ವಿವಾಹವಾಗಿದ್ದರು. ಕಳೆದ 2-3 ದಿನಗಳ ಹಿಂದೆಯಷ್ಟೇ ಯುವರಾಜ್ ದಬರನಾಯನಕನಳ್ಳಿಗೆ ಆಗಮಿಸಿದ್ದು, ಶಿಡ್ಲಘಟ್ಟ ಪಟ್ಟಣಕ್ಕೆ ಬೈಕ್ ನಲ್ಲಿ ತೆರಳುತ್ತಿದ್ದರು. ಈ ವೇಳೆ ದುಷ್ಕರ್ಮಿಗಳು ಫಾಲೋ ಮಾಡಿ ಬೈಕ್ ನಲ್ಲಿ ತೆರಳುತ್ತಿದ್ದ ಯುವರಾಜ್‍ಗೆ ಹಿಂಬದಿಯಿಂದ ಬಂದು ಲಾಂಗ್ ಬೀಸಿ ಹಲ್ಲೆ ನಡೆಸಿದ್ದಾರೆ. ಪರಿಣಾಮ ಯುವರಾಜ ಕುಸಿದುಬಿದ್ದಿದ್ದನ್ನು ಸತ್ತಿದ್ದಾನೆ ಎಂದು ತಿಳಿದು ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ದನ್ನೂ ಓದಿ: ಇನ್ನೊಂದು ಮದುವೆಯಾಗ್ತೀನಿ ಎಂದ ತಂದೆಯನ್ನು ಕೊಂದ ಮಗ!
ಈ ಸಂಬಂಧ ಶಿಡ್ಲಘಟ್ಟನಗರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳಯವನ್ನು ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ನಿಮ್ಹಾನ್ಸ್‌ಗೆ ದಾಖಲಿಸಲಾಗಿದೆ. ಸದ್ಯ ಆರೋಪಿಗಳ ಪತ್ತೆಗಾಗಿ ಶಿಡ್ಲಘಟ್ಟ ನಗರ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: ಕೊರೊನಾ ತನಗೆ ಬರಬಾರದೆಂದು ಸೋಂಕಿತ ಮಗನನ್ನೇ ಕಾರ್‌ನ ಟ್ರಂಕ್‌ನಲ್ಲಿ ಬಂಧಿಸಿದ್ದ ತಾಯಿ ಅರೆಸ್ಟ್