ಭುವನೇಶ್ವರ: ಮಹಾಮಾರಿ ಕೊರೊನಾ ವೈರಸ್‍ನಿಂದಾಗಿ 2 ವರ್ಷ ಸಡಗರದ ಹಬ್ಬಕ್ಕೆ ಬ್ರೇಕ್ ಹಾಕಲಾಗಿತ್ತು. ಹೀಗಾಗಿ ಈ ವರ್ಷ ಎಲ್ಲಾ ಹಬ್ಬಗಳನ್ನು ಅತ್ಯಂತ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಗುತ್ತಿದೆ. ಬರೋಬ್ಬರಿ 2 ವರ್ಷಗಳ ಬಳಿಕ ಈ ಬಾರಿ ಎಲ್ಲಾ ಕಡೆಗಳಲ್ಲಿಯೂ ಗಣೇಶನನ್ನು ವಿವಿಧ ರೂಪದಲ್ಲಿ ಪೂಜಿಸಲಾಗುತ್ತಿದೆ.
Odisha | A Ganesh idol has been made using sixty thousand marbles in Mayurbhanj, as part of #GaneshChaturthi celebrations (31.08) pic.twitter.com/Ja6s0MP2hf
— ANI (@ANI) September 1, 2022
Advertisement
ಪ್ಲಾಸ್ಟಿಕ್ ಬಾಟ್ಲಿಗಳನ್ನು ಜೋಡಿಸಿ ಗಣೇಶ ಮೂರ್ತಿಯನ್ನು ಮಾಡಲಾಗಿತ್ತು. ಅಂತೆಯೇ ಇದೀಗ ಒಡಿಶಾದಲ್ಲಿ ಬರೋಬ್ಬರಿ 60 ಸಾವಿರ ಗೋಲಿಗಳಿಂದ ಗಣೇಶನ ವಿಗ್ರಹವನ್ನು ಮಾಡಲಾಗಿದ್ದು, ಜನಮನ ಸೆಳೆಯುತ್ತಿದೆ. ಒಡಿಶಾದ ಮಯೂರ್‍ಭಂಜ್‍ನಲ್ಲಿ ಈ ರೀತಿಯ ಗಣಪ ಮಿಂಚುತ್ತಿದ್ದು, ನೋಡಲು ಜನ ಮುಗಿಬೀಳುತ್ತಿದ್ದಾರೆ. ಸದ್ಯ ಗಣೇಶನ ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ: ʼಪುಷ್ಪʼ ಸ್ಟೈಲ್‌ನಲ್ಲಿ ಮಿಂಚಿದ ಗಣಪ
Advertisement
Advertisement
ಇತ್ತ ನಟ ಪುನೀತ್ ರಾಜ್ ಕುಮಾರ್ ನಿಧನದ ಬಳಿಕ ಇದು ಮೊದಲ ಗಣೇಶ ಹಬ್ಬವಾಗಿದ್ದು, ಈ ಹಿನ್ನೆಲೆಯಲ್ಲಿ ಕರ್ನಾಟಕದ ಹಲವೆಡೆ ಗಣೇಶನ ಜೊತೆ ಪುನೀತ್ ಅವರ ಮೂರ್ತಿಯಿಟ್ಟು ಪೂಜಿಸಲಾಗುತ್ತಿದೆ. ಇಷ್ಟು ಮಾತ್ರವಲ್ಲದೆ ವಿವಿಧ ಸ್ಟೈಲ್‍ನಲ್ಲಿ ಗಣೇಶ ಮೂರ್ತಿ ಮಾಡುವ ಮೂಲಕ ಜನಮನ ಸೆಳೆಯುಂತೆ ಮಾಡಲಾಗುತ್ತಿದೆ.
Advertisement
`ಪುಷ್ಪ’ ಸಿನಿಮಾದಲ್ಲಿ ಅಲ್ಲು ಅರ್ಜುನ್ ಅವರು ಗಡ್ಡ ಸವರುವ ಸ್ಟೈಲ್ ದೇಶವಷ್ಟೇ ಅಲ್ಲ ವಿದೇಶದಲ್ಲೂ ಜನಪ್ರಿಯತೆ ಗಳಿಸಿತ್ತು. ವಿವಿಧ ಕ್ಷೇತ್ರಗಳಲ್ಲಿ ಖ್ಯಾತಿ ಗಳಿಸಿರುವವರೂ ಈ ಸ್ಟೈಲ್ ಅನುಕರಿಸಿ ಖುಷಿಪಟ್ಟಿದ್ದರು. ಅದೇ ಮಾದರಿಯ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಮುಂಬೈನಲ್ಲಿ ಭಕ್ತರು ಸುದ್ದಿಯಾಗಿದ್ದಾರೆ. ಸಿನಿಮಾದಲ್ಲಿ ಅಲ್ಲು ಅರ್ಜುನ್ ಕುರ್ತಾ-ಪೈಜಾಮ್ ಧರಿಸಿ ಗಡ್ಡ ಸವರುವ ಮಾದರಿಯಲ್ಲೇ ಗಣೇಶ ಮೂರ್ತಿ ರೂಪಿಸಲಾಗಿದೆ. ಮೂರ್ತಿಯ ಚಿತ್ರ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.