ವಿಜಯಪುರ: ಕುಡಿದ ನಶೆಯಲ್ಲಿ ವ್ಯಕ್ತಿಯೊಬ್ಬ ತನ್ನ ಗೆಳೆಯನನ್ನೇ ಹತ್ಯೆಗೈದ ಘಟನೆ ವಿಜಯಪುರ (Vijayapura) ನಗರದ ಮಹಾನಗರ ಪಾಲಿಕೆಯ ಬಳಿ ನಡೆದಿದೆ.
ಸಮೀರ ಬಡಿಗರ್ (35) ಹತ್ಯೆಯಾಗಿರುವ ದುರ್ದೈವಿ. ಗೆಳೆಯ ವಿನಯ ಎಂಬಾತನಿಂದ ಹತ್ಯೆ ನಡೆದಿದೆ. ಕುಡಿದ ನಶೆಯಲ್ಲಿ ಸಮೀರ ದೇಹಕ್ಕೆ ಏಳಕ್ಕಿಂತ ಹೆಚ್ಚು ಬಾರಿ ಚಾಕುವಿನಿಂದ ಹಲ್ಲೆಗೈದು ಹತ್ಯೆ ಮಾಡಿದ್ದಾನೆ. ಇದನ್ನೂ ಓದಿ: ದೀಪಾವಳಿಯೊಳಗೆ ಕಾಂಗ್ರೆಸ್ ಸರ್ಕಾರ ಢಮಾರ್: ಸಿಟಿ ರವಿ
Advertisement
Advertisement
ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ‘ಡಿ’ ಗ್ಯಾಂಗ್‌ಗೆ ಜೈಲೇ ಗತಿ – ಮತ್ತೆ 3 ದಿನ ನ್ಯಾಯಾಂಗ ಬಂಧನ ವಿಸ್ತರಣೆ