ತಾನು ಪ್ರೀತಿಸುತ್ತಿದ್ದ ಯುವತಿಗೆ ಮೆಸೇಜ್ ಮಾಡಿದ್ದಕ್ಕೆ ಸ್ನೇಹಿತನ ಮೇಲೆ ಮಾರಣಾಂತಿಕ ಹಲ್ಲೆ!

Public TV
1 Min Read
LOVER GALATE

ಬೆಂಗಳೂರು: ಪ್ರೀತಿ ಮಾಡುತ್ತಿದ್ದ ಯುವತಿಗೆ ಮೆಸೇಜ್ (Lover Message) ಮಾಡುತ್ತಿದ್ದ ಎಂಬ ಕಾರಣಕ್ಕೆ ಯುವಕನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ ತಲೆಮರೆಸಿಕೊಂಡಿದ್ದ ಪುಡಿ ರೌಡಿಗಳನ್ನ ಪೊಲೀಸರು ಬಂಧಿಸಿದ್ದಾರೆ.

ಶಶಾಂಕ್ ಹಾಗೂ ನಂದನ್ ಬಂಧಿತ ಇಬ್ಬರು ಆರೋಪಿಗಳು. ಶಶಾಂಕ್, ಯುವತಿಯೊಬ್ಬಳನ್ನು ಪ್ರೀತಿ ಮಾಡುತ್ತಿರುತ್ತಾನೆ. ಈತನ ಸ್ನೇಹಿತ ಹರ್ಷಿತ್ ಕುಮಾರ್ ಬುಲ್ ಟೆಂಪಲ್ ರಸ್ತೆಯಲ್ಲಿ ಬರುವ ಉಮಾ ಟಾಕೀಸ್ ಬಳಿ ಫ್ಲವರ್ ಡೆಕೊರೇಷನ್ ಅಂಗಡಿ ಇಟ್ಟುಕೊಂಡಿರುತ್ತಾನೆ.

ಶಶಾಂಕ್ ಲವರ್ ಹರ್ಷಿತ್ ಕುಮಾರ್ ಗೆ ಪರಿಚಯವಾಗಿರುತ್ತಾರೆ. ಹರ್ಷಿತ್ ಕುಮಾರ್ ಪರಿಚಯ ಸ್ನೇಹಕ್ಕೆ ತಿರುಗಿ ಯುವತಿ ಹಾಗೂ ಹರ್ಷಿತ್ ಇಬ್ಬರು ಚಾಟ್ ಮಾಡಿಕೊಂಡಿರುತ್ತಾರೆ. ಇದು ಶಶಾಂಕ್ ಗಮನಕ್ಕೆ ಬಂದು ಪ್ರಶ್ನೆ ಮಾಡಿದ್ದಾನೆ. ಯುವತಿ ಮುಂದೆ ಹರ್ಷಿತ್ ಫೋನ್ ಕೇಳಿದಾಗ ಆತ ಕೊಡಲು ನಿರಾಕರಿಸಿದ್ದಾನೆ. ಯುವತಿ ಮೊಬೈಲ್ ಕೊಡಲು ಸೂಚಿಸಿದಾಗ ಹರ್ಷಿತ್, ಶಶಾಂಕ್ ಕೈಯಲ್ಲಿ ಮೊಬೈಲ್ ಕೊಟ್ಟಿದ್ದಾರೆ.

MOBILE

ಆರೋಪಿ ಮೊಬೈಲ್ ಪರಿಶೀಲನೆ ಮಾಡಿ ನೋಡಿದಾಗ ಹರ್ಷಿತ್ ಮತ್ತೆ ಶಶಾಂಕ್ ಲವರ್ ಚಾಟ್ ಮಾಡಿರುವು ಬೆಳಕಿಗೆ ಬರುತ್ತಿದ್ದಂತೆ ಸ್ನೇಹಿತ ನಂದನ್ ಜೊತೆ ಸೇರಿಕೊಂಡು ಹರ್ಷಿತ್ ಮಾರಕಾಸ್ತ್ರಗಳಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿ ಅಲ್ಲಿಂದ ಎಸ್ಕೇಪ್ ಆಗಿರುತ್ತಾರೆ. ಸ್ಥಳೀಯರು ಹಲ್ಲೆಗೆ ಒಳಗಾಗಿದ್ದ ಹರ್ಷಿತ್ ಗೆ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಘಟನೆ ಸಂಬಂಧ ಶಂಕರಪುರ ಪೊಲೀಸ್ ಠಾಣೆಯಲ್ಲಿ ಹರ್ಷಿತ್ ಪೋಷಕರು ದೂರು ದಾಖಲಿಸುತ್ತಾರೆ. ಪ್ರಕರಣ ಸಂಬಂಧ ಕೇಸ್ ದಾಖಲಿಸಿಕೊಂಡ ಪೊಲೀಸರು ಆರೋಪಿ ಶಶಾಂಕ್ ಹಾಗೂ ನಂದನ್ ಬಂಧಿಸಿ ಜೈಲಿಗೆ ಕಳಿಸಿದ್ದಾರೆ.

Share This Article