ಬೆಳಿಗ್ಗೆಯಷ್ಟೇ ತಮಾಷೆಯ ಟಾಸ್ಕ್‌ನಲ್ಲಿ ನಕ್ಕು ನಲಿದಿದ್ದ ಬಿಗ್‌ಬಾಸ್ (Bigg Boss Kannada) ಸ್ಪರ್ಧಿಗಳ ಮುಖದಲ್ಲಿ ನಾಮಿನೇಷನ್ (Nomination) ಹೀಟ್ ಎದ್ದು ಕಾಣುತ್ತಿದೆ. ಅದರ ಒಂದು ಝಲಕ್, JioCinema ಬಿಡುಗಡೆ ಮಾಡಿರುವ ಪ್ರೋಮೊದಲ್ಲಿದೆ.
- Advertisement 2-
‘ವಿಶೇಷ ಅಧಿಕಾರದ ಅಂಗವಾಗಿ ನಾಮಿನೇಟ್ ಮಾಡುವ ಅಧಿಕಾರ ಸ್ನೇಹಿತ್ ಅವರಿಗಷ್ಟೇ ಇರುತ್ತದೆ’ ಎಂದು ಬಿಗ್‌ಬಾಸ್ ಹೇಳಿದ್ದಾರೆ. ವಿಶೇಷ ಅಧಿಕಾರದ ಆಸನದ ಮೇಲೆ ಸ್ಟೈಲಿಶ್ ಆಗಿ ಕೂತಿರುವ ಸ್ನೇಹಿತ್ (Snehith) ಅವರ ಎದುರು ಮನೆಯ ಸದಸ್ಯರು, ತಮ್ಮನ್ನು ಸೇವ್ ಮಾಡಿ ಎಂದು ಸ್ನೇಹಿತ್ ಅವರಿಗೆ ಕನ್ವಿನ್ಸ್ ಮಾಡಲು ಪ್ರಯತ್ನಿಸುತ್ತಿದ್ದಾರೆ.
- Advertisement 3-
- Advertisement 4-
ತನಿಷಾ (Tanisha Kuppunda) ಅವರ ಪರವಾಗಿ ಕಾರ್ತಿಕ್ ವಾದ ಮಾಡಿದ್ದಾರೆ. ಅದಕ್ಕೆ ವಿರುದ್ಧವಾಗಿ ವರ್ತೂರು ಸಂತೋಷ್ ಅವರು, ‘ನಾವಿಲ್ಲಿ ತ್ಯಾಗಮೂರ್ತಿಗಳಾಗೋಕೆ ಬಂದಿಲ್ಲ. ತನಿಷಾನ ನಾನು ಬೇಕಂತ ಹೋಗಿ ತಳ್ಳಿಲ್ಲ. ಹಾಗಾಗಿ ಅವ್ರಿಗೆ ಇನ್ನೊಂದು ಚಾನ್ಸ್ ಸಿಗಲಿ ಎಂದೂ ಹೇಳಲ್ಲ’ ಎಂದು ಖಡಕ್ಕಾಗಿ ಹೇಳಿದ್ದಾರೆ.
ವರ್ತೂರ್ ಮಾತಿನಿಂದ ಖುಷಿಯಾಗಿ ನಮ್ರತಾ ಕೇಕೆ ಹಾಕಿದ್ದರೆ, ತನಿಷಾಗೆ ಶಾಕ್ ಆಗಿದೆ. ‘ವರ್ತೂರು ಅವರು ಮೊದಲ ದಿನದಿಂದಲೇ ಹೀಗೆ ಮಾತಾಡಿದ್ದರೆ ನಾನು ಒಪ್ಕೋತಾ ಇದ್ದೆ’ ಎಂದು ಕೋಪ ಮಾಡಿಕೊಂಡಿದ್ದಾರೆ. ಸ್ನೇಹಿತ್ ಕೈಗೆ ಸಿಕ್ಕಿರುವ ವಿಶೇಷ ಅಧಿಕಾರ ಹೇಗೆ ಕೆಲಸ ಮಾಡುತ್ತದೆ? ಯಾರ ನೆತ್ತಿಮೇಲೆ ತೂಗುಗತ್ತಿಯಾಗುತ್ತದೆ? ಯಾರಿಗೆ ಅಭಯಹಸ್ತವಾಗಿ ಬದಲಾಗುತ್ತದೆ? ಕಾದು ನೋಡಬೇಕು.