– ಹೆಣ್ಣು ನೋಡೋಕೆ ಬಾಡಿಗೆಗೆ ತಂದೆ, ತಾಯಿ, ಅಕ್ಕ, ಅಣ್ಣರನ್ನು ಬುಕ್ ಮಾಡ್ತಿದ್ದ ಖತರ್‌ನಾಕ್
ಮೈಸೂರು: ವಿಧವೆಯರು, ಡಿವೋರ್ಸ್ ಪಡೆದ ಮಹಿಳೆಯರನ್ನೇ ಟಾರ್ಗೆಟ್ ಮಾಡಿಕೊಂಡು ಬರೋಬರಿ 12 ಮದುವೆಯಾಗಿ 13 ನೇ ಮದುವೆಗೆ ಸಿದ್ಧವಾಗಿದ್ದ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದ ಖತರ್‌ನಾಕ್ ವಂಚಕನ ಇನ್ನಷ್ಟು ವಿಷಯಗಳು ಈಗ ಬಯಲಾಗುತ್ತಿವೆ.
Advertisement
ಬೆಂಗಳೂರು ಮೂಲದ 35 ವರ್ಷದ ಮಹೇಶ್ ಎಂಬ ಈ ಖತರ್‌ನಾಕ್ ವಂಚಕನನ್ನು ಮೈಸೂರು ಪೊಲೀಸರು ಮಂಗಳವಾರ ಬಂಧಿಸಿದ್ದರು. ವಿಚಾರಣೆ ವೇಳೆ ಇವನ ಇನ್ನಷ್ಟು ವಿಷಯಗಳು ಬಹಿರಂಗಗೊಂಡಿವೆ. ಮಹೇಶ್ ಓದಿರೋದು ಬರೀ 5 ನೇ ಕ್ಲಾಸ್. ಆದರೆ ಮಹಿಳೆಯರಿಗೆ ವಂಚಿಸುವಾಗ ನಾನು ಡಾಕ್ಟರ್, ಎಂಜಿನಿಯರ್ ಎಂದು ಪೋಸ್ ಕೊಟ್ಟಿದ್ದಾನೆ. ಇದನ್ನೂ ಓದಿ: ಮಕ್ಕಳಿಗೆ ವಿಷವುಣಿಸಿ ತಾನೂ ವಿಷ ಸೇವಿಸಿದ ತಾಯಿ!
Advertisement
Advertisement
ಶಾದಿ ಡಾಟ್ ಕಾಂ ಮೂಲಕ ಮಹಿಳೆಯರ ಸಂಪರ್ಕ ಪಡೆದು ಅವರನ್ನು ಮದುವೆಯಾಗಿ, ಮಕ್ಕಳು ಮಾಡಿ, ನಗ-ನಾಣ್ಯ ದೋಚಿ ನಾಪತ್ತೆಯಾಗುತ್ತಿದ್ದ. ಆದರೆ ಮಾರ್ಯಾದೆಗೆ ಅಂಜಿ ಇವನ ವಿರುದ್ಧ ಕಂಪ್ಲೇಂಟ್ ಕೊಡಲು ಮಹಿಳೆಯರ ಹಿಂದೇಟು ಹಾಕಿದ್ದಾರೆ.
Advertisement
ಮಹಿಳೆಯರನ್ನು ಮದ್ವೆಯಾಗುವಾಗ ತಲಾ 5 ಸಾವಿರ ಕೊಟ್ಟು ಬಾಡಿಗೆಗೆ ತಂದೆ-ತಾಯಿ, ಬಂಧು ಬಳಗವನ್ನು ಕರೆದುಕೊಂಡು ಹೋಗುತ್ತಿದ್ದ. ಒಂದೊಂದು ಮದುವೆಗೆ ಒಂದೊಂದು ಬಳಗ ಫಿಕ್ಸ್ ಮಾಡುತ್ತಿದ್ದ. ಒಟ್ಟು 12 ಮದುವೆ ಆಗಿದ್ದಾನೆ. ಈ ಪೈಕಿ 6 ಮಹಿಳೆಯರಿಗೆ ಮಕ್ಕಳನ್ನು ನೀಡಿದ್ದಾನೆ. ಇದನ್ನೂ ಓದಿ: ಆಟೋ ಚಾಲಕರ ನಿರ್ಲಕ್ಷ್ಯ ಆರೋಪ- ಬೇಡಿಕೆಗಳ ಈಡೇರಿಕೆಗೆ ಬಂದ್ ಎಚ್ಚರಿಕೆ ಕೊಟ್ಟ ಒಕ್ಕೂಟ
ಸುಲಭವಾಗಿ ಹಣ ಗಳಿಸಬಹುದು ಎನ್ನುವ ಕಾರಣಕ್ಕೆ ಮದುವೆಯನ್ನು ಛಾಳಿ ಮಾಡಿಕೊಂಡ ಇವನು ವರ್ಷಕ್ಕೆ ಸರಾಸರಿ 20 ಲಕ್ಷ ರೂ. ಹಣ ಸಂಪಾದಿಸಿದ್ದ. ಹೀಗೆ ಸಂಪಾದಿಸಿದ ಹಣದಲ್ಲಿ ಶೋಕಿ ಮಾಡುತ್ತಿದ್ದ.
Web Stories