ಮೋದಿ ಪ್ರಧಾನಿಯಾಗ್ಬೇಕೆಂದು ಕಾಳಿ ಮಾತೆಗೆ ತನ್ನ ಬೆರಳನ್ನೇ ಅರ್ಪಿಸಿದ ಅಭಿಮಾನಿ

Public TV
1 Min Read
KARWAR MODI FOLLOWER

ಕಾರವಾರ: ಅಭಿಮಾನಿಯೊಬ್ಬ ನರೇಂದ್ರ ಮೋದಿ (Narendra Modi) ಮತ್ತೆ ಪ್ರಧಾನಿಯಾಗಬೇಕು ಎಂದು ಕಾಳಿ ಮಾತೆಗೆ ತನ್ನ ಬೆರಳನ್ನೇ ತುಂಡು ಮಾಡಿ ನೀಡಿದ ಘಟನೆಯೊಬ್ಬ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಸೋನಾರವಾಡದಲ್ಲಿ ನಡೆದಿದೆ.

ಸೋನಾರವಾಡದ ಅರುಣ್ ವರ್ಣೇಕರ್ ಅವರು ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ತನ್ನ ಎಡಗೈನ ಬೆರಳನ್ನೇ ಕಾಳಿ ಮಾತೆಗೆ ಅರ್ಪಿಸಿದವರು. ಅರುಣ್ ಅವರು ಈಗಾಗಲೇ ಮೋದಿಗಾಗಿ ಗುಡಿಯನ್ನು ನಿರ್ಮಿಸಿ ಪೂಜೆ ಮಾಡುತ್ತಿದ್ದಾರೆ.

ಬೆರಳು ತುಂಡುಮಾಡಿಕೊಂಡು ರಕ್ತದಲ್ಲಿ “ಮಾ ಕಾಳಿಮಾತಾ ಮೋದಿ ಬಾಬಾಕೋ ರಕ್ಷಾ ಕರೋ”. “ಮೋದಿ ಬಾಬಾ ಪಿ.ಎಂ, 3 ಬಾರ್ 78ತಕ್ 378, 378+ ಮೇರಾ ಮೋದಿ ಬಾಬಾ ಸಬ್ಸೆ ಮಹಾನ್” ಎಂದು ಗೋಡೆ ಹಾಗೂ ಪೋಸ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ಮೋದಿ ಮೊದಲ ಬಾರಿಗೆ ಚುನಾವಣೆಗೆ ನಿಂತಾಗ ರಕ್ತದಲ್ಲಿ ಕಾಳಿಗೆ ಹರಕೆ ಕಟ್ಟಿದ್ದರು. ಇದನ್ನೂ ಓದಿ: ಪ್ರಣಾಳಿಕೆಯನ್ನೇ ಮದ್ವೆ ಕಾರ್ಡ್‌ನಲ್ಲಿ ಮುದ್ರಿಸಿದ ಪವನ್ ಕಲ್ಯಾಣ್ ಬೆಂಬಲಿಗ!

KARWAR 1

ಈ ಹಿಂದೆಯೂ ಬೆರಳು ಕೊಯ್ದುಕೊಂಡು ಮೋದಿ ಗೆಲುವಿಗಾಗಿ ಕಾಳಿ ಮಾತೆಗೆ ಹರಕೆ ನೀಡಿದ್ದರು. ಇದು ಕೊನೆಯ ಬಾರಿ ಆದ್ದರಿಂದ ಮೋದಿ ಪ್ರಧಾನಿಯಾಗಬೇಕು ಎಂದು ಬೆರಳನ್ನೇ ತುಂಡರಿಸಿ ಅರುಣ್ ಕಾಳಿಗೆ ನೀಡಿದ್ದಾರೆ.

Share This Article