ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಂಗನ ಕಾಯಿಲೆ (KFD) ಮತ್ತೆ ಉಲ್ಬಣಗೊಂಡಿದೆ. ಇಂದು ಜಿಲ್ಲೆಯ ಸಿದ್ದಾಪುರ (Siddapura) ತಾಲೂಕಿನ ಅರೆಂದೂರಿನಲ್ಲಿ 5 ವರ್ಷದ ಹೆಣ್ಣುಮಗು ಮಂಗನಕಾಯಿಲೆಯಿಂದ ಬಹು ಅಂಗಾಂಗ ವೈಫಲ್ಯದಿಂದ ಸಾವು ಕಂಡಿದೆ.
ಈ ಮೂಲಕ ಜಿಲ್ಲೆಯಲ್ಲಿ ಮಂಗನ ಕಾಯಿಲೆಯಿಂದ ಒಂಬತ್ತು ಜನ ಸಾವು ಕಂಡಿದ್ದಾರೆ. ಕೆಲವು ದಿನದಿಂದ ಜ್ವರದಿಂದ ನರಳುತ್ತಿದ್ದ ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಹೆಣ್ಣುಮಗು ಅಸುನೀಗಿದೆ. ಇದನ್ನೂ ಓದಿ: ಹೆಚ್.ಡಿ.ರೇವಣ್ಣ 4 ದಿನ ಎಸ್‌ಐಟಿ ಕಸ್ಟಡಿಗೆ
Advertisement
Advertisement
ಸಿದ್ದಾಪುರ ತಾಲೂಕಿನೊಂದರಲ್ಲೇ 90 ಮಂಗನಕಾಯಿಲೆ ಪ್ರಕರಣ ಪತ್ತೆಯಾದರೇ ಇತರೆ ತಾಲೂಕುಗಳು ಸೇರಿ ಒಟ್ಟು 99 ಪ್ರಕರಣಗಳು ಈವರೆಗೆ ಪತ್ತೆಯಾಗಿವೆ. ಇದನ್ನೂ ಓದಿ: ಇದೊಂದು ರಾಜಕೀಯ ಷಡ್ಯಂತ್ರ: ಬಂಧನ ಬಳಿಕ ಹೆಚ್.ಡಿ.ರೇವಣ್ಣ ಮೊದಲ ಪ್ರತಿಕ್ರಿಯೆ
Advertisement