ಉಡುಪಿ: ಕತ್ತರಿಸಿದ ಬಳಿಕವೂ ಮೀನೊಂದು ಜೀವಂತವಾಗಿದ್ದ ವೀಡಿಯೋ ವೈರಲಾಗಿದೆ. ಈ ಘಟನೆ ಉಡುಪಿಯ (Udupi) ಮಲ್ಪೆ ಬಂದರಿನಲ್ಲಿ (Malpe Port) ನಡೆದಿದೆ.
ಗ್ರಾಹಕರೊಬ್ಬರು ಮೊಗವೀರ ಮಹಿಳೆಯ ಬಳಿ ಬಂಗುಡೆ ಮೀನು ಖರೀದಿಸಿದ್ದಾರೆ. ಅದನ್ನು ಕತ್ತರಿಸಿ ಹದಮಾಡಿ ಕೊಡುವಂತೆ ಮಾರ್ಕೆಟಲ್ಲಿ ಹೇಳಿದ್ದಾರೆ. ಆಗ ಮಹಿಳೆ ಮೀನನ್ನು ಕತ್ತರಿಸಿ ಟಬ್‌ಗೆ ಹಾಕಿದ್ದು, ಅದರಲ್ಲೊಂದು ಮೀನು ಜೀವಂತವಾಗಿ ಒದ್ದಾಡುತ್ತಿತ್ತು.
ಈ ಜೀವಂತ ಮೀನನ್ನು ಕಂಡು ಬಂದರಿನಲ್ಲಿದ್ದವರು ನಿಬ್ಬೆರಗಾಗಿದ್ದಾರೆ. ಈ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ.

