ನವದೆಹಲಿ: ಭಾರತ ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿಯ ಕೊನೆಯ ಪಂದ್ಯವನ್ನು ಭಾರತ ಗೆದ್ದರೂ ಈ ಪಂದ್ಯದಲ್ಲಿ ಇತಿಹಾಸ ಸೃಷ್ಟಿಯಾಗಿದೆ.
ಟೆಸ್ಟ್ ಕ್ರಿಕೆಟ್ ನಲ್ಲಿ ಇನ್ನಿಂಗ್ಸ್ ಜಯ, ಇಂತಿಷ್ಟು ವಿಕೆಟ್ ಗಳಿಂದ ಜಯಗಳಿಸುವುದು ಸಾಮಾನ್ಯ. ಆದರೆ ಈ ಪಂದ್ಯದಲ್ಲಿ ಯಾವೊಂದು ತಂಡ ಇನ್ನಿಂಗ್ಸ್ ಜಯ ಗಳಿಸಲೇ ಇಲ್ಲ. ಆದರೆ ಈ ಸರಣಿಯಲ್ಲಿ ಇತ್ತಂಡಗಳು ಆಲೌಟ್ ಆಗಿರುವುದು ವಿಶೇಷ.
Advertisement
ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಎರಡು ತಂಡಗಳು ಎರಡು ಇನ್ನಿಂಗ್ಸ್ ನಲ್ಲಿ ಆಲೌಟ್ ಆಗಿರುವುದು ಇದೇ ಮೊದಲು. ಈ ಮೂಲಕ 120 ವಿಕೆಟ್ ಪತನಗೊಂಡ ಮೊದಲ ಟೆಸ್ಟ್ ಇದಾಗಿದೆ.
Advertisement
Advertisement
ಅತಿ ಹೆಚ್ಚು ವಿಕೆಟ್ ಪತನಗೊಂಡ ಮೂರು ಟೆಸ್ಟ್ ಸರಣಿಗಳು:
ಈ ಹಿಂದೆ 1999-2000ದಲ್ಲಿ ಶ್ರೀಲಂಕಾ ಮತ್ತು ಪಾಕ್ ನಡುವಿನ ಪಂದ್ಯದಲ್ಲಿ 118 ವಿಕೆಟ್‍ಪತನ ಗೊಂಡಿತ್ತು. ಈ ಸರಣಿಯನ್ನು ಶ್ರೀಲಂಕಾ ಜಯಿಸಿತ್ತು. ಭಾರತ ಮತ್ತು ಶ್ರೀಲಂಕಾ ನಡುವೆ 2015ರಲ್ಲಿ ನಡೆದ ಸರಣಿಯಲ್ಲೂ 118 ವಿಕೆಟ್ ಪತನಗೊಂಡಿತ್ತು. ಭಾರತ ಟೆಸ್ಟ್ ಸರಣಿಯನ್ನು ಜಯಗಳಿಸಿತ್ತು. 2003-04ರಲ್ಲಿ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ನಡುವಿನ ಪಂದ್ಯದಲ್ಲಿ 118 ವಿಕೆಟ್ ಪತನಗೊಂಡಿದ್ದು, ಈ ಸರಣಿಯನ್ನು ಆಸ್ಟ್ರೇಲಿಯಾ ಗೆದ್ದುಕೊಂಡಿತ್ತು.
Advertisement
ಕೇಪ್ ಟೌನ್ ನಲ್ಲಿ ನಡೆದ ಮೊದಲ ಪಂದ್ಯವನ್ನು 72 ರನ್ ಗಳಿಂದ, ಸೆಂಚೂರಿಯನ್ ನಲ್ಲಿ ನಡೆದ ಪಂದ್ಯವನ್ನು ದಕ್ಷಿಣ ಆಫ್ರಿಕಾ 135 ರನ್ ಗಳಿಂದ ಗೆದ್ದುಕೊಂಡಿತ್ತು. ಜೊಹಾನ್ಸ್ ಬರ್ಗ್ ನಲ್ಲಿ ನಡೆದ ಮೂರನೇ ಪಂದ್ಯವನ್ನು ಭಾರತ 63 ರನ್ ಗಳಿಂದ ಗೆದ್ದುಕೊಂಡಿತ್ತು.