ಗ್ಯಾರೇಜ್‌ನಲ್ಲಿ ಧಗ ಧಗ ಹೊತ್ತಿ ಉರಿದ ಬೆಂಕಿ – ಮೂರು ಲಾರಿಗಳು ಸುಟ್ಟು ಭಸ್ಮ

Public TV
1 Min Read
larry chaithraduraga

ಚಿತ್ರದುರ್ಗ: ಗ್ಯಾರೇಜ್‌ನಲ್ಲಿ ಆಕಸ್ಮಿಕ ಬೆಂಕಿಯಿಂದಾಗಿ ಮೂರು ಲಾರಿಗಳು ಆಹುತಿಯಾಗಿರುವ ದುರ್ಘಟನೆ ಚಿತ್ರದುರ್ಗದಲ್ಲಿ  ನಡೆದಿದೆ.

larry chaithraduraga 1

ಗ್ಯಾರೇಜ್‍ನಲ್ಲಿ ರಿಪೇರಿಗಾಗಿ ನಿಲ್ಲಿಸಲಾಗಿದ್ದ ಲಾರಿಗಳ ಟೈರ್‌ಗಳಿಗೆ ಬೆಂಕಿ ತಗುಲಿದ ಪರಿಣಾಮ ಲಾರಿಗಳು ಧಗ ಧಗ ಹೊತ್ತಿ ಉರಿದು ಕ್ಷಣಮಾತ್ರದಲ್ಲಿ ಸುಟ್ಟು ಕರಕಲಾಗಿವೆ. ಚಿತ್ರದುರ್ಗದಿಂದ ದಾವಣಗೆರೆಗೆ ತೆರಳುವ ಮಧ್ಯೆ ಮುರುಘಾ ಮಠದ ಬಳಿ ದುರ್ಘಟನೆ ನಡೆದಿದೆ. ಇದನ್ನೂ ಓದಿ: ಬಿಜೆಪಿ, ಕಾಂಗ್ರೆಸ್ ಹೆಸರು ಹೇಳಿ ಭವಿಷ್ಯ ನುಡಿದ ಮಕಣಾಪುರದ ದೈವ

larry chaithraduraga 2

ಬೆಂಕಿ ನಂದಿಸಲು ಅಗ್ನಿಶಾಮಕದಳ ಸಿಬ್ಬಂದಿ ಹರಸಾಹಸ ಪಟ್ಟಿದ್ದು, ಅವರ ಸಮಯಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದಂತಾಗಿದೆ. ಈ ದುರಂತ ನಡೆದ ರಸ್ತೆ ಬದಿಯೇ ಸಾಲಾಗಿ  ನೂರಾರು ಲಾರಿಗಳು, ಗೂಡಂಗಡಿಗಳು ಕೂಡ ನಿಂತಿದ್ದವು.

Chitradurga truck fire

ನಸುಕಿನ ಜಾವ ಸುಮಾರು 2 ಗಂಟೆ ಸಮಯದಲ್ಲಿ ಆಕಸ್ಮಿಕವಾಗಿ ಈ ದುರ್ಘಟನೆ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಜೀವಹಾನಿಯಾಗಿಲ್ಲ. ಯಾರೋ ಕಿಡಿಗೇಡಿಗಳು ಲಾರಿಗಳ ಟೈರ್‌ಗೆ ಬೆಂಕಿ ಹಾಕಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಖಾದಿ ತೊರೆದು ಕಾವಿ ತೊಡಲಿರುವ ಬಿಎಸ್‍ವೈ ಆಪ್ತ ಪುಟ್ಟಸ್ವಾಮಿ 

ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Share This Article
Leave a Comment

Leave a Reply

Your email address will not be published. Required fields are marked *