Bengaluru CityCrimeDistrictsKarnatakaLatestMain Post

ಪೊಲೀಸ್ ಕಮೀಷನರ್ ಕಚೇರಿ ಬಳಿಯೇ ಯುವತಿಗಾಗಿ ಮಾರಕಾಸ್ತ್ರಗಳಿಂದ ಫೈಟ್

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕ್ರೈಂ (Crime) ದಿನದಿನಕ್ಕೆ ಹೆಚ್ಚಾಗ್ತನೇ ಇದೆ. ಪುಂಡ ಪೋಕರಿಗಳಿಗೆ ಪೊಲೀಸರ ಭಯವೇ ಇಲ್ಲದಂತಾಗಿದೆ. ಹಾಡಹಗಲೇ ನಡುರಸ್ತೆಯಲ್ಲಿ ಮಾರಕಾಸ್ತ್ರಗಳು ಝಳಪಿಸುತ್ತಿವೆ.

ಹೌದು, ನಗರ ಪೊಲೀಸ್ ಕಮೀಷನರ್ ಕಚೇರಿ (Police Commissioner Office) ಯಿಂದ ಕೇವಲ ಇನ್ನೂರು ಮೀಟರ್ ದೂರದಲ್ಲಿ ಪುಂಡರ ಗುಂಪು ಹೊಡೆದಾಡಿಕೊಂಡಿದೆ. ಪಬ್‍ವೊಂದರ ಮುಂದೆ ಕೈಯಲ್ಲಿ ಲಾಂಗ್, ಮಚ್ಚು ಹಿಡಿದ ಯುವಕರ ಗುಂಪು ಯುವತಿಗಾಗಿ ನಡುರಸ್ತೆಯಲ್ಲೇ ಬಡಿದಾಡಿಕೊಂಡಿದ್ದಾರೆ. ಇದನ್ನೂಓದಿ: ವೃದ್ಧ ತಂದೆಯನ್ನು ಅಮಾನುಷವಾಗಿ ಹಲಗೆಯಿಂದ ಥಳಿಸಿದ ಪಾಪಿ ಮಗ- ಅರೆಸ್ಟ್

ತಡರಾತ್ರಿ ಯುವಕ ಮತ್ತು ಯುವತಿ ಇಲ್ಲಿನ ಸೂಜಿ ಪಬ್‍ಗೆ ಹೋಗಿದ್ರು. ಅವರು ಹೊರಗೆ ಬರೋದನ್ನೆ ಕಾದಿದ್ದ ಮತ್ತೊಂದು ಯುವಕರ ಗುಂಪು, ಏಕಾಏಕಿ ಕೈಯಲ್ಲಿ ಮಾರಕಾಸ್ತ್ರ ಹಿಡಿದು ನಡುರಸ್ತೆಯಲ್ಲೇ ಹೊಡೆದಾಡಿಕೊಂಡಿದೆ. ಎರಡು ಗುಂಪಿನ ಇಬ್ಬರು ಯುವಕರು ಒಂದೇ ಯುವತಿಯರನ್ನು ಪ್ರೀತಿ (Love) ಸುತ್ತಿದ್ದರು ಎನ್ನಲಾಗಿದೆ. ಯುವತಿಗಾಗಿ ಎರಡು ಗುಂಪಿನ ಯುವಕರು ಕುಡಿದ ಮತ್ತಿನಲ್ಲಿ ಮನಸ್ಸೋ ಇಚ್ಛೆ ವರ್ತಿಸಿದ್ದಾರೆ.

ನಡುರಸ್ತೆಯಲ್ಲೇ ಅರ್ಧ ಗಂಟೆಗಳ ಕಾಲ ಯುವಕರು ಬಡಿದಾಡಿಕೊಂಡಿದ್ದಾರೆ. ಘಟನೆ ವೀಡಿಯೋ ವೈರಲ್ ಆಗ್ತಿದ್ದಂತೆ ಎಚ್ಚೆತ್ತ ಪೊಲೀಸರು ವಿಧಾನಸೌಧ (Vidhana Soudha) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಶೋಧ ನಡೆಸಿದ್ದಾರೆ. ಇದನ್ನೂ ಓದಿ: ಕೃಷ್ಣಾನದಿಯಲ್ಲಿ ಬಾಲಕಿಯನ್ನು ಕಾಪಾಡಲು ಹೋಗಿ ಸಹೋದರರಿಬ್ಬರು ನಾಪತ್ತೆ

ಸದ್ಯ ಯುವತಿ (Girl) ಗಾಗಿ ಗಲಾಟೆ ನಡೆದಿದೆ ಅನ್ನೋ ಮಾಹಿತಿ ಲಭ್ಯವಾಗಿದ್ದು, ಆರೋಪಿಗಳಿಗೆ ಪೊಲೀಸರು ಬಲೆಬೀಸಿದ್ದಾರೆ. ಕಳೆದ ಎರಡು ದಿನಗಳ ಹಿಂದಷ್ಟೇ ಬೆಂಗಳೂರಿನ ಪುಟ್ಟೇನಹಳ್ಳಿಯಲ್ಲಿ ಯುವಕರ ಗುಂಪೊಂದು ಕೈಯಲ್ಲಿ ಲಾಂಗ್, ಡ್ರಾಗರ್ ಹಿಡಿದು ನಡುರಸ್ತೆಯಲ್ಲಿ ಕುಣಿದಾಡಿದ್ರು. ಈ ಆತಂಕ ಮಧ್ಯೆ ಕಮಿಷನ್ ಕಚೇರಿ ಬಳಿಯೇ ಘಟನೆ ನಡೆದಿರೋದು ಜನಸಾಮಾನ್ಯರಲ್ಲಿ ಆತಂಕ ಹೆಚ್ಚಿಸಿದೆ.

Live Tv

Leave a Reply

Your email address will not be published.

Back to top button