ಹಾಸನ: ಕಾಲೇಜು ವಿದ್ಯಾರ್ಥಿಗಳ (Hassan College Students) ಎರಡು ಗುಂಪುಗಳ ನಡುವೆ ಮಾತಿಗೆ ಮಾತು ಬೆಳೆದು ಪರಸ್ಪರ ಕೈಕೈ ಮಿಲಾಯಿಸಿರುವ ಘಟನೆ ಹಾಸನ ಸಿಟಿ ಬಸ್ ನಿಲ್ದಾಣದಲ್ಲಿ (Hassan City Police) ನಡೆದಿದೆ.
ಸುಮಾರು 20ಕ್ಕೂ ಹೆಚ್ಚು ಯುವಕರಿದ್ದ ಎರಡು ಗುಂಪುಗಳ ನಡುವೆ ಯುವತಿ ವಿಚಾರಕ್ಕೆ ಜಗಳ ಶುರುವಾಗಿದ್ದು, ವಿಕೋಪಕ್ಕೆ ತಿರುಗಿ ಪರಸ್ಪರ ಬಡಿದಾಡಿಕೊಂಡಿದ್ದಾರೆ. ಇದನ್ನೂ ಓದಿ: ಡಿವೋರ್ಸ್ ಬೆನ್ನಲ್ಲೇ ಬ್ರಿಟಿಷ್ ಬ್ಯೂಟಿಯೊಂದಿಗೆ ಪಾಂಡ್ಯ ಲವ್ವಿ ಡವ್ವಿ – ಯಾರು ಈ ಸುಂದರಿ?
Advertisement
Advertisement
ಯುವಕರ ನಡುವೆ ಗಲಾಟೆ ಪ್ರಾರಂಭವಾಗುತ್ತಿದ್ದಂತೆ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಆತಂಕದಿಂದ ಓಡಿ ಹೋಗಿದ್ದಾರೆ. ಗಲಾಟೆ ನಡೆಯುತ್ತಿದ್ದರೂ ಸಾರಿಗೆ ಬಸ್ ಚಾಲಕರು ಹಾಗೂ ಸಿಬ್ಬಂದಿ ಮೂಕಪ್ರೇಕ್ಷರಾಗಿ ನಿಂತಿದ್ದರು. ಗಲಾಟೆಯಲ್ಲಿ ಕೆಲ ವಿದ್ಯಾರ್ಥಿಗಳ ಬಟ್ಟೆ ಹರಿದು ಹೋಗಿದ್ದರೆ, ಇನ್ನೂ ಕೆಲವು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
Advertisement
ಇದರಿಂದ ಹಾಸನ ನಗರದ ಹಳೇ ಬಸ್ ನಿಲ್ದಾಣ ಪುಂಡರ ತಾಣವಾಗುತ್ತಿದೆಯೇ ಎಂದು ಸಾರ್ವಜನಿಕರು ನಿಲ್ದಾಣದ ಅಧಿಕಾರಿಗಳನ್ನ ಪ್ರಶ್ನೆ ಮಾಡಿದ್ದಾರೆ. ಕಾಲೇಜು ಬಿಡುತ್ತಿದ್ದಂತೆ ಮಾದಕ ವಸ್ತುಗಳನ್ನು ಸೇವಿಸಿ ಬಸ್ ನಿಲ್ದಾಣದಲ್ಲಿ ಜಮಾಯಿಸುವ ಕಾಲೇಜು ಯುವಕರ ಗುಂಪು ಯುವತಿಯರನ್ನ ಚುಡಾಯಿಸಿ ಕಿರುಕುಳ ನೀಡುವ ಆರೋಪವೂ ಕೇಳಿಬಂದಿದೆ. ಇದನ್ನೂ ಓದಿ: ವಾಲ್ಮೀಕಿ ನಿಗಮ ಹಗರಣ ಪ್ರಕರಣ; ಎಸ್‌ಐಟಿಯಿಂದ 3,072 ಪುಟಗಳ ಚಾರ್ಜ್‌ಶೀಟ್
Advertisement
ಈ ಬಗ್ಗೆ ಪೊಲೀಸರ ಗಮನಕ್ಕೆ ತಂದರೂ ಕ್ರಮಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನಾಹುತ ಸಂಭವಿಸುವ ಮುನ್ನ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.