ನವದೆಹಲಿ: ನನ್ನ ಬಗ್ಗೆ ಕೆಲ ಮಾಧ್ಯಮಗಳಲ್ಲಿ ತಪ್ಪು ವರದಿ ಬರುತ್ತಿದೆ ಎಂದು ತ್ರಿಶೂರು (Thrissur) ಬಿಜೆಪಿ ಸಂಸದ ಸುರೇಶ್ ಗೋಪಿ (Suresh Gopi) ಹೇಳಿದ್ದಾರೆ.
ಈ ಸಂಬಂಧ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಅವರು ನಾನು ಕೌನ್ಸಿಲ್ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂಬ ವರದಿ ಕೆಲ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದೆ. ಇದು ತಪ್ಪು. ಪಿಎಂ ನರೇಂದ್ರ ಮೋದಿ (PM Narendra Modi) ಅವರ ನೇತೃತ್ವದಲ್ಲಿ ನಾವು ಕೇರಳದ ಅಭಿವೃದ್ಧಿ ಮತ್ತು ಸಮೃದ್ಧಿಗೆ ಬದ್ಧರಾಗಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.
Advertisement
A few media platforms are spreading the incorrect news that I am going to resign from the Council of Ministers of the Modi Government. This is grossly incorrect. Under the leadership of PM @narendramodi Ji we are committed to the development and prosperity of Kerala ❤️ pic.twitter.com/HTmyCYY50H
— Suressh Gopi (@TheSureshGopi) June 10, 2024
ಸುರೇಶ್ ಗೋಪಿ ಅವರು ಭಾನುವಾರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ ಇಂದು ನನಗೆ ಮಂತ್ರಿ ಸ್ಥಾನ ಬೇಡ ಎಂದು ಹೇಳಿರುವುದಾಗಿ ವರದಿಯಾಗಿತ್ತು.
Advertisement
ತ್ರಿಶೂರ್ ಜನರಿಗಾಗಿ ಸಂಸದನಾಗಿ ಕೆಲಸ ಮಾಡಲು ನಾನು ಬಯಸುತ್ತೇನೆ. ಸಂಸದನಾಗಿ ಕೆಲಸ ಮಾಡುವುದೇ ನನ್ನ ಗುರಿ, ನಾನು ಏನನ್ನೂ ಕೇಳಿಲ್ಲ, ನನಗೆ ಈ ಹುದ್ದೆ ಬೇಕಾಗಿಲ್ಲ ಎಂದು ಹೇಳಿರುವಾಗಿ ವರದಿ ತಿಳಿಸಿತ್ತು. ಇದನ್ನೂ ಓದಿ: ನನಗೆ ಯಾರೂ ಹಿತಶತ್ರುಗಳಿಲ್ಲ, ನನಗೆ ನಾನೇ ಶತ್ರು, ಸೋಲಿಗೆ ನಾನೇ ಹೊಣೆ: ಡಿಕೆ ಸುರೇಶ್
Advertisement
ಸುರೇಶ್ ಗೋಪಿ ಈಗಾಗಲೇ ಕೆಲ ಚಲನಚಿತ್ರಗಳಿಗೆ ಸಹಿ ಹಾಕಿದ್ದಾರೆ. ಸಹಿ ಹಾಕಿದ ಎಲ್ಲಾ ಚಲನ ಚಿತ್ರಗಳ ಕೆಲಸ ಪೂರ್ಣಗೊಂಡ ನಂತರ ಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ವರದಿಯಾಗಿದೆ.
Advertisement