ಬೆಂಗಳೂರು: ತಮ್ಮ ಮಕ್ಕಳಿಗೆ ಪೋಷಕರು ಬುದ್ಧಿ ಹೇಳೋದು, ಹೊಡೆಯುವುದು ಸಾಮಾನ್ಯವಾಗಿ ನೋಡಿದ್ದೇವೆ. ಆದರೆ ಇಲ್ಲೊಬ್ಬ ತಂದೆ, ತಮ್ಮ ಮಗನ ಮೇಲೆ ಸಿಟ್ಟುಗೊಂಡು ಹಾಡಹಗಲೇ ಆತನಿಗೆ ಬೆಂಕಿ ಹಚ್ಚಿ ಕೊಂದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಆಜಾದ್‌ನಗರದ ನಿವಾಸಿ ಬಾಬು ಯಾನೇ ಸುರೇಂದ್ರ ಕುಮಾರ್(53) ತನ್ನ 25 ವರ್ಷದ ಮಗನನ್ನು ಕೊಂದ ಆರೋಪಿ. ಅರ್ಪಿತ್(25) ತಂದೆಯಿಂದಲೇ ಕೊಲೆಯಾದ ಮಗ. ಏಪ್ರಿಲ್ ೧ರಂದು ತಂದೆ ಮಗನಿಗೆ ಬೆಂಕಿ ಹಚ್ಚಿದ್ದು, ಇದೀಗ ಇಂದು ಮಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಹಿಜಬ್, ಕುಂಕುಮ ಇಟ್ಟಿದ್ದಕ್ಕೆ ಇಬ್ಬರು ವಿದ್ಯಾರ್ಥಿನಿಯರ ಮೇಲೆ ಶಿಕ್ಷಕ ಹಲ್ಲೆ
Advertisement
Advertisement
ಸುರೇಂದ್ರ ಕುಮಾರ್ ತಮ್ಮ ಮಗನ ಹೆಸರಿನಲ್ಲೇ ಸಾಲ ಪಡೆದು ವ್ಯವಹಾರ ಮಾಡುತ್ತಿದ್ದ. ಆದರೆ ಮಗ ಸರಿಯಾಗಿ ಲೆಕ್ಕ ನೀಡಲಿಲ್ಲವೆಮದು ರೊಚ್ಚಿಗೆದ್ದು ನಡುಬೀದಿಯಲ್ಲೇ ಬೆಂಕಿ ಹಚ್ಚಿದ್ದಾನೆ. ಗಂಭೀರ ಗಾಯಗೊಂಡಿದ್ದ ಮಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ತಂದೆಯನ್ನು ರಕ್ಷಣೆ ಮಾಡುವ ಹೇಳಿಕೆ ನೀಡಿದ್ದನು. ತನ್ನ ತಂದೆಗಾಗಿ ತಾನೇ ಬೆಂಕಿಹಚ್ಚಿ ಕೊಂಡಿದ್ದೇನೆ ಅಂತ ಹೇಳಿದ್ದಾನೆತಿತ್ತ ಘಡನೆಯ ಸಿಸಿಟಿವಿ ದೃಶ್ಯ ಪರಿಶೀಲಿಸಿದಾಗ ತಂದೆಯೇ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ.
Advertisement
ಸಾಲ ವಸೂಲಾತಿ ಮಾಡುತ್ತಿದ್ದ ಸುರೇಂದ್ರಕುಮಾರ್ ಫ್ಯಾಬ್ರಿಗೇಷನ್ ಬ್ಯುಸಿನೆಸ್ ಸಹ ಮಾಡುತ್ತಿದ್ದನು. ಅರ್ಪಿತ್ ಸಿ.ಎ (ಚಾರ್ಟರ್ಡ್ ಅಕೌಂಟೆನ್ಸಿ) ಪೂರ್ಣಗೊಳಿಸಿರಲಿಲ್ಲ. ಹೀಗಾಗಿ ಮಗನ ಹೆಸರಿನಲ್ಲೇ ಒಂದೂವರೆ ಕೋಟಿ ರೂ.ನಷ್ಟು ಸಾಲ ಪಡೆದು ವ್ಯವಹಾರ ನಡೆಸುತ್ತಿದ್ದ. ವ್ಯವಹಾರದ ಜವಾಬ್ದಾರಿಯನ್ನೂ ಮಗನಿಗೆ ನೀಡಿದ್ದ. ಆದರೆ ಲೆಕ್ಕದಲ್ಲಿ ಕೊಂಚ ಏರುಪೇರಾಗಿದ್ದು, ಯುಗಾದಿಹಬ್ಬಕ್ಕೂ ಮುನ್ನಾದಿನವೇ ಅಪ್ಪ-ಮಗನ ನಡುವೆ ಗಲಾಟೆ ನಡೆದಿದೆ. ಸಾಮಗ್ರಿಗಳಿದ್ದ ಗೋಡೌನ್‌ನಲ್ಲಿ ಶುರುವಾಗಿದ್ದ ಗಲಾಟೆ ಬೀದಿಗೆ ಬಂದಿದ್ದು, ಈ ಅನಾಹುತ ಜರುಗಿದೆ. ಇದನ್ನೂ ಓದಿ: 12 ಸಾವಿರಕ್ಕಾಗಿ ನಡುರಸ್ತೆಯಲ್ಲೇ ಪೆಟ್ರೋಲ್ ಸುರಿದು ಮಗನನ್ನೇ ಕೊಂದ ತಂದೆ
Advertisement
ಸುರೇಂದ್ರಕುಮಾರ್ ೧.೫ ಕೋಟಿ ಲೆಕ್ಕ ನೀಡುವಂತೆ ಒತ್ತಾಯಿಸಿದ್ದಾರೆ. ಆದರೆ ಅರ್ಪಿತ್ ‘ಸಾಯಿಸ್ತೀಯಾ ಸಾಯಿಸು ಬಾ ನೋಡೋಣ, ಲೆಕ್ಕ ಕೊಟ್ರು ಸಾಯಿಸ್ತೀಯಾ, ಕೊಡದಿದ್ದರೂ ಸಾಯಿಸ್ತೀಯಾ, ನಾನು ಲೆಕ್ಕ ಕೊಡೋದೇ ಇಲ್ಲ’ ಎಂದು ಪಟ್ಟು ಹಿಡಿದಿದ್ದಾನೆ. ಇದರಿಂದ ಕೋಪಗೊಂಡ ಸುರೇಂದ್ರ, ಗೋಡೌನ್‌ನಲ್ಲೇ ಇದ್ದ ಥಿನ್ನರ್ ಅನ್ನು ಅರ್ಪಿತ್ ಮೇಲೆ ಎರಚಿದ್ದಾನೆ. ಬಳಿಕ ಬೆಂಕಿ ಹಚ್ಚಲು ಮುಂದಾಗಿದ್ದಾನೆ. ಅರ್ಪಿತ್ ಕೈ ಕೆಳಗೆ ಹಿಡಿದುಕೊಂಡಿದ್ದರಿಂದ ಬೆಂಕಿ ತಗುಲಿ ಬಟ್ಟೆಗೆ ನಂತರ ದೇಹಕ್ಕೆ ಹೊತ್ತಿಕೊಂಡಿದೆ. ಇದರಿಂದ ಅರ್ಪಿತ್ ‘ನಮ್ಮಪ್ಪ ಬೆಂಕಿ ಹಚ್ಬಿಟ್ಟ’ ಎಂದು ಚೀರಿಕೊಂಡು ಓಡಿಹೋಗಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಬೆಂಕಿ ಆರಿಸಿ, ಅರ್ಪಿತ್‌ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಪೊಲಿಸರ ಮುಂದೆ ಹೇಳಿಕೆ ನೀಡಿದ್ದ ಅರ್ಪಿತ್, ತಂದೆಗಾಗಿ ತಾನೇ ಬೆಂಕಿ ಹಚ್ಚಿಕೊಂಡಿರುವುದಾಗಿ ಹೇಳಿದ್ದರು. ಸಿಸಿಟಿವಿ ಪರಿಶೀಲಿಸಿದಾಗ ತಂದೆಯೇ ಕೃತ್ಯ ಎಸಗಿರುವುದಾಗಿ ಬೆಳಕಿಗೆ ಬಂದಿದೆ. ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾನೆ. ಅರ್ಪಿತ್ ಹಾಗೂ ಪ್ರತ್ಯಕ್ಷದರ್ಶಿಗಳ ಹೇಳಿಕೆಯ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದ ಚಾಮರಾಜಪೇಟೆಯ ಪೊಲೀಸರು ತೀವ್ರ ವಿಚಾರಣೆ ನಡೆಸಿ ಸುರೇಂದ್ರನನ್ನು ಬಂಧಿಸಿದ್ದಾರೆ. ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿದ್ದು, ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಯಾರಿದು ಸುರೇಂದ್ರ?
ಮೂಲತಃ ರಾಜಾಸ್ಥಾನದ ಸುರೇಂದ್ರ, ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿಯೇ. ಇಲ್ಲಿಯೇ ಫ್ಯಾಬ್ರಿಕೇಶನ್ ಬ್ಯುಸಿನೆಸ್ ಮಾಡಿಕೊಂಡಿದ್ದು, ಮಗನಿಗೂ ಜವಾಬ್ದಾರಿ ವಹಿಸಿದ್ದರು. ವ್ಯವಹಾರದಲ್ಲಿ ನಷ್ಟವಾಗಿ, ಮಗನ ಹೆಸರಿನಲ್ಲೇ ಇತ್ತೀಚೆಗೆ ಒಂದೂವರೆ ಕೋಟಿ ಸಾಲ ಮಾಡಿ ಕೆಲಸ ಮಾಡಿಸುತ್ತಿದ್ದ.