ಚಿಕ್ಕೋಡಿ: ಸಾಮಾನ್ಯವಾಗಿ ಜಾತ್ರೆಗಳಲ್ಲಿ ಕುದುರೆ ಗಾಡಿಯ ಶರ್ತು(ಕುದುರೆ ಓಟ) ಆಯೋಜನೆ ಮಾಡೋದು ಸಾಮಾನ್ಯವಾಗಿರುತ್ತೆ. ಆದರೆ ಇಲ್ಲೊಬ್ಬ ತಂದೆ ತನ್ನ ಮಗನ ಎರಡನೇ ವರ್ಷದ ಹುಟ್ಟುಹಬ್ಬದ ನಿಮಿತ್ತ ಕುದುರೆ ಓಟ ಆಯೋಜನೆ ಮಾಡಿ ಎಲ್ಲರ ಗಮನ ಸೆಳೆದಿದ್ದಾನೆ.
ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕಂಕಣವಾಡಿ ಗ್ರಾಮ ಇಂತದೊಂದು ವಿಶೇಷ ಘಟನೆಗೆ ಸಾಕ್ಷಿಯಾಗಿದೆ. ತಂದೆ ಮಲಕಾರಿ ನಾಯಿಕವಾಡಿ ಅವರು ತಮ್ಮ ಮಗ ರಾಯಣ್ಣ ನಾಯಿಕವಾಡಿ ಬರ್ತ್‍ಡೇಗೆ ಶರ್ತು ಆಯೋಜನೆ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಅಲ್ಲದೇ ಶರ್ತು ಆಯೋಜನೆ ಮಾಡಿದ ಅವರು ಅಕ್ಕಪಕ್ಕದ ಗ್ರಾಮದ ಕುದುರೆ ಸ್ಪರ್ಧಿಗಳಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕೊನೆಗೂ ನನಸಾಯ್ತು ಅಮ್ಮ, ಮಗಳ ಕನಸು – ಒಂದೇ ವಿಮಾನಕ್ಕೆ ಇಬ್ಬರೂ ಪೈಲಟ್
Advertisement
Advertisement
20ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗಿ
ಸ್ಪರ್ಧೆಯಲ್ಲಿ ಒಟ್ಟು 20ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿ ಅದರಲ್ಲಿಯೂ ಪ್ರಥಮ, ದ್ವಿತೀಯ ಹಾಗೂ ತೃತಿಯ ಬಹುಮಾನ ನೀಡಲಾಗಿದೆ. ಪ್ರಥಮ ಬಹುಮಾನ 7,000, ದ್ವಿತೀಯ ಬಹುಮಾನ 5,000 ಮತ್ತು ತೃತಿಯ ಬಹುಮಾನ 3,000 ಸಾವಿರ ರೂ. ಜೊತೆಗೆ ಆಕರ್ಷಕ ಟ್ರೋಪಿ ನೀಡಿ ವಿಜೇತರನ್ನು ಗೌರವಿಸಲಾಗಿದೆ.
Advertisement
Advertisement
ಮಕ್ಕಳ ಬರ್ತ್‍ಡೇ ಗ್ರ್ಯಾಂಡ್ ಪಾರ್ಟಿ ಆಯೋಜನೆ ಮಾಡುವ ಜನರ ನಡುವೆ ತನ್ನ ಮಗ ಬರ್ತ್‍ಡೇಗೆ ಸ್ಪರ್ಧೆ ಆಯೋಜನೆ ಮಾಡಿದ ಮಲಕಾರಿ ಅವರ ಕಾರ್ಯಕ್ಕೆ ಈಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಸಚಿವರಾಗಿ ಒಂದು ವರ್ಷ – ಆಂಜನೇಯನ ದರ್ಶನ ಪಡೆದ ಆರಗ