ದಾವಣಗೆರೆ: ಕುಡಿದ ಮತ್ತಿನಲ್ಲಿ ತಂದೆಯೊಬ್ಬ ತನ್ನ 8 ವರ್ಷದ ಮಗನನ್ನು ಕೊಂದು ತಾನೂ ನೇಣಿಗೆ ಶರಣಾದ ಘಟನೆ ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಹುಚ್ಚಂಗಿಪುರದಲ್ಲಿ ನಡೆದಿದೆ.
Advertisement
ಶಿವಣ್ಣ ಕೊಲೆಯಾದ ದುರ್ದೈವಿ ಬಾಲಕ. ಕಳೆದ ರಾತ್ರಿ ತಂದೆ ರೇವಣಸಿದ್ದಪ್ಪ (38) ಕುಡಿದ ಮತ್ತಿನಲ್ಲಿ ಮಗನನ್ನು ಹಿಗ್ಗಾಮುಗ್ಗ ಥಳಿಸಿದ್ದಾನೆ. ಪರಿಣಾಮ ಮಗ ಶಿವಣ್ಣ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇದರಿಂದ ಭಯಗೊಂಡ ರೇವಣಸಿದ್ದಪ್ಪ ನೇಣು ಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡಿದ್ದಾನೆ.
Advertisement
Advertisement
ಮೊದಲನೇ ಹೆಂಡ್ತಿಯನ್ನ ಕೊಂದು ಜೈಲು ಪಾಲಾಗಿದ್ದ ರೇವಣಸಿದ್ದಪ್ಪ ಕೆಲ ತಿಂಗಳ ಹಿಂದೆ ಜಾಮೀನು ಪಡೆದು ಹೊರಬಂದಿದ್ದ. ಈಗ ಮಗನನ್ನು ಕೊಂದು ತಾನೂ ನೇಣಿಗೆ ಶರಣಾಗಿದ್ದಾನೆ.
Advertisement
ಘಟನಾ ಸ್ಥಳಕ್ಕೆ ಬಿಳಚೋಡು ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.