ಬೀದರ್: ನರೇಗಾ (NREGA) ಬಿಲ್ ಪಾವತಿಸಲು ಲಂಚಕ್ಕೆ (Bribe) ಬೇಡಿಕೆಯನ್ನಿಟ್ಟ ಗ್ರಾಮ ಪಂಚಾಯತಿ ಅಧಿಕಾರಿಗೆ ನೀಡಲು ಹಣವಿಲ್ಲದೆ ತನ್ನ ಎರಡು ಎತ್ತುಗಳನ್ನು (Ox) ಲಂಚದ ರೂಪದಲ್ಲಿ ನೀಡಲು ರೈತ ಮುಂದಾದ ಘಟನೆ ಬೀದರ್ (Bidar) ಜಿಲ್ಲೆಯ ಬಸವಕಲ್ಯಾಣ ಪಟ್ಟಣದ ತಾಲೂಕು ಪಂಚಾಯತ್ ಕಚೇರಿ ಬಳಿ ನಡೆದಿದೆ.
ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಬಗದೂರಿ ಗ್ರಾಮದ ರೈತ ಪ್ರಶಾಂತ ಬಿರಾದಾರ ತನ್ನ ಎರಡು ಎತ್ತುಗಳನ್ನು ಲಂಚದ ರೂಪದಲ್ಲಿ ನೀಡಲು ಮುಂದಾಗಿ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ. ಉದ್ಯೋಗ ಖಾತರಿ ಯೋಜನೆಯಲ್ಲಿ ರೈತನ ಜಮೀನಿಗೆ ತಡೆಗೋಡೆ ನಿರ್ಮಾಣ ಮಾಡಲಾಗಿದ್ದು, ಈ ಕಾಮಗಾರಿಗೆ ಒಂದು 1 ಲಕ್ಷ ರೂ. ಅನುದಾನ ಮಂಜೂರಾಗಿತ್ತು. 1 ಲಕ್ಷ ರೂ. ಅನುದಾನದ ಪೈಕಿ 55 ಸಾವಿರ ಹಣ ಮಾತ್ರ ಅಧಿಕಾರಿಗಳು ನೀಡಿದ್ದು, ಉಳಿದ 45 ಸಾವಿರ ಹಣ ನೀಡಲು ಗ್ರಾ.ಪಂ ಅಧಿಕಾರಿ (Grampanchayat Officer) ಲಂಚಕ್ಕೆ ಬೇಡಿಕೆಯಿಟ್ಟಿದ್ದಾರೆ. ಇದರಿಂದ ಬೇಸತ್ತ ರೈತ ತನ್ನ ಎರಡು ಎತ್ತುಗಳನ್ನು ಲಂಚದ ರೂಪದಲ್ಲಿ ನೀಡಲು ಮುಂದಾಗಿದ್ದಾರೆ. ಇದನ್ನೂ ಓದಿ: ಡಿಸ್ನಿಯಲ್ಲೂ ಶುರುವಾಯ್ತು ಜಾಬ್ ಕಟ್ – ಮುಂದಿನ 4 ದಿನದಲ್ಲಿ 7,000 ಉದ್ಯೋಗಿಗಳು ವಜಾ
Advertisement
Advertisement
ರೈತ ತನ್ನ ಎರಡು ಎತ್ತುಗಳ ಸಮೇತ ತಾಲೂಕು ಪಂಚಾಯತ್‌ಗೆ ಆಗಮಿಸಿದ್ದು, ಲಂಚದ ರೂಪದಲ್ಲಿ ಈ ಎರಡು ಎತ್ತುಗಳನ್ನು ತೆಗೆದುಕೊಂಡು ಉಳಿದ 45 ಸಾವಿರ ಹಣ ನೀಡಿ ಎಂದು ಪಟ್ಟು ಹಿಡಿದಿದ್ದಾರೆ. ಈ ಘಟನೆಯಿಂದಾಗಿ ಕೆಲ ಕಾಲ ತಾ.ಪಂ ಅಧಿಕಾರಿಗಳಿಗೆ ಮುಜುಗರ ಉಂಟಾಗಿದ್ದು, ಸುದ್ದಿ ತಿಳಿದು ತಾ.ಪಂ ಎಡಿ ಸಂತೋಷ್ ಚವ್ಹಾಣ್ ಸ್ಥಳಕ್ಕೆ ಬಂದು ರೈತನಿಗೆ ಬಿಲ್ ಪಾವತಿಸುವುದಾಗಿ ಭರವಸೆ ನೀಡಿ ರೈತನನ್ನು ಮನೆಗೆ ಕಳುಹಿಸಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ಪ್ರತಿಷ್ಠಿತ ಉದ್ಯಮಿ ಗಡಿಪಾರು!
Advertisement