– ಬೆಳಗಾವಿಯಲ್ಲಿ ಭೂ ಸ್ವಾಧೀನ ವಿರುದ್ಧ ಹೋರಾಟ
– ಬೆಂಕಿ ಹಚ್ಚಿಕೊಂಡ ರೈತ
ಬೆಳಗಾವಿ: ಇಲ್ಲಿನ ಮಚ್ಚೆ-ಹಲಗಾ ಬೈಪಾಸ್ ರಸ್ತೆ ಕಾಮಗಾರಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರ ವಿರುದ್ಧ ಪೊಲೀಸರು ದಬ್ಬಾಳಿಕೆ ನಡೆಸಿರುವ ಘಟನೆ ನಡೆದಿದೆ.
ರೈತರ ವಿರೋಧದ ನಡುವೆಯೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪೊಲೀಸ್ ಬಂದೋಬಸ್ತ್‌ನೊಂದಿಗೆ ಕಾಮಗಾರಿ ಆರಂಭಿಸಲು ಮುಂದಾಗಿದೆ. ಕಾಮಗಾರಿಗೆ ಸರ್ವೆ ಆದ ಜಮೀನು ಬಿಟ್ಟು ಬೇರೆ ಜಮೀನು ತೆಗೆದುಕೊಂಡಿದ್ದಾರೆಂದು ರೈತರು ವಿರೋಧ ವ್ಯಕ್ತಪಡಿಸಿದ್ದಾರೆ. ಫಲವತ್ತಾದ ಜಮೀನು ಬಿಟ್ಟುಕೊಡುವುದಿಲ್ಲ ಎಂದು ರೈತರ ಪಟ್ಟು ಹಿಡಿದು ಪ್ರತಿಭಟನೆ ನಡೆಸಿದರು. ಇದನ್ನೂ ಓದಿ: ಅಪ್ಪು ನಟನೆಯ ಚಿತ್ರದ ಶೀರ್ಷಿಕೆಗಳಲ್ಲೇ ಗೀತೆ ರಚನೆ ಮಾಡಿದ ತಂದೆ, ಜೀವ ತುಂಬಿದ ಮಗಳು
ಇದರಿಂದ ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ಸೃಷ್ಟಿಯಾಯಿತು. ಪೊಲೀಸರ ವಿರುದ್ಧ ರೈತರು, ಮಹಿಳೆಯರು ಆಕ್ರೋಶ ಹೊರಹಾಕಿದರು. ಕಂಕುಳಲ್ಲಿ ಹಸುಗೂಸನ್ನು ಕರೆದುಕೊಂಡು ಬಂದು ರೈತ ಮಹಿಳೆ ಕಣ್ಣೀರು ಹಾಕಿದರು. ಆದರೂ ಪೊಲೀಸರು, ಎರಡು ಪ್ರತ್ಯೇಕ ವಾಹನದಲ್ಲಿ ರೈತರನ್ನು ವಶಕ್ಕೆ ಪಡೆದರು. ಪೊಲೀಸರ ದಬ್ಬಾಳಿಕೆ ವಿರುದ್ಧ ರೈತರು ಕಿಡಿಕಾರಿದರು.
ಪೊಲೀಸರ ಮುಂದೆಯೇ ಕುಡಗೋಲಿನಿಂದ ಕೊಯ್ದುಕೊಂಡು ರೈತನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆಯಿತು. ರೈತನ ಕೈಯಿಂದ ಕುಡಗೋಲು ಕಸಿದುಕೊಳ್ಳಲು ಪೊಲೀಸರು ಹರಸಾಹಸ ಪಟ್ಟರು. ಇತ್ತ ರಸ್ತೆ ಕಾಮಗಾರಿ ವಿರೋಧಿಸಿ ರೈತರ ಪುತ್ರರೊಬ್ಬರು ಮರ ಏರಿ ಕುಳಿತು ಪ್ರತಿಭಟನೆ ನಡೆಸಿದರು. ಇದನ್ನೂ ಓದಿ: ವಿವಾಹ ಮುಗಿಸಿ ವಾಪಸ್ಸಾಗುತ್ತಿದ್ದ ನವಜೋಡಿಗಳಿದ್ದ ವಾಹನ ಪಲ್ಟಿ!
ಜಮೀನು ಮಾಲೀಕ ಆಕಾಶ್ ಅನಗೋಳಕರ ಅವರು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದರು. ಆತ್ಮಹತ್ಯೆಗೆ ಯತ್ನಿಸುತ್ತಿದ್ದಂತೆ ರೈತರು ಪೊಲೀಸರ ವಿರುದ್ಧ ತಿರುಗಿ ಬಿದ್ದರು.