ನಟ ಯಶ್ (Yash) ಹುಟ್ಟು ಹಬ್ಬದಂದು ಬ್ಯಾನರ್ ಕಟ್ಟಲು ಹೋಗಿ ಆಗಿದ್ದ ದುರಂತ ಮಾಸುವ ಮುನ್ನವೇ, ಯಶ್ ಅಭಿಮಾನಿಯ ಕಾಲು ಮೇಲೆ ಕಾರು ಹಾದು ಮತ್ತೊಂದು ಅವಘಡ (Accident) ಸಂಭವಿಸಿದೆ. ಯಶ್ ನೋಡುವುದಕ್ಕಾಗಿ ಅವರ ಕಾರು ಹಿಂದೆಯೇ ಓಡುತ್ತಿದ್ದ ಅಭಿಮಾನಿಯ ಕಾಲು ಮೇಲೆ ಕಾರು ಹತ್ತಿ, ಕಾಲು ರಕ್ತಸಿಕ್ತವಾಗಿದೆ.
ಬಳ್ಳಾರಿಯ (Bellary) ನಗರದ ಹೊರವಲಯದಲ್ಲಿರುವ ಬಾಲಾಜಿನಗರದಲ್ಲಿ ಈ ಘಟನೆ ನಡೆದಿದ್ದು, ಅಲ್ಲಿಗೆ ಯಶ್ ದೇವಸ್ಥಾನದ ಉದ್ಘಾಟನೆಗೆ ಬಂದಿದ್ದರು. ಬಾಲಾಜಿ ನಗರದಲ್ಲಿ ನೂತನವಾಗಿ ನಿರ್ಮಾಣವಾದ ಅಮೃತೇಶ್ವರ ಸ್ಪಟಿಕ ಲಿಂಗ ದೇವಸ್ಥಾನ ಉದ್ಘಾಟನೆ ಕಾರ್ಯಕ್ರಮಕ್ಕೆ ಬಂದಿದ್ದ ವೇಳೆ, ಯಶ್ ಅಭಿಮಾನಿ ಕಾಲಿನ ಮೇಲೆ ಕಾರಿನ ಚಕ್ರ ಉರುಳಿದೆ.
ಯಶ್ ತೆರಳುವ ಸಮಯದಲ್ಲಿ ತಮ್ಮ ನೆಚ್ಚಿನ ನಟನನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ಅಭಿಮಾನಿಗಳು ಕಾರ್ ಹಿಂಬಾಲಿಸಿದ್ದರು. ಈ ವೇಳೆ ಯಶ್ ಬೆಂಗಾವಲು ವಾಹನ ಅಭಿಮಾನಿ ಕಾಲಿನ ಮೇಲೆ ಹರಿದಿದೆ.
ಬಳ್ಳಾರಿ ಜಿಲ್ಲೆಯ ಸಿರಗುಪ್ಪಾ ಪಟ್ಟಣದ ವಸಂತ (Vasanth) ಎಂಬ ಯುವಕನ ಮೇಲೆ ಕಾರು ಹರಿದಿದ್ದು, ಕೂಡಲೇ ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ. ಕಾರ್ ಹಿಂಬಾಲಿಸಿ ಬರವಾಗ ಈ ಘಟನೆ ನಡೆದಿದೆ.