ಬೆಂಗಳೂರು: ಕಿಡ್ನಾಪ್ ಹಾಗೂ ಕೊಲೆ ಪ್ರಕರಣದಲ್ಲಿ ಜೈಲುಪಾಲಾದ ಸ್ಯಾಂಡಲ್‌ವುಡ್ ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ (Challenging Star Darshan) ಅಭಿಮಾನಿಯೊಬ್ಬ ಧೈರ್ಯ ಹೇಳಿದ್ದಾನೆ.
ಜೈಲು ಶಿಕ್ಷಗೆ ಗುರಿಯಾದ ದರ್ಶನ್ ಪೊಲೀಸ್ ವಾಹನದಲ್ಲಿ ಕುಳಿತಿಕೊಂಡಿದ್ದ ಸಂದರ್ಣದಲ್ಲಿ ಅಭಿಮಾನಿ ಧೈರ್ಯ ಹೇಳಿದ್ದಾನೆ. ಈ ಥರದ್ದು ಬೇಜಾನ್ ಆಗಿದೆ ಸರ್. ತಲೆ ಕೆಡಿಸಿಕೊಳ್ಳಬೇಡಿ ಸರ್.. ಅಭಿಮಾನಿಗಳು ಹಿಂದೆ ಬರುತ್ತಾರೆ.. ನೀವು ಆರಾಮಾಗಿ ಇರಿ ಎಂದು ಹೇಳಿದ್ದಾನೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕಿಡ್ನಾಪ್ ಹಾಗೂ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನವಾಗಿದೆ. ಈ ಬೆನ್ನಲ್ಲೇ ಅಭಿಮಾನಿಗಳು ದರ್ಶನ್ ಪರ ನಿಂತಿದ್ದಾರೆ. ನಮ್ಮ ಬಾಸ್ ತಪ್ಪು ಮಾಡಿಲ್ಲ ಎಂದು ಹೇಳುತ್ತಲೇ ಬಂದಿದ್ದಾರೆ. ಇದೀಗ ಕೋರ್ಟ್ ನಟನನ್ನು ಜೈಲಿಗೆ ಒಪ್ಪಿಸುತ್ತಿದ್ದಂತೆಯೇ ಧೈರ್ಯ ಕೂಡ ಹೇಳಿದ್ದಾರೆ. ಇದನ್ನೂ ಓದಿ: 13 ವರ್ಷಗಳ ನಂತರ ‘ದಾಸ’ ಮತ್ತೆ ಜೈಲುಪಾಲು!
2ನೇ ಬಾರಿ ಜೈಲಿಗೆ: ದರ್ಶನ್ ಜೈಲುವಾಸ ಅನುಭವಿಸಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಒಂದು ಬಾರಿ ಜೈಲು ಶಿಕ್ಷೆ ಅನುಭವಿಸಿದವರಾಗಿದ್ದಾರೆ. ಪತ್ನಿ ವಿಜಯಲಕ್ಷ್ಮಿ ಮೇಲೆ ಹಲ್ಲೆ ಹಾಗೂ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿತ್ತು. ಈ ಪ್ರಕರಣದಲ್ಲಿ ಅಂದು ವಿಜಯನಗರ ಪೊಲೀಸರು ದರ್ಶನ್ (Challening Star Darshan) ಅವರನ್ನು ಬಂಧಿಸಿ ಜೈಲಿಗಟ್ಟಿದ್ದರು. ಸುಮಾರು ತಿಂಗಳ ಕಾಲ ಜೈಲುವಾಸ ಅನುಭವಿಸಿ 2011 ಅಕ್ಟೋಬರ್ ನಲ್ಲಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು. ಇದೀಗ ಕಿಡ್ನಾಪ್ ಹಾಗೂ ಕೊಲೆ ಪ್ರಕರಣದಲ್ಲಿ 13 ವರ್ಷಗಳ ನಂತರ ಎರಡನೇ ಬಾರಿಗೆ ದರ್ಶನ್ ಜೈಲು ಸೇರಿದ್ದಾರೆ.