ಲಕ್ನೋ: ಸೂಪರ್ ಸಂಡೇನಲ್ಲಿ ಇಂಗ್ಲೆಂಡ್ (England) ವಿರುದ್ಧ ನಡೆಯುತ್ತಿರುವ ಪಂದ್ಯವು ರೋಚಕತೆಯಿಂದ ಕೂಡಿದೆ. 20 ವರ್ಷಗಳ ಬಳಿಕ ಟೀಂ ಇಂಡಿಯಾ (Team India) ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ಮಣಿಸಿ ಹೊಸ ಇತಿಹಾಸ ನಿರ್ಮಿಸುವ ತವಕದಲ್ಲಿದೆ.
A fan travelled 12,445km from the USA to Lucknow to witness King Kohli.
– The one true ???? pic.twitter.com/wB5T4AqMrD
— Mufaddal Vohra (@mufaddal_vohra) October 29, 2023
Advertisement
ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ಇಂಗ್ಲೆಂಡ್ ಬ್ಯಾಟಿಂಗ್ ಮಾಡುವ ಅವಕಾಶವನ್ನು ಟೀಂ ಇಂಡಿಯಾಕ್ಕೆ ಬಿಟ್ಟುಕೊಟ್ಟಿತು. ಉತ್ತಮ ಆರಂಭ ಪಡೆಯುವ ನಿರೀಕ್ಷೆಯಲ್ಲಿದ್ದ ಟೀಂ ಇಂಡಿಯಾ, 11.5 ಓವರ್‌ಗಳಲ್ಲಿ 40 ರನ್‌ಗಳಿಗೆ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. ವಿಶ್ವದಾಖಲೆಯ ಶತಕ ಸಿಡಿಸುವ ಭರವಸೆ ಮೂಡಿಸಿದ್ದ ಕಿಂಗ್ ಕೊಹ್ಲಿ (Virat Kohli) 9 ಎಸೆತಗಳಲ್ಲಿ 1 ರನ್ ಸಹ ಗಳಿಸದೇ ನಿರಾಸೆ ಮೂಡಿಸಿದರು. ಇದು ಭಾರತೀಯ ಅಭಿಮಾನಿಗಳಿಗೆ ಮಾತ್ರವಲ್ಲದೇ ವಿದೇಶಗಳಿಂದ ಬಂದಿದ್ದ ಅಭಿಮಾನಿಗಳಲ್ಲೂ ನಿರಾಸೆ ತರಿಸಿತ್ತು.
Advertisement
Advertisement
ಲಕ್ನೋ ಕ್ರೀಡಾಂಗಣದಲ್ಲಿ ಕಿಂಗ್ ಕೊಹ್ಲಿ ಶತಕ ಸಿಡಿಸುತ್ತಾರೆ ಎಂಬ ಆಸೆಯಿಂದಲೇ ಅಮೆರಿಕದಿಂದ 12,445 ಕಿಮೀ (7,732 ಮೈಲು) ದೂರ ಪ್ರಯಾಣ ಮಾಡಿ ಅಭಿಮಾನಿಯೊಬ್ಬರು ಮ್ಯಾಚ್ ನೋಡಲು ಬಂದಿದ್ದಾರೆ. ಆದ್ರೆ ಕೊಹ್ಲಿ ಒಂದು ರನ್ ಕೂಡ ಗಳಿಸದೇ ಶೂನ್ಯಕ್ಕೆ ಔಟಾಗಿದ್ದು, ಅಮಾನಿಗಳಿಗೆ (Kohli Fans) ಅರಗಿಸಿಕೊಳ್ಳಲಾರದಷ್ಟು ಬೇಸರವಾಗಿದೆ. ಇದನ್ನೂ ಓದಿ: ಬಾಂಗ್ಲಾ ವಿರುದ್ಧ 87 ರನ್‌ಗಳ ಭರ್ಜರಿ ಜಯ – ಬಲಿಷ್ಠ ಇಂಗ್ಲೆಂಡ್ ತಂಡವನ್ನೇ ಹಿಂದಿಕ್ಕಿದ ಡಚ್ಚರು
Advertisement
2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಇಂಡಿಯಾ ಸ್ಟಾರ್ ಪ್ಲೇಯರ್ ವಿರಾಟ್ ಕೊಹ್ಲಿ ಬೆಸ್ಟ್ ಫಾರ್ಮ್‌ನಲ್ಲಿದ್ದು, 6 ಪಂದ್ಯಗಳಲ್ಲಿ 1 ಶತಕ ಸೇರಿ ಒಟ್ಟು 354 ರನ್ ಗಳಿಸಿದ್ದಾರೆ. ಈ ಮೂಲಕ ಪ್ರಸ್ತುತ ಟೂರ್ನಿಯಲ್ಲಿ ಅತಿಹೆಚ್ಚು ರನ್ ಗಳಿಸಿದ ಆಟಗಾರರ ಪೈಕಿ 5ನೇ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: World Cup 2023: ನಾನು 100% ಕಿವೀಸ್ ಎಂದ ಬೆಂಗಳೂರು ಯುವಕ ರಚಿನ್ ರವೀಂದ್ರ
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ 29 ಟೆಸ್ಟ್ ಶತಕ, 1 T20 ಶತಕ ಹಾಗೂ 48 ಏಕದಿನ ಕ್ರಿಕೆಟ್ ಶತಕ ಸೇರಿ ಒಟ್ಟು 78 ಶತಕಗಳನ್ನು ಸಿಡಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ ತಮ್ಮ ಏಕದಿನ ಕ್ರಿಕೆಟ್‌ನಲ್ಲಿ 49ನೇ ಶತಕ ಸಿಡಿಸುವ ಮೂಲಕ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ದಾಖಲೆಯನ್ನ ಸರಿಗಟ್ಟುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದ್ರೆ ಅಭಿಮಾನಿಗಳ ಕನಸು ಹುಸಿಯಾಗಿದೆ. ಇದನ್ನೂ ಓದಿ: World Cup 2023: ಸಿಕ್ಸರ್, ಬೌಂಡರಿಗಳ ಸುರಿಮಳೆ – ಭಾರತದ ನೆಲದಲ್ಲಿ ಇತಿಹಾಸ ಸೃಷ್ಟಿಸಿದ ಆಸೀಸ್
Web Stories