ಯಶ್ ಮನೆಮುಂದೆ ಸ್ಟ್ರೈಕ್ ಮಾಡುವುದಾಗಿ ಬೆದರಿಸಿದ ಫ್ಯಾನ್

Public TV
1 Min Read
Yash 2

ರಾಕಿಂಗ್ ಸ್ಟಾರ್ ಯಶ್ (Yash) ಮನೆಯ ಮುಂದೆ ಧರಣಿ ಕೂರುವುದಾಗಿ ಅಭಿಮಾನಿಯೊಬ್ಬ (fan) ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾನೆ. ಅದನ್ನು ರಾಧಿಕಾ ಪಂಡಿತ್ (Radhika Pandit) ಗಮನಕ್ಕೂ ತಂದಿದ್ದಾನೆ. ‘ಅತ್ತಿಗೆ, ಆದಷ್ಟು ಬೇಗ ಯಶ್ ಅವರ ಮುಂದಿನ ಚಿತ್ರದ ಅಪ್‍ ಡೇಟ್ ಕೊಡಿ. ಕೊಡದೇ ಇದ್ದರೆ ಸ್ಟ್ರೈಕ್ ಮಾಡುತ್ತೇನೆ’ ಎಂದು ಅವನು ಬರೆದಿದ್ದಾನೆ.

yash 1

ಕೆಜಿಎಫ್ 2 ಸಿನಿಮಾದ ನಂತರ ಯಶ್ ನಡೆ ನಿಗೂಢವಾಗಿದೆ. ಯಾವ ಭಾಷೆಯಲ್ಲಿ, ಯಾರ ನಿರ್ದೇಶನದಲ್ಲಿ ಯಶ್ ಸಿನಿಮಾ ಮಾಡಲಿದ್ದಾರೆ ಎನ್ನುವುದು ಸಿನಿಮಾದಷ್ಟೇ ಸಸ್ಪೆನ್ಸ್ ಆಗಿದೆ. ಹಲವಾರು ಹೆಸರುಗಳು ಓಡುತ್ತಿದ್ದರೂ, ಈವರೆಗೂ ಯಶ್ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಸೂಕ್ತ ಸಮಯದಲ್ಲಿ ತಿಳಿಸುತ್ತೇನೆ ಎಂದು ಹೇಳಿ ಟೂರ್ ಮಾಡುತ್ತಿದ್ದಾರೆ. ಹಾಗಾಗಿ ಅಭಿಮಾನಿ ಸಿಟ್ಟಿಗೆದ್ದಿದ್ಧಾನೆ. ಇದನ್ನೂ ಓದಿ: ಅವಳಿ ಮಕ್ಕಳ ಮುದ್ದಾದ ಫೋಟೋ ಹಂಚಿಕೊಂಡ ಅಮೂಲ್ಯ

Yash

ಈಗಾಗಲೇ ಯಶ್ ಜೊತೆ ಹಲವಾರು ನಿರ್ದೇಶಕರ ಹೆಸರು ಕೇಳಿ ಬಂದಿದೆ. ನಿರ್ಮಾಣ ಸಂಸ್ಥೆಗಳ ಹೆಸರೂ ಜೊತೆಯಾಗಿದೆ. ಅಲ್ಲದೇ, ಯಶ್ ಅವರೇ ನಿರ್ಮಾಣ ಸಂಸ್ಥೆಯೊಂದನ್ನು ಶುರು ಮಾಡಿ, ಆ ಮೂಲಕ ಚಿತ್ರ ನಿರ್ಮಾಣಕ್ಕೆ ಇಳಿಯಲಿದ್ದಾರೆ ಎಂದೂ ಹೇಳಲಾಗುತ್ತಿದೆ. ಏನೇ ಸುದ್ದಿ ಬಂದರೂ, ಅವುಗಳು ಅಧಿಕೃತವಾಗುತ್ತಿಲ್ಲ. ಹಾಗಾಗಿ ಸಹಜವಾಗಿಯೂ ಅಭಿಮಾನಿಗೆ ಕೋಪ ಬಂದಿದೆ.

Share This Article