ರಾಯಚೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (BY Vijayendra) ಮುಂದಿನ ಸಿಎಂ ಆಗಬೇಕೆಂದು ಅಭಿಮಾನಿಯೊಬ್ಬರು ಮಹಾಕುಂಭಮೇಳದಲ್ಲಿ (Maha kumbhamela) ಸಂಕಲ್ಪ ಪೂಜೆ ಮಾಡಿಸಿದ್ದಾರೆ.ಇದನ್ನೂ ಓದಿ: ರಾತ್ರಿ ಲೈಟ್ ಹಾಕಿರೋ ಮನೆಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ – ಪತಿ ಕಾರ್ಯಕ್ಕೆ ಹೆಂಡ್ತಿ, ಸ್ನೇಹಿತರ ಸಾಥ್!
Advertisement
ರಾಯಚೂರಿನ (Raichuru) ಮಸ್ಕಿ ತಾಲೂಕಿನ ಅಡವಿಬಾವಿ ತಾಂಡದ ನಾಗರಾಜ್ ಪವಾರ್ ವಿಜಯೇಂದ್ರ ಅವರ ಅಪ್ಪಟ ಅಭಿಮಾನಿಯಾಗಿದ್ದು, ವಿಜಯೇಂದ್ರ ಸಿಎಂ ಆಗುವವರೆಗೆ ಪಾದರಕ್ಷೆ ಧರಿಸಲ್ಲ ಎಂದು ಶಪಥ ಮಾಡಿ ಬರಿಗಾಲಲ್ಲಿ ಓಡಾಡುತ್ತಿದ್ದಾರೆ. ಕರ್ನಾಟಕದ ಭವಿಷ್ಯದ ಮುಖ್ಯಮಂತ್ರಿ ಬಿವೈ ವಿಜಯೇಂದ್ರ ಎಂದುಕೊಂಡಿರುವ ಅಪ್ಪಟ ಅಭಿಮಾನಿ ರಾಯಚೂರಿನಿಂದ ಸುಮಾರು 2,000 ಕಿ.ಮೀ ಪ್ರಯಾಣ ಬೆಳೆಸಿ ಪುಣ್ಯಕ್ಷೇತ್ರ ಪ್ರಯಾಗರಾಜ್‌ನಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
Advertisement
ಪ್ರಧಾನಿ ನರೇಂದ್ರ ಮೋದಿಯ ಅಪ್ಪಟ ಅಭಿಮಾನಿಯೂ ಆಗಿರುವ ಇವರು, ಈ ಹಿಂದೆ ಮೋದಿಯ ದೀರ್ಘಾಯುಷ್ಯಕ್ಕಾಗಿ ಮಸ್ಕಿಯಿಂದ ಮಂತ್ರಾಲಯಕ್ಕೆ 150 ಕಿ.ಮೀ ಪಾದಯಾತ್ರೆ ಮಾಡಿ ಅಭಿಮಾನ ಮೆರೆದಿದ್ದರು.ಇದನ್ನೂ ಓದಿ: ಉದ್ಯಮಿ ಜೊತೆ ಮದುವೆಯಾದ ‘ದಿ ಗೋಟ್’ ಚಿತ್ರದ ನಟಿ ಪಾರ್ವತಿ ನಾಯರ್