ಹಾಲಿವುಡ್ ಖ್ಯಾತ ನಿರ್ಮಾಪಕ ಜೇಮ್ಸ್ ಮೊರೋಸಿನ್ ತನ್ನ ಅಪ್ಪನನ್ನು ಹುಡುಗಿ ಎಂದು ತಿಳಿದು ಸೋಶಿಯಲ್ ಮೀಡಿಯಾದಲ್ಲಿ ಚಾಟ್ ಮಾಡಿರುವ ಹಾಸ್ಯ ಘಟನೆಯೊಂದು ನ್ಯೂಯಾರ್ಕ್‍ನಲ್ಲಿ ನಡೆದಿದೆ.
ಕೆಲವು ತಂದೆ-ತಾಯಿಗೆ ಸೋಶಿಯಲ್ ಮೀಡಿಯಾ ಬಂದ ಮೇಲೆ ತಮ್ಮ ಮಕ್ಕಳ ಬಗ್ಗೆ ಅನುಮಾನ ಇರುತ್ತೆ. ಅದರಂತೆ ಮೊರೋಸಿನ್ ಅವರ ತಂದೆಗೂ ತನ್ನ ಮಗನ ನಡವಳಿಕೆ ಬಗ್ಗೆ ಅನುಮಾನ ಬಂದಿದೆ. ಅಲ್ಲದೆ ಆತ ತನ್ನ ತಂದೆಯನ್ನು ಫೇಸ್‍ಬುಕ್‍ನಿಂದ ಬ್ಲಾಕ್ ಮಾಡಿದ್ದ. ಇದನ್ನು ತಿಳಿದ ಮೊರೋಸಿನ್ ತಂದೆ ಸುಂದರ ಹುಡುಗಿ ಹೆಸರಿನಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿದ್ದಾರೆ. ಇದನ್ನೂ ಓದಿ: ಆಂಡ್ರಾಯ್ಡ್ ಬಳಕೆದಾರಿಗೆ ಮೋಸ ಮಾಡಿ ಸಿಕ್ಕಿಬಿದ್ದ ಗೂಗಲ್
Advertisement
Advertisement
ಈ ಫೇಕ್ ಅಕಾಂಟ್ ಮೂಲಕವೇ ಮಗನಿಗೆ ಫ್ರೆಂಡ್ ರಿಕ್ವಸ್ಟ್ ಕಳಿಸಿದ್ದಾರೆ. ಸುಂದರ ಹುಡುಗಿ ಮುಖ ನೋಡಿದ ಮೊರೋಸಿನ್ ಫ್ರೆಂಡ್ ರಿಕ್ವಸ್ಟ್ ಒಪ್ಪಿಕೊಂಡು ಮಾಡಿ ಚಾಟ್ ಮಾಡಲು ಪ್ರಾರಂಭ ಮಾಡುತ್ತಾನೆ. ಇದೇ ರೀತಿ ಚಾಟ್ ಮಾಡುತ್ತ ಪ್ರೇಮ ಸಂದೇಶ, ಫೋಟೋಗಳ ಶೇರ್ ಮಾಡಿಕೊಂಡಿದ್ದಾನೆ. ಕೊನೆಯಾದಾಗಿ ನಿಮ್ಮನ್ನು ನೋಡಬೇಕು ಎಂದು ಕೇಳಿದಾಗ ಅವರ ತಂದೆಯೇ ಎದುರು ಬಂದಿರುವುದನ್ನು ಕಂಡು ಶಾಕ್ ಆಗಿದ್ದೆ ಎಂದು ಮೊರೋಸಿನ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
Advertisement
Advertisement
ಮೊರೋಸಿನ್ ನಿರ್ಮಾಣ ಮಾಡಿರುವ ‘ಐ ಲವ್ ಮೈ ಡ್ಯಾಡ್’ ಎಂಬ ಹಾಲಿವುಡ್ ಸಿನಿಮಾದಲ್ಲಿ ಬೆಕ್ಕಾ ಎನ್ನುವ ಪಾತ್ರಧಾರಿಯನ್ನು ಹೀರೋ ಲವ್ ಮಾಡುವ ಕಥೆ ತನ್ನ ಅಸಲಿ ಕಥೆ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದರು.
ಈ ಕುರಿತು ಮಾತನಾಡಿದ ಮೊರೋಸಿನ್, ನಾನು ಈ ಹಿಂದೆ ನನ್ನ ಅಪ್ಪನನ್ನು ಹುಡುಗಿ ಎಂದು ತಿಳಿದು ಚಾಟ್ ಮಾಡಿದ್ದೆ. ಆಗ ಅವರು ಬೆಕ್ಕಾ ಎಂದು ಹೆಸರಿಟ್ಟುಕೊಂಡು ನನ್ನ ಜೊತೆ ಚಾಟ್ ಮಾಡುತ್ತಿದ್ದರು. ನಾನು ಬೆಕ್ಕಾಳನ್ನು ತುಂಬಾ ಪ್ರೀತಿಸಿದ್ದೆ, ಆದರೆ ಅದು ನನ್ನ ಅಪ್ಪ ಎಂದು ತಿಳಿದು ಆಕಾಶವೇ ತಲೆ ಮೇಲೆ ಬಿದ್ದಂತೆ ಆಯ್ತು ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ಗಂಡನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಊರೆಲ್ಲಾ ಅರಚಾಡಿ ಹೈ-ಡ್ರಾಮಾ ಮಾಡಿದ ಪತ್ನಿ
ಅದಕ್ಕೆ ಯಾವುದೇ ಹುಡುಗಿಯ ಪ್ರೊಫೈಲ್ ಫ್ರೆಂಡ್ ರಿಕ್ವಸ್ಟ್ ಬಂದ್ರೆ ಸರಿಯಾಗಿ ಚೆಕ್ ಮಾಡಿ. ಇಲ್ಲದಿದ್ದರೆ ನನ್ನ ಅಪ್ಪನಂತೆ ಕಿಲಾಡಿಯಂಥ ಅಪ್ಪ ಇರುತ್ತಾರೆ ಎಂದು ನಕ್ಕಿದ್ದಾರೆ.