ಅತೀ ಚಿಕ್ಕ ವಯಸ್ಸಿನಲ್ಲೇ ಅಗಾಧ ಸಾಧನೆ ಮಾಡಿರುವ, ಸದ್ಯ ಬಾಲಿವುಡ್ ನಲ್ಲೂ ಬ್ಯುಸಿಯಾಗಿರುವ ತಮಿಳಿನ ಯುವ ಸಂಗೀತ ನಿರ್ದೇಶಕ ಅನಿರುದ್ಧ (Aniruddha) ಕೊನೆಗೂ ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಗಳನ್ನು ಬಿಚ್ಚಿಟ್ಟಿದ್ದಾರೆ. ಖಾಸಗಿ ಫೋಟೋ ಲೀಕ್ ಮತ್ತು ಮುರಿದ ಪ್ರೇಮದ ಬಗ್ಗೆ ಮಾತನಾಡಿದ್ದಾರೆ.
ಹಲವು ವರ್ಷಗಳ ಹಿಂದೆ ಅನಿರುದ್ಧ ಮತ್ತು ನಟಿ ಆಂಡ್ರಿಯಾ (Andrea) ವಿವಾಹೇತರ ಸಂಬಂಧ ಹೊಂದಿದ್ದಾರೆ ಎಂದು ಖಾಸಗಿ ಫೋಟೋಗಳನ್ನು ಸುಚಿ ಲೀಕ್ಸ್ (Suchi Leaks) ಸೋಷಿಯಲ್ ಮೀಡಿಯಾ ಖಾತೆಯಿಂದ ಲೀಕ್ ಆಗಿದ್ದವು. ಅನಿರುದ್ದ ಮತ್ತು ಆಂಡ್ರಿಯಾ ಲಿಪ್ ಲಾಕ್ ಮಾಡಿಕೊಂಡ ಮತ್ತು ಖಾಸಗಿಯಾಗಿ ಕಳೆದ ಫೋಟೋಗಳು ಅವಾಗಿದ್ದವು. ಆ ವೇಳೆಯಲ್ಲಿ ಸಾಕಷ್ಟು ಸದ್ದು ಮಾಡಿದ್ದ ವಿಷಯ ಕೂಡ ಇದಾಗಿತ್ತು.
ಅದಾದ ನಂತರ ಇಬ್ಬರೂ ಈ ವಿಷಯದ ಬಗ್ಗೆ ಮಾತನಾಡಿರಲಿಲ್ಲ. ಹಲವು ವರ್ಷಗಳ ನಂತರ ಮೊದಲ ಬಾರಿಗೆ ಅನಿರುದ್ಧ ಈ ವಿಷಯದ ಬಗ್ಗೆ ಮಾತನಾಡಿದ್ದಾರೆ. ತಾವು ಪ್ರೀತಿಸುತ್ತಿರುವುದು ನಿಜವೆಂದು ಒಪ್ಪಿಕೊಂಡಿದ್ದಾರೆ. ಲವ್ ಬ್ರೇಕ್ ಅಪ್ ಆಗೋಕೆ ಕಾರಣ ವಯಸ್ಸಿನ ಅಂತರ ಎಂದಿದ್ದಾರೆ. ಆಗ ಅನಿರುದ್ಧಗೆ ಕೇವಲ 19 ವರ್ಷ. ಆಂಡ್ರಿಯಾಗೆ 25 ವರ್ಷ. ಆರು ವರ್ಷಗಳ ಅಂತರವೇ ದೂರ ಆಗೋಕೆ ಕಾರಣವಾಯ್ತು ಎಂದಿದ್ದಾರೆ.
ಲವ್ ಬ್ರೇಕ್ ಅಪ್ ಆಗುತ್ತಿದ್ದಂತೆಯೇ ಆಂಡ್ರಿಯಾ ಮತ್ತೆ ಬೇರೆಯವರ ಲವ್ ನಲ್ಲಿ ಬಿದ್ದರು. ಸ್ಟಾರ್ ನಿರ್ದೇಶಕನ ಜೊತೆ ಅವರಿಗೆ ಅಫೇರ್ ಇತ್ತು ಎಂದು ಹೇಳಲಾಗಿತ್ತು. ಈ ಕಾರಣದಿಂದಾಗಿಯೇ ನಿರ್ದೇಶಕ ಡಿವೋರ್ಸ್ ಕೂಡ ಪಡೆದುಕೊಂಡ ಎನ್ನುವ ಮಾತೂ ಕೇಳಿ ಬಂದಿತ್ತು.