ಚಿತ್ರವಿಚಿತ್ರ ಸಾವಿನ ಪ್ರಕರಣಗಳು ದಾಖಲಾಗುತ್ತಿವೆ. ಅದರಲ್ಲೂ ಫ್ರಿಡ್ಜ್ ಕಂಡರೆ ಭಯವಾಗುತ್ತಿದೆ. ಪ್ರೇಮಿಯೊಬ್ಬ ಫ್ರಿಡ್ಜ್ ನಲ್ಲಿ ತನ್ನ ಪ್ರೇಯಸಿಯ ಮೃತದೇಹ ಇಟ್ಟಿದ್ದ ಪ್ರಕರಣ ಸಾಕಷ್ಟು ಸುದ್ದಿಯಾಗಿತ್ತು. ಇಂಥದ್ದೇ ಪ್ರಕರಣ ಲಾಸ್ ಏಂಜಲೀಸ್ ನಲ್ಲಿ ನಡೆದಿದೆ. ಚಿಕ್ಕ ಪ್ರಾಯದ ಮಾಡೆಲ್ ವೊಬ್ಬರ ಮೃತದೇಹ ಫ್ರಿಡ್ಜ್ (Fridge)ನಲ್ಲಿ ಪತ್ತೆಯಾಗಿದೆ.
ಲಾಸ್ ಏಂಜಲೀಸ್ (Los Angeles) ನ ಹೆಸರಾಂತ ಮಾಟೆಲ್ ಮಲೀಸಾ ಮೂನಿಯಾ (Maleesa Mooney) ಮೃತದೇಹ ಫ್ರಿಡ್ಜ್ ನಲ್ಲಿ ಪತ್ತೆಯಾಗಿದೆ. ಕೈ ಕಾಲುಗಳನ್ನು ಬಿಗಿಯಾಗಿ ಕಟ್ಟಿದ ಸ್ಥಿತಿಯಲ್ಲಿ ಮಲೀಸಾ ದೇಹ ಪತ್ತೆಯಾಗಿದ್ದು, ಸಾವಿಗೆ ಕಾರಣ ಮಾತ್ರ ನಿಗೂಢವಾಗಿದೆ. ಈ ಸಮಯದಲ್ಲಿ ಮಲೀಸಾ ಎರಡು ತಿಂಗಳ ಗರ್ಭಿಣಿ ಎಂದು ಹೇಳಲಾಗುತ್ತಿದೆ.
ಶವಪರೀಕ್ಷೆಯ ವರದಿ ಬಹಿರಂಗವಾಗಿದ್ದು, ಮಲೀಸಾ ದೇಹದ ಮೇಲೆ ಗಾಯದ ಗುರುತುಗಳು ಕಾಣಿಸಿವೆ. ಭೀಕರವಾಗಿಯೇ ಮಲೀಸಾ ಸಾವನ್ನಪ್ಪಿದ್ದಾರೆ. ಪೊಲೀಸರು ತನಿಖೆಯನ್ನು ಚುರುಕುಗೊಳಸಿದ್ದಾರೆ.
Web Stories