ಬೆಂಗಳೂರು: ಸರ್ಕಾರಿ ವೈದ್ಯರು ಹಾಗೂ ಅಧಿಕಾರಿಗಳನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ನಕಲಿ ಐಜಿಪಿಯೊಬ್ಬನನ್ನು ತಿಲಕ್ ನಗರ ಪೊಲೀಸರು ಬಂಧಿಸಿದ್ದಾರೆ.
ಜಯನಗರ ನಿವಾಸಿ ರಮಾನಂದಸಾಗರ್ ಬಂಧಿತ ನಕಲಿ ಪೊಲೀಸ್ ಅಧಿಕಾರಿ. ಆರೋಪಿ ರಮಾನಂದಸಾಗರ್ ಆರ್‍ಟಿಐ ಕಾರ್ಯಕರ್ತ, ಐಪಿಎಸ್ ಹಾಗೂ ಪತ್ರಕರ್ತ ಹೀಗೆ ವಿವಿಧ ಸ್ಥಾನದಲ್ಲಿ ಇರುವುದಾಗಿ ಹೇಳಿಕೊಂಡು ಅಧಿಕಾರಿಗಳನ್ನು ಮೊಸ ಮಾಡುತ್ತಿದ್ದ.
Advertisement
Advertisement
ರಮಾನಂದಸಾಗರ್ ಜಯನಗರದ ವಿವಿಧ ಸರ್ಕಾರಿ ಕಚೇರಿಗಳಲ್ಲಿ ಪರಿಸ್ಥಿತಿ ಪರೀಕ್ಷೆ ಮಾಡಿ, ಅಲ್ಲಿನ ಅಧಿಕಾರಿಗಳ ವಿರುದ್ಧ ವಿವಿಧ ಮೊಕದ್ದಮೆ ಹುಡುವುದಾಗಿ ಹೆದರಿಸುತ್ತಿದ್ದ. ಅಲ್ಲದೇ ನಾನು ನಿವೃತ್ತ ಐಜಿಪಿ, ಖ್ಯಾತ ಪರ್ತಕರ್ತ, ಸಂಘಟನೆಯೊಂದರ ಮುಖ್ಯಸ್ಥ ಅಂತಾ ಅಧಿಕಾರಿಗಳಿಂದ ಹಣ ವಸೂಲಿ ಮಾಡುತ್ತಿದ್ದ. ತನ್ನ ವಿರುದ್ಧ ತಿರುಗಿಬಿದ್ದವರಿಗೆ ವಿವಿಧ ಅಪರಾಧದ ಮೇಲೆ ಪ್ರಕರಣ ದಾಖಲು ಮಾಡುವುದಾಗಿ ಹೆದರಿಸುತ್ತಿದ್ದ. ಅಲ್ಲದೇ ಕಚೇರಿಯ ಮಹಿಳಾ ಸಿಬ್ಬಂದಿಯನ್ನು ಮಂಚಕ್ಕೆ ಕರೆಯುತ್ತಿದ್ದನಂತೆ. ಜಯನಗರ ಸರ್ಕಾರಿ ಆಸ್ಪತ್ರೆ ವೈದ್ಯರು, ನರ್ಸ್‍ಗಳು ಸೇರಿದಂತೆ ಸಾಕಷ್ಟು ಜನರು ಪೊಲೀಸ್ ಕಮೀಷನರ್ ಹಾಗೂ ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು.
Advertisement
ಪ್ರಕರಣದ ಕುರಿತು ತನಿಖೆ ಪ್ರಾರಂಭಿಸಿದ್ದ ಪೊಲೀಸರಿಂದ ತಪ್ಪಿಸಿಕೊಂಡು ರಮಾನಂದಸಾಗರ್ ಪರಾರಿಯಾಗಿದ್ದ. ಎರಡು ತಿಂಗಳ ಬಳಿಗ ಪತ್ತೆಯಾಗಿದ್ದ ಆತನನ್ನು ಬಂಧಿಸುವಲ್ಲಿ ತಿಲಕ್ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.