ಬಳ್ಳಾರಿ: ಕುಡಿದ ಮತ್ತಿನಲ್ಲಿ ಸ್ನೇಹಿತರ ನಡುವೆ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿ ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ವಿಜಯನಗರ (Vijayanagar) ಜಿಲ್ಲೆಯ ಹೊಸಪೇಟೆ (Hosapete) ನಗರದ ಸಿದ್ಧಲಿಂಗಪ್ಪ ಕ್ರಾಸ್ ಬಳಿ ನಡೆದಿದೆ.
ಮೃತ ವ್ಯಕ್ತಿಯನ್ನು ಶಾಂತಕುಮಾರ (25) ಗುರುತಿಸಲಾಗಿದ್ದು, ಕೊಲೆ ಆರೋಪಿಯನ್ನು ಹುಲಿಗೇಶ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಹಜ್ ಯಾತ್ರೆಯ ನೆಪದಲ್ಲಿ ಭಿಕ್ಷಕರನ್ನು ಕಳುಹಿಸಬೇಡಿ – ಪಾಕ್‌ಗೆ ಸೌದಿ ಎಚ್ಚರಿಕೆ
ಕುಡಿದ ಮತ್ತಿನಲ್ಲಿ ಸಣ್ಣ ವಿಚಾರಕ್ಕೆ ಸ್ನೇಹಿತರ ನಡುವೆ ಜಗಳ ಆರಂಭವಾಗಿತ್ತು. ಜಗಳ ವಿಕೋಪಕ್ಕೆ ತಿರುಗಿ ಶಾಂತಕುಮಾರನ ತಲೆ ಭಾಗಕ್ಕೆ ಹುಲಿಗೇಶ ಬಲವಾಗಿ ಹೊಡೆದಿದ್ದ. ಆರೋಪಿ ಹುಲಿಗೇಶ ನಡುರಸ್ತೆಯಲ್ಲಿಯೇ ಸ್ನೇಹಿತ ಶಾಂತಕುಮಾರನನ್ನು ಹೊಡೆದಿದ್ದ. ಕೈಯಿಂದ ತಲೆಭಾಗಕ್ಕೆ ಬಲವಾಗಿ ಏಟು ಬಿದ್ದ ಹಿನ್ನೆಲೆ ಶಾಂತಕುಮಾರ್ ತೀವ್ರ ಅಸ್ವಸ್ಥನಾಗಿದ್ದ.
ತಕ್ಷಣವೇ ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಆತನನ್ನು ಕೊಪ್ಪಳ (Koppala) ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಇನ್ನೂ ಆರೋಪಿ ಹುಲಿಗೇಶನನ್ನ ಹೊಸಪೇಟೆ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸ್ಥಳಕ್ಕೆ ಹೊಸಪೇಟೆ ಡಿವೈಎಸ್ಪಿ, ಸಿಪಿಐ ಭೇಟಿ, ಪರಿಶೀಲನೆ ನಡೆಸಿದ್ದು, ಹೊಸಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ತಿರುಮಲನ ಸನ್ನಿಧಿಗೆ 2 ಟ್ರಕ್‌ಗಳಲ್ಲಿ ಕೆಎಂಎಫ್ ಶುದ್ಧ ನಂದಿನಿ ತುಪ್ಪ ಸರಬರಾಜು