ಕುಡಿತ ಬಿಡದವನ ಕೈಕಾಲು ಕಟ್ಟಿ ಥಳಿಸಿ ಹತ್ಯೆ – ಆರೋಪಿಗಳು ಅರೆಸ್ಟ್

Public TV
1 Min Read
ARREST 6

ಹಾಸನ: ಮದ್ಯ ವ್ಯಸನ ಬಿಡಲು ಒಪ್ಪದ ವ್ಯಕ್ತಿಗೆ ಥಳಿಸಿ ಆತನ ಸಾವಿಗೆ ಕಾರಣರಾದ ಆರು ಜನ ಆರೋಪಿಗಳನ್ನು ಹಾಸನ (Hassan) ಪೊಲೀಸರು ಬಂಧಿಸಿದ್ದಾರೆ.

ARREST 1 1

ಬಂಧಿತ ಆರೋಪಿಗಳನ್ನು ಶಶಿಕುಮಾರ್, ವಿಜಯ್‍ಕುಮಾರ್, ವೆಂಕಟೇಶ್, ಕ್ರಿಸ್ಟೋಫರ್, ಎಂ.ಕಿರಣ್ ಕುಮಾರ್ ಮತ್ತು ರವಿ ಎಂದು ಗುರುತಿಸಲಾಗಿದೆ. ಮತ್ತೊಬ್ಬ ಆರೋಪಿ ವಿನಯ್‍ಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು (Police) ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಶಂಕಿತ ಉಗ್ರ ಜುನೈದ್ ಸಹಚರನ ಬಂಧನ

ಪದ್ಮೇಗೌಡ ಎಂಬುವವರನ್ನು ಕುಡಿತದ ವ್ಯಸನದಿಂದ ಬಿಡಿಸುವಂತೆ ವಿಜಯನಗರದ ವ್ಯಸನ ಮುಕ್ತ ಕೇಂದ್ರಕ್ಕೆ ಆತನ ತಂದೆ ತೋಪೇಗೌಡ ಸೇರಿಸಿದ್ದರು. ಆದರೆ ಪದ್ಮೇಗೌಡ ಕುಡಿತ ಚಟ ಬಿಡಲು ಸಹಕರಿಸಿರಲಿಲ್ಲ. ಅಲ್ಲದೇ ಪ್ರತಿರೋಧ ವ್ಯಕ್ತಪಡಿಸಿದ್ದ ಎಂಬ ಕಾರಣಕ್ಕೆ ಕೈಕಾಲು ಕಟ್ಟಿ, ಹಲ್ಲೆ ಮಾಡಿದ್ದಾರೆ. ಇದರಿಂದ ಆತ ಮೃತಪಟ್ಟಿದ್ದಾನೆ ಎಂಬ ವಿಚಾರ ಬೆಳಕಿಗೆ ಬಂದಿದೆ.

ಮೃತ ದೇಹವನ್ನು ಅಂತ್ಯಸಂಸ್ಕಾರ ನಡೆಸಲು ಸ್ನಾನ ಮಾಡಿಸುವ ವೇಳೆ ದೇಹದ ಮೇಲೆ ಗಾಯದ ಗುರುತುಗಳು ಪತ್ತೆಯಾಗಿತ್ತು. ಇದರಿಂದ ಅನುಮಾನಗೊಂಡು ಹಾಸನ ಗ್ರಾಮಾಂತರ ಪೊಲೀಸ್ ಠಾಣೆಗೆ ತೋಪೇಗೌಡ ದೂರು ನೀಡಿದ್ದರು. ಮರಣೋತ್ತರ ಪರೀಕ್ಷೆ ನಡೆಸಿದ ವೇಳೆ ಗಂಭೀರವಾಗಿ ಹಲ್ಲೆ ನಡೆಸಿದ್ದರಿಂದ ಮೃತಪಟ್ಟಿರುವುದು ಬೆಳಕಿಗೆ ಬಂದಿತ್ತು. ಇದನ್ನೂ ಓದಿ: ಇಸ್ರೋ ವಿಜ್ಞಾನಿಯ ಕಾರಿಗೆ ಕಲ್ಲೆಸೆತ – ಹಿಂಭಾಗದ ಗಾಜು ಪುಡಿ ಪುಡಿ

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article