– ಲಸಿಕೆ ಬೇಡ ಎಂದು ಮರವೇರಿದ ಭೂಪ
ಯಾದಗಿರಿ/ಬಳ್ಳಾರಿ: ಯಾದಗಿರಿಯಲ್ಲಿ ಲಸಿಕೆ ನೀಡಲು ತೆರಳಿದ್ದ ಆರೋಗ್ಯ ಸಿಬ್ಬಂದಿಗೆ ಕುಡುಕನೋರ್ವ ಕಿರಿಕಿರಿ ಉಂಟು ಮಾಡಿದ್ರೆ, ಬಳ್ಳಾರಿಯಲ್ಲೊಬ್ಬ ವ್ಯಾಕ್ಸಿನ್ ಬೇಡೆವೆಂದು ಮರವೇರಿದ್ದಾನೆ.
ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಬೆಂಡಬೆಂಬಳಿ ಗ್ರಾಮದಲ್ಲಿ ಕುಡುಕನೋರ್ವ ಆರೋಗ್ಯ ಸಿಬ್ಬಂದಿ ಮುಂದೆ ರಾದ್ಧಾಂತ ನಡೆಸಿದ್ದಾನೆ. ಅಲ್ಲದೆ ಕೋವಿಡ್ ಲಸಿಕೆ ನೀಡಲು ಹೋದವರಿಗೆ ಜೀವ ಬೇದರಿಕೆ ಸಹ ಹಾಕಿದ್ದಾನೆ. ನಮ್ಮ ಹತ್ತಿರ ಬರಬೇಡಿ ನಮ್ಮ ಏರಿಯಾಕ್ಕೆ ಬಂದ್ರೆ ಕೋಲಿನಿಂದ ಹೊಡೆಯುತ್ತೇನೆ. ಯಾರನ್ನು ಬೇಕಾದರೂ ಕರೆಯಿಸು, ಬೇಕಿದ್ರೆ ಡಿಸಿಗೆ ಹೇಳು ಅಂತ ಅವಾಜ್ ಹಾಕಿದ್ದಾನೆ. ಕುಡುಕನ ಕಿರಿಕ್ ನಿಂದ ಬೇಸತ್ತ ಸಿಬ್ಬಂದಿ ವ್ಯಾಕ್ಸಿನ್ ಹಾಕುವುದನ್ನು ಅರ್ಧಕ್ಕೆ ನಿಲ್ಲಿಸಿ ವಾಪಸ್ ಮರಳಿದ್ದಾರೆ
Advertisement
Advertisement
ಮರ ಏರಿದ ಭೂಪ:
ಗ್ರಾಮೀಣ ಭಾಗದ ಜನರಲ್ಲಿ ಕೊರೊನಾ ಲಸಿಕೆಯ ಬಗ್ಗೆ ಭಯ ಇನ್ನೂ ಹೋಗಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಲಸಿಕೆ ಹಾಕುವುದು ಬೇಡ ಎಂದು ಭಯದಿಂದ ಮರವೇರಿ ಕುಳಿತಿರುವ ಘಟನೆ ಬಳ್ಳಾರಿ ಜಿಲ್ಲೆಯ ಕೂರಗೋಡು ತಾಲೂಕಿನ ಬೈಲೂರು ಗ್ರಾಮದಲ್ಲಿ ನಡೆದಿದೆ. ಬೈಲೂರು ಗ್ರಾಮದ ಹುಲೆಪ್ಪಾ ಎಂಬ ವ್ಯಕ್ತಿ ಲಸಿಕೆಗೆ ಹೆದರಿ ಮರ ಏರಿ ಕುಳಿತಿದ್ದಾನೆ. ಕಳೆದ ಮೂರು ದಿನಗಳಿಂದ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಗ್ರಾಮೀಣ ಪ್ರದೇಶಗಳಲ್ಲಿ ಲಸಿಕಾ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದನ್ನೂ ಓದಿ: 2023ರವರೆಗೆ ಅರುಣ್ ಸಿಂಗ್ ರಾಜ್ಯ ಬಿಜೆಪಿ ಉಸ್ತುವಾರಿ ಆಗಲಿ: ಹೆಚ್.ಡಿ.ರೇವಣ್ಣ
Advertisement
Advertisement
ಕೊನೆಗೆ ಬೈಲೂರು ಗ್ರಾಮದ ಹುಲೆಪ್ಪಾ ಲಸಿಕೆಗೆ ಹೆದರಿ ಮರ ಹತ್ತಿದ್ದು, ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಸ್ಥಳೀಯರ ಸಹಾಯದಿಂದ ಹುಲೆಪ್ಪಾ ಅವರನ್ನು ಅವರನ್ನು ಮರದಿಂದ ಕೆಳಗಿಳಿಸಿ ಲಸಿಕೆ ನೀಡಲಾಯಿತು.