ಚಿಕ್ಕಮಗಳೂರು: ಕುಡಿದ ಮತ್ತಲ್ಲಿ ವ್ಯಕ್ತಿಯೊಬ್ಬ ಸುಮ್ಮನೆ 108ಕ್ಕೆ ಕರೆ ಮಾಡಿ, 40 ಕಿ.ಮೀ ದೂರದಿಂದ ಅಂಬುಲೆನ್ಸ್ (Ambulance) ಕರೆಸಿರುವುದು ಶೃಂಗೇರಿಯಲ್ಲಿ (Sringeri) ನಡೆದಿದೆ.
ಕುಡಿದ ಮತ್ತಿನಲ್ಲಿ, ನಾನು ಆಕಾಶದ ಕೆಳಗೆ ಭೂಮಿಯ ಮೇಲೆ ಇದ್ದೀನಿ ಬೇಗ ಬನ್ನಿ, ಶೃಂಗೇರಿಯಲ್ಲಿ ಗಲಾಟೆಯಾಗಿ ತುಂಬಾ ಪೆಟ್ಟಾಗಿದೆ ಎಂದು ಅಂಬುಲೆನ್ಸ್‌ಗೆ ಕರೆ ಮಾಡಿದ್ದಾನೆ. ಇದನ್ನು ನಂಬಿದ ಅಂಬುಲೆನ್ಸ್ ಸಿಬ್ಬಂದಿ ಬಾಳೆಹೊನ್ನೂರಿನಿಂದ 40 ಕಿ.ಮೀ ದೂರದಿಂದ ಶೃಂಗೇರಿಗೆ ಬಂದಿದ್ದಾರೆ.
ಈ ವೇಳೆ ಕುಡುಕ ನನಗೆ ಅಂಬುಲೆನ್ಸ್ ಬೇಡ, ತಾಕತ್ ಇದ್ರೆ ನನ್ನನ್ನ ಹಿಡಿರಿ ಎಂದು ಆಂಬುಲೆನ್ಸ್ ಸಿಬ್ಬಂದಿಗೆ ಅವಾಜ್ ಹಾಕಿದ್ದಾನೆ. ಸ್ಥಳಕ್ಕೆ ಬಂದ ಪೊಲೀಸರು ಕುಡುಕನನ್ನು ಹಿಡಿಯಲು ಹರಸಾಹಸ ಪಟ್ಟಿದ್ದಾರೆ. ಬಳಿಕ ಸ್ಥಳೀಯರು ಅಲ್ಲೇ ವೈನ್ ಶಾಪ್‌ನಲ್ಲಿದ್ದ ಅಡಗಿಕೊಂಡಿದ್ದ ಆ ವ್ಯಕ್ತಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಪೊಲೀಸರ ಬಳಿ ಸ್ಥಳೀಯರು ಕರೆದುಕೊಂಡು ಹೋಗುತ್ತಿದ್ದಂತೆ, ಸರ್ ತಪ್ಪಾಯ್ತು ಬಿಡಿ ಸರ್ ಎಂದು ಗೋಗರೆದಿದ್ದಾನೆ.