ಬೆಂಗಳೂರು: ಕನ್ನಡದ ಹಿರಿಯ ನಟಿ ಲೀಲಾವತಿ (Leelavati) ಅವರ ನಿಧನಕ್ಕೆ ನಾಡಿನ ಗಣ್ಯಮಾನ್ಯರು ಕಂಬನಿ ಮಿಡಿದಿದ್ದಾರೆ.
ಬೆಳಗ್ಗೆ ಸುಮಾರು 10 ಗಂಟೆಯವರೆಗೂ ಸಾರ್ವಜನಿಕರಿಗೆ ಪಾರ್ಥೀವ ಶರೀರ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ದರ್ಶನ ಪಡೆದವರೆಲ್ಲರೂ ಲೀಲಾವತಿ ಅವರ ಸಮಾಜಮುಖಿ ಕಾರ್ಯಗಳ ಬಗ್ಗೆ ಗುಣಗಾನ ಮಾಡುತ್ತಿದ್ದಾರೆ. ಅವರ ನೆಚ್ಚಿನ ಸೋಲದೇವನಹಳ್ಳಿ ತೋಟದ ಮನೆಯಲ್ಲೂ ನೀರವ ಮೌನ ಮಡುಗಟ್ಟಿದೆ. ಅದರಲ್ಲೂ ಲೀಲಾವತಿಯವರ ಅಚ್ಚು ಮೆಚ್ಚಿನ ಶ್ವಾನ (Dog) ಕರಿಯನ ಮುಖ ವೇದನ ಕೂಡ ಹೇಳತೀರದಾಗಿದೆ. ಇದನ್ನೂ ಓದಿ: ಹಿರಿಯ ನಟಿ ಲೀಲಾವತಿ ನಿಧನಕ್ಕೆ ಪಿಎಂ ಮೋದಿ ಸಂತಾಪ
Advertisement
Advertisement
ಮನೆಯ ಒಳಭಾಗಲ್ಲಿ ಇಟ್ಟಿರುವ ಲೀಲಾವತಿಯವರ ಪೋಟೋ ಮುಂದೆ ಕುಳಿತು ನಾಯಿಯ ವೇದನೆ ಅನುಭವಿಸುತ್ತಿದೆ. ಕಳೆದ ಅನೇಕ ವರ್ಷಗಳಿಂದ ಲೀಲಾವತಿಯವರ ಅಚ್ಚುಮೆಚ್ಚಿನ ಶ್ವಾನವಾಗಿದ್ದ ಕರಿಯ, ರಾತ್ರಿಯಿಂದ ಮನೆಯಲ್ಲಿ ಲೀಲಾವತಿಯವರು ಕಾಣದ ಹಿನ್ನೆಲೆ ಪೋಟೋ ಮುಂದೆ ಕುಳಿತು ವೇದನೆ ಅನುಭವಿಸುತ್ತಿದೆ. ಇದನ್ನೂ ಓದಿ: ಸೋಲದೇವನಹಳ್ಳಿ ತೋಟದಲ್ಲಿ ಲೀಲಾವತಿ ಅಂತಿಮ ಸಂಸ್ಕಾರ
Advertisement
Advertisement
ಎರಡು ಕಾಲುಗಳಲ್ಲಿ ಬಹುತೇಕ ಸ್ವಾಧೀನ ಕಳೆದುಕೊಂಡಿದ್ದರೂ, ತೆವಳಿಕೊಂಡೇ ಮನೆಯ ಒಳಗೆ ಬಂದಿರುವ ಶ್ವಾನ ಲೀಲಾವತಿ ಅವರ ಫೋಟೋ ಮುಂದೆಯೇ ಕುಳಿತಿದೆ. ಕಣ್ಣಲ್ಲಿ ನೀರು ಕಚ್ಚಿಕೊಂಡಿದ್ದು, ಮೂಕ ವೇದನೆ ಅನುಭವಿಸಿದೆ. ಈ ದೃಶ್ಯ ಲೀಲಾವತಿ ಅವರ ಅಭಿಮಾನಿಗಳಿಗೂ ಕಣ್ಣೀರು ತರಿಸಿದೆ. ಇದನ್ನೂ ಓದಿ: ಸಿಎಂ, ಗಣ್ಯರ ಅಂತಿಮ ದರ್ಶನದ ಬಳಿಕ ಲೀಲಾವತಿ ಅಂತಿಮ ಸಂಸ್ಕಾರ