ಬೀದರ್: ಜಿಲ್ಲೆಯ ಔರಾದ್ (Aurad) ತಾಲೂಕಿನ ವಿಜಯನಗರ ತಾಂಡಾದಲ್ಲಿ ಅಕ್ರಮವಾಗಿ ಮಾರಾಟ ಮಾಡಲು ತೊಗರಿ ಹೊಟ್ಟಿನಲ್ಲಿ ಬಚ್ಚಿಟ್ಟಿದ್ದ 7 ಲಕ್ಷಕ್ಕೂ ಅಧಿಕ ಮೌಲ್ಯದ ಗಾಂಜಾವನ್ನು ಪೊಲೀಸ್ ಇಲಾಖೆಗೆ ಸೇರಿದ ಶ್ವಾನ ಪತ್ತೆ ಹಚ್ಚಿದೆ.
ಪೊಲೀಸ್ ಇಲಾಖೆಗೆ ಸೇರಿದ, ಮಾದಕ ದ್ರವ್ಯ ಪತ್ತೆ ಮಾಡುವ ಪರಿಣಿತಿ ಹೊಂದಿರುವ ಡಾಬರ್ ಮ್ಯಾನ್ ತಳಿಯ ದೀಪಾ ಎನ್ನುವ ಶ್ವಾನ ಗಾಂಜಾವನ್ನು ಪತ್ತೆ ಹಚ್ಚಿದೆ. ಗಾಂಜಾಕೋರರು ಬಚ್ಚಿಟ್ಟಿದ್ದ 7 ಲಕ್ಷಕ್ಕೂ ಅಧಿಕ ಮೌಲ್ಯದ ಗಾಂಜಾವನ್ನು ಪತ್ತೆ ಹಚ್ಚಿದ್ದು, ಓರ್ವ ಆರೋಪಿಯನ್ನು ಬಂಧಿಸಲಾಗಿದೆ.ಇದನ್ನೂ ಓದಿ: ‘ನಿನ್ನ ಪ್ರತಿಯೊಂದು ಹೆಜ್ಜೆಯಲ್ಲೂ ನನ್ನ ಪಾಲಿರಲಿ’ ಎನ್ನುತ್ತಿದ್ದಾರೆ ಸಪ್ತಮಿ ಗೌಡ
- Advertisement 2-
- Advertisement 3-
ಔರಾದ್ ತಾಲೂಕಿನಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ಹಾಗೂ ತಹಶೀಲ್ದಾರ್ ದಾಳಿ ನಡೆಸಿದ್ದರೂ ಕೂಡ ಗಾಂಜಾ ಪತ್ತೆಯಾಗಿರಲಿಲ್ಲ. ಹೀಗಾಗಿ ತೆಲಂಗಾಣದಿಂದ ಕರೆತಂದಿದ್ದ ಶ್ವಾನವು, ತೊಗರಿ ಹೊಟ್ಟಿನಲ್ಲಿ ಬಚ್ಚಿಟ್ಟಿದ್ದ ಗಾಂಜಾ ಪತ್ತೆ ಹಚ್ಚಿದೆ.
- Advertisement 4-
ಶ್ವಾನದ ಕಾರ್ಯಕ್ಕೆ ಎಸ್‌ಪಿ ಪ್ರದೀಪ್ ಗುಂಟಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಈ ಕುರಿತು ಸಂತಪೂರ್ (Santapur) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಪೈಲಟ್‌ಗಳಿಲ್ಲದ ವಿಮಾನಕ್ಕೆ ಏಕೆ ಹತ್ತಿಸುತ್ತೀರಿ – ಏರ್ ಇಂಡಿಯಾ ವಿರುದ್ಧ ಡೇವಿಡ್ ವಾರ್ನರ್ ಗರಂ!