ತುಮಕೂರು: ಗರ್ಭಿಣಿಗೆ ಎಚ್‍ಐವಿ ಪಾಸಿಟಿವ್ ಇದೆ ಅಂತಾ ಹೇಳಿ ಇರದ ಕಾಯಿಲೆಗೆ ಔಷಧಿಯನ್ನೂ ನೀಡಿ ಆಕೆಯನ್ನು ಮಾನಸಿಕ ಖಿನ್ನತೆಗೆ ಒಳಗಾಗುವಂತೆ ಮಾಡಿರುವ ಹೃದಯವಿದ್ರಾವಕ ಘಟನೆಯೊಂದು ತುಮಕೂರು ಜಿಲ್ಲೆ ಶಿರಾ ತಾಲೂಕಿನಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
2015ರ ಡಿಸೆಂಬರ್ ತಿಂಗಳಿನಲ್ಲಿ ಗರ್ಭಿಣಯೊಬ್ಬರು ಆರೋಗ್ಯ ತಪಾಸಣೆಗಾಗಿ ಶಿರಾ ಸರ್ಕಾರಿ ಆಸ್ಪತ್ರೆಗೆ ಹೋಗಿದ್ದರು. ಆಕೆ ಗರ್ಭಿಣಿಯಾದ ಕಾರಣದಿಂದ ವೈದ್ಯರು ಎಚ್‍ಐವಿ ಪರೀಕ್ಷೆಯನ್ನು ಮಾಡಿದ್ದರು. ಬಳಿಕ ರಿಸಲ್ಟ್ ಪಾಸಿಟೀವ್ ಬಂದಿದೆ. ನಿಮಗೆ ಏಡ್ಸ್ ಕಾಯಿಲೆ ಬಂದಿದೆ. ಹಾಗಾಗಿ ಸೂಕ್ತ ಔಷಧಿ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದರು.
Advertisement
ಅದರಂತೆ ಮಹಿಳೆ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಕಳೆದ 2 ವರ್ಷಗಳಿಂದ ನಿರಂತರವಾಗಿ ಔಷಧಿಯನ್ನೂ ತೆಗೆದುಕೊಂಡಿದ್ದಾರೆ. ಆದರೆ ಏಡ್ಸ್ ಎಂಬ ಭಯಾನಕ ಕಾಯಿಲೆಗೆ ತುತ್ತಾದೆನಲ್ಲಾ ಎಂಬ ಕೊರಗಿನಲ್ಲಿ ತನ್ನ ಚೊಚ್ಚಲ ಮಗುವನ್ನು ಕಳೆದುಕೊಂಡಿದ್ದಾರೆ.
Advertisement
ಇದೀಗ 2 ನೇ ಮಗುವಿಗೆ ಆಕೆ ಗರ್ಭಿಣಿಯಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಮತ್ತೊಮ್ಮೆ ಎಚ್‍ಐವಿ ಪರೀಕ್ಷೆ ಮಾಡಿಸಿದ್ದಾರೆ. ಆಶ್ಚರ್ಯ ಎಂಬಂತೆ ಆಕೆಗೆ ಎಚ್‍ಐವಿ ನೆಗೆಟೀವ್ ರಿಸಲ್ಟ್ ಬಂದಿದೆ. ಅಂದರೆ ಆಕೆಗೆ ಏಡ್ಸ್ ಕಾಯಿಲೆ ಇಲ್ಲ ಅಂತಾ ವೈದ್ಯರು ದೃಢಪಡಿಸಿದ್ದಾರೆ.
Advertisement
ಇದರಿಂದ ವಿಚಲಿತರಾದ ಮಹಿಳೆ ಮೂರ್ನಾಲ್ಕು ಖಾಸಗಿ ಆಸ್ಪತ್ರೆ ಮತ್ತು ಜಿಲ್ಲಾಸ್ಪತ್ರೆಯಲ್ಲೂ ಮತ್ತೊಮ್ಮೆ ಪರೀಕ್ಷೆ ಮಾಡಿಸಿದ್ದಾರೆ. ಎಲ್ಲಾ ಕಡೆಯೂ ಆಕೆಗೆ ಏಡ್ಸ್ ಕಾಯಿಲೆ ಇಲ್ಲಾ ಎಂಬ ರಿಸಲ್ಟ್ ಬಂದಿದೆ. ಆಗಲೇ ಆಕೆಗೂ ಗೊತ್ತಾಗಿರೋದು ತನಗೆ ಎಚ್‍ಐವಿ ಇಲ್ಲ ಎಂಬ ಸತ್ಯ. ಆದರೆ ಶಿರಾದ ಸರ್ಕಾರಿ ಆಸ್ಪತ್ರೆ ವೈದ್ಯರು ನೀಡಿದ ತಪ್ಪು ಫಲಿತಾಂಶ ಈ ಮಹಿಳೆಯ ಜೀವನದ ಖುಷಿಯ ಕ್ಷಣಗಳನ್ನು ಬಲಿತೆಗೆದುಕೊಂಡಿದೆ.