ಬೆಂಗಳೂರು: ನಗರದ (Bengaluru) ಮಲ್ಲೇಶ್ವರಂನ ಸರ್ಕಾರಿ ಶಾಲಾ ಮೈದಾನದಲ್ಲಿ ʻಪಬ್ಲಿಕ್ ಟಿವಿʼ ಆಯೋಜಿಸಿದ್ದ ಪಿಜಿ ಕೋರ್ಸ್‌ಗಳ ಮೇಗಾ ಶೈಕ್ಷಣಿಕ ಮೇಳ ವಿದ್ಯಾಮಂದಿರಕ್ಕೆ (Public TV Vidya Mandira Mega Education Expo) ವಿದ್ಯಾರ್ಥಿಯೊಬ್ಬ ವ್ಹೀಲ್‌ಚೇರ್‌ನಲ್ಲಿ ಬಂದು ಮಾಹಿತಿ ಪಡೆದಿದ್ದಾನೆ.
ಸಂಜೆ ವೇಳೆ ಸುರಿದ ಮಳೆಯ ನಡುವೆ ವಿಕಲಚೇತನ ವಿದ್ಯಾರ್ಥಿಯೊಬ್ಬ ತಮ್ಮ ಪೋಷಕರೊಂದಿಗೆ ವ್ಹೀಲ್‌ಚೇರ್‌ನಲ್ಲಿ ಆಗಮಿಸಿ ಮಾಹಿತಿ ಪಡೆದಿದ್ದಾರೆ. ಅಲ್ಲದೇ, ಬೆಳಗ್ಗೆಯಿಂದಲೇ ವಿದ್ಯಾಮಂದಿರಕ್ಕೆ ವಿದ್ಯಾರ್ಥಿಗಳು ಮತ್ತು ಪೋಷಕರು ಆಗಮಿಸಿ ತಮಗೆ ಬೇಕಾದ ಕಾಲೇಜಿನ ಮಾಹಿತಿ ಪಡೆದುಕೊಂಡರು. ಇದನ್ನೂ ಓದಿ: ಪಬ್ಲಿಕ್ ಟಿವಿ `ವಿದ್ಯಾಮಂದಿರ’ಕ್ಕೆ ಭರ್ಜರಿ ರೆಸ್ಪಾನ್ಸ್ – 4ನೇ ಆವೃತ್ತಿಯ ಶೈಕ್ಷಣಿಕ ಮೇಳಕ್ಕೆ ಅದ್ಧೂರಿ ತೆರೆ
ಯುಜಿ ಮುಗಿತು, ಈಗ ಪಿಜಿ ಮಾಡಬೇಕು, ಯಾವ ಕಾಲೇಜು, ಯಾವ ಕೋರ್ಸು, ಯಾವ ಕಾಲೇಜಿನಲ್ಲಿ ಪ್ಲೇಸ್ಮೆಂಟ್ ಚೆನ್ನಾಗಿದೆ? ಯಾವ ಕಾಲೇಜಿನಲ್ಲಿ ಫೀಸ್ ಎಷ್ಟಿದೆ? ಹಾಸ್ಟೆಲ್ ಫೆಸಿಲಿಟಿ ಸಿಗುತ್ತಾ? ಎಜುಕೇಷನ್ ಯಾವ ರೀತಿಯಲ್ಲಿ ಇರುತ್ತೆ? ಹೀಗೆ ಅನೇಕ ಪ್ರಶ್ನೆಗಳಿಗೆ ಉತ್ತರ ನೀಡೋ ದೃಷ್ಟಿಯಿಂದ ನಿಮ್ಮ ʻಪಬ್ಲಿಕ್ ಟಿವಿʼ (Public TV) ಮಲ್ಲೇಶ್ವರಂನಲ್ಲಿ ವಿದ್ಯಾಮಂದಿರ ಶೈಕ್ಷಣಿಕ ಮೇಳವನ್ನ ಆಯೋಜನೆ ಮಾಡಿತ್ತು, ಎರಡು ದಿನ ನಡೆದ ವಿದ್ಯಾಮಂದಿರಕ್ಕೆ ಇಂದು ತೆರೆ ಬಿದ್ದಿದೆ.
ಎರಡು ದಿನಗಳ ಕಾಲ ನಡೆದ ಶೈಕ್ಷಣಿಕ ಮೇಳದಲ್ಲಿ ಸಾವಿರಾರು ವಿದ್ಯಾರ್ಥಿಗಳು. ಪೋಷಕರು ಆಗಮಿಸಿ ಮಾಹಿತಿ ಪಡೆದುಕೊಂಡ್ರು. ನಿನ್ನೆ ಬೆಳಗ್ಗೆ 9ರಿಂದ ಆರಂಭವಾಗಿದ್ದ ವಿದ್ಯಾಮಂದಿರ ಸ್ನಾತಕೋತ್ತರ ಪದವಿ ಕೋರ್ಸ್‌ಗಳ ಮೆಗಾ ಶೈಕ್ಷಣಿಕ ಮೇಳ ಅಭೂತಪೂರ್ವ ಯಶಸ್ಸು ಕಂಡಿತು.
ವಿದ್ಯಾಮಂದಿರ ಮೇಳದಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿಗಳಿಗೆ ಆಕರ್ಷಕ ಬಹುಮಾನ ಕೂಡ ನೀಡಲಾಯಿತು. ಒಬ್ಬ ಲಕ್ಕಿ ವಿಜೇತರಿಗೆ ಲ್ಯಾಪ್ ಟಾಪ್ ಮತ್ತು ಪ್ರತಿ ಒಂದು ಗಂಟೆಗೆ ಒಬ್ಬರಿಗೆ ಟ್ಯಾಬ್ ಅನ್ನ ಲಕ್ಕಿ ಡಿಪ್ ಮೂಲಕ ವಿತರಿಸಲಾಯ್ತು. ಇದನ್ನೂ ಓದಿ: ಮತಗಳ್ಳತನ ಆರೋಪ: ದಾಖಲೆ ಕೊಡುವಂತೆ ರಾಹುಲ್ ಗಾಂಧಿಗೆ ಚುನಾವಣಾ ಆಯೋಗ ನೋಟಿಸ್