ರಾಷ್ಟ್ರ ಪ್ರಶಸ್ತಿ ವಿಜೇತೆ, ನಟಿ ಕಂಗನಾ ರಣಾವತ್ ನಟನೆಯ ಧಾಕಡ್ ಸಿನಿಮಾ, ಈ ಸಿನಿಮಾದ ನಿರ್ಮಾಪಕ ದೀಪಕ್ ಮುಕುಟ್ ಅವರ ಬದುಕಿನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಈ ಸಿನಿಮಾ ನೂರಾರು ಕೋಟಿ ವ್ಯಾಪಾರ ಮಾಡುತ್ತದೆ ಎಂದೇ ದೀಪಕ್ ನಂಬಿದ್ದರು. ಹಾಗಾಗಿ ಕೋಟಿ ಕೋಟಿ ಹಣವನ್ನು ಸುರಿದು ಸಿನಿಮಾ ಮಾಡಿದರು. ಪ್ರಚಾರದಲ್ಲೂ ಅವರು ಹಿಂದೆ ಬೀಳಲಿಲ್ಲ. ಆದರೆ, ಧಾಕಡ್ ಗೆಲ್ಲಲಿಲ್ಲ. ಎಂದೂ ಸುಧಾರಿಸಿಕೊಳ್ಳದೇ ಇರುವಷ್ಟು ನಷ್ಟವನ್ನು ಅದು ಮಾಡಿದೆ.
ಕಂಗನಾ ರಣಾವತ್ ನಟನೆಯ ಧಾಕಡ್ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಧೂಳ್ ಎಬ್ಬಿಸಲಿದೆ ಎಂದೇ ನಂಬಲಾಗಿತ್ತು. ಕಂಗನಾ ಅವರಿಗೂ ಈ ಸಿನಿಮಾದ ಮೇಲೆ ಅಷ್ಟೊಂದು ಭರವಸೆ ಇತ್ತು. ಹಾಗಾಗಿ ಓಪನ್ ಆಗಿಯೇ ಹಲವು ವಿಷಯಗಳನ್ನು ಅವರು ಮಾತನಾಡಿದರು. ಈ ಮಾತೇ ಅವರಿಗೆ ಮುಳುವಾಗಿದೆ ಎಂದು ಹೇಳಲಾಗುತ್ತಿದೆ. ಇಡೀ ಬಾಲಿವುಡ್ ಅನ್ನು ಬಾಯಿಗೆ ಬಂದಂತೆ ಬೈದ ಕಾರಣದಿಂದಾಗಿ ಈ ಸಿನಿಮಾವನ್ನು ಯಾರೂ ಪ್ರಮೋಟ್ ಮಾಡಲಿಲ್ಲ ಎನ್ನುವ ಮಾತು ಕೇಳಿ ಬಂದಿದೆ. ಇದನ್ನೂ ಓದಿ : Breaking- ಫಹಾದ್ ಫಾಸಿಲ್ ಗಾಗಿ ಸಿನಿಮಾ ಮಾಡಲು ಮತ್ತೆ ತಮಿಳಿಗೆ ಹೊರಟ ಪವನ್ ಕುಮಾರ್
ಈ ಸಿನಿಮಾ ಅಂದಾಜು 80 ಕೋಟಿಯಲ್ಲಿ ನಿರ್ಮಾಣ ಮಾಡಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಬಾಕ್ಸ್ ಆಫೀಸಿನಿಂದ ನಿರ್ಮಾಪಕರಿಗೆ ಬಂದ ಹಣ ಕೇವಲ 5 ಕೋಟಿ ಎನ್ನಲಾಗುತ್ತಿದೆ. ಪ್ರಚಾರದ ಖರ್ಚು ಸೇರಿದಂತೆ 90 ಕೋಟಿಗೂ ಅಧಿಕ ಹಣವನ್ನು ಈ ಚಿತ್ರಕ್ಕಾಗಿ ನಿರ್ಮಾಪಕರು ಖರ್ಚು ಮಾಡಿದ್ದರಂತೆ. ಅದಕ್ಕಾಗಿ ಸಾಲವನ್ನು ಮಾಡಿಕೊಂಡಿದ್ದರಂತೆ. ಈ ಸಾಲವನ್ನು ತೀರಿಸಲು ಅವರು ತಮ್ಮ ಕಚೇರಿಯನ್ನೇ ಮಾರಿದ್ದಾರಂತೆ ನಿರ್ಮಾಪಕರು. ಕಚೇರಿ ಮಾರಿ ಬಂದ ಹಣದಲ್ಲಿ ಸಾಲು ತೀರಿಸಿದ್ದಾರಂತೆ.