ಅಭಿವೃದ್ಧಿ ಹೊಂದಿದ ಭಾರತಕ್ಕೆ ಪ್ರತಿ ವಲಯದಲ್ಲೂ ಅತ್ಯುತ್ತಮ ನಾಯಕತ್ವದ ಅಗತ್ಯವಿದೆ – ಮೋದಿ

Public TV
2 Min Read
modi 1

ನವದೆಹಲಿ: 21ನೇ ಶತಮಾನದ `ಅಭಿವೃದ್ಧಿ ಹೊಂದಿದ ಭಾರತ’ಕ್ಕಾಗಿ ಪ್ರತಿಯೊಬ್ಬ ಭಾರತೀಯನು ಹಗಲಿರುಳು ಶ್ರಮಿಸುತ್ತಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ 140 ಕೋಟಿ ಜನರಿರುವ ದೇಶದಲ್ಲಿ ನಮಗೆ ಜೀವನದ ಪ್ರತಿಯೊಂದು ವಲಯದಲ್ಲಿ, ಪ್ರತಿಯೊಂದು ಕೋನದಲ್ಲಿ, ಪ್ರತಿಯೊಂದು ಅಂಶದಲ್ಲೂ ಅತ್ಯುತ್ತಮ ನಾಯಕತ್ವದ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಹೇಳಿದ್ದಾರೆ.

ಭಾರತ್ ಮಂಟಪದಲ್ಲಿ ಆಯೋಜಿಸಿದ್ದ ಸ್ಕೂಲ್ ಆಫ್ ಅಲ್ಟಿಮೇಟ್ ಲೀಡರ್‌ಶಿಪ್ (ಸೋಲ್) (SOUL Conclave ) ಲೀಡರ್‌ಶಿಪ್ ಕಾನ್ಕ್ಲೇವ್‌ನ ಮೊದಲ ಆವೃತ್ತಿಯನ್ನು ಉದ್ಘಾಟಿಸಿ ಪ್ರಧಾನಿ ಮೋದಿ ಮಾತನಾಡಿದರು. ಭೂತಾನಿನ ಪ್ರಧಾನಿ ತ್ಸೆರಿಂಗ್ ಟೋಬ್ಗೆ ಕೂಡ ಈ ವೇಳೆ ಇದ್ದರು.ಇದನ್ನೂ ಓದಿ: ಯೂಟ್ಯೂಬರ್ ರಣವೀರ್‌ ಅಲಹಬಾದಿಯಾ ಕೀಳು ಹೇಳಿಕೆ ಕೇಸ್‌ – ರಾಖಿ ಸಾವಂತ್‌ಗೆ ಸಮನ್ಸ್

ರಾಷ್ಟ್ರ ನಿರ್ಮಾಣಕ್ಕೆ ಉತ್ತಮ ನಾಗರಿಕರ ಅಭಿವೃದ್ಧಿ ಅಗತ್ಯ, ವೈಯಕ್ತಿಕ ಅಭಿವೃದ್ಧಿಯ ಮೂಲಕ ರಾಷ್ಟ್ರ ನಿರ್ಮಾಣ, `ಜನರಿಂದ ಜಗತ್ತು’, ಯಾವುದೇ ಎತ್ತರವನ್ನು ಸಾಧಿಸಲು, ಅದು ಜನರಿಂದ ಮಾತ್ರ ಪ್ರಾರಂಭವಾಗುತ್ತದೆ. ಇದಕ್ಕಾಗಿ ಉತ್ತಮ ನಾಯಕರ ಅಭಿವೃದ್ಧಿ ಅಗತ್ಯವಾಗಿದೆ, ಆದ್ದರಿಂದ `ಸ್ಕೂಲ್ ಆಫ್ ಅಲ್ಟಿಮೇಟ್ ಲೀಡರ್‌ಶಿಪ್’ ಸ್ಥಾಪನೆಯು ಭಾರತದ ಅಭಿವೃದ್ಧಿ ಪ್ರಯಾಣದಲ್ಲಿ ಒಂದು ಪ್ರಮುಖ ಮತ್ತು ದೊಡ್ಡ ಹೆಜ್ಜೆಯಾಗಿದೆ ಎಂದರು.

ಸ್ವಾಮಿ ವಿವೇಕಾನಂದರು ಭಾರತವನ್ನು ಗುಲಾಮಗಿರಿಯಿಂದ ಹೊರತರಲು ಬಯಸಿದ್ದರು ಮತ್ತು ಅವರಿಗೆ 100 ನಾಯಕರು ಇದ್ದರೆ, ಅವರು ಭಾರತಕ್ಕೆ ಸ್ವಾತಂತ್ರ‍್ಯ ನೀಡುವುದಲ್ಲದೆ, ವಿಶ್ವದ ನಂಬರ್ ಒನ್ ದೇಶವನ್ನಾಗಿ ಮಾಡಬಹುದು ಎಂದು ನಂಬಿದ್ದರು. ನಾವೆಲ್ಲರೂ ಈ ಮಂತ್ರದೊಂದಿಗೆ ಮುಂದುವರಿಯಬೇಕು ಎಂದು ಹೇಳಿದರು.

ಮುಂಬರುವ ದಿನಗಳಲ್ಲಿ ಭಾರತದ ಪ್ರಭಾವವು ಎಲ್ಲಾ ವಲಯಗಳಲ್ಲಿ ಹಲವು ಪಟ್ಟು ಹೆಚ್ಚಾಗುತ್ತದೆ. ಒಂದು ರೀತಿಯಲ್ಲಿ ಭಾರತದ ಸಂಪೂರ್ಣ ದೃಷ್ಟಿಕೋನ ಮತ್ತು ಭವಿಷ್ಯವು ಬಲವಾದ ನಾಯಕತ್ವ ಪೀಳಿಗೆಯ ಮೇಲೆ ಅವಲಂಬಿತವಾಗಿರುತ್ತದೆ, ಆದ್ದರಿಂದ ನಾವು ಜಾಗತಿಕ ಚಿಂತನೆ ಮತ್ತು ಸ್ಥಳೀಯ ಪಾಲನೆಯೊಂದಿಗೆ ಮುಂದುವರಿಯಬೇಕು ಎಂದು ಅಭಿಪ್ರಾಯಪಟ್ಟರು.

ಭೂತಾನಿನ ಪ್ರಧಾನಿ ದಾಸೋ ತ್ಸೆರಿಂಗ್ ಟೋಗ್ಬೇ ಮಾತನಾಡಿ, ಈ ಎರಡು ದಿನಗಳ ಸಮ್ಮೇಳನದಲ್ಲಿ ರಾಜಕೀಯ, ಕ್ರೀಡೆ, ಕಲೆ, ಮಾಧ್ಯಮ, ಆಧ್ಯಾತ್ಮಿಕತೆ, ಸಾರ್ವಜನಿಕ ನೀತಿ, ವ್ಯವಹಾರ ಮತ್ತು ಸಾಮಾಜಿಕ ಕ್ಷೇತ್ರದ ವ್ಯಕ್ತಿಗಳು ತಮ್ಮ ಯಶೋಗಾಥೆಗಳನ್ನು ಹಂಚಿಕೊಳ್ಳಲಿದ್ದಾರೆ ಎಂದರು.ಇದನ್ನೂ ಓದಿ: ಕನ್ನಡ ಚಲನಚಿತ್ರ ರಂಗದ ಯಶಸ್ವಿ ಚಿತ್ರ ನಿರ್ದೇಶಕ ಎಸ್.ಉಮೇಶ್ ನಿಧನ

 

Share This Article