ಲಕ್ನೋ: ಅನ್ಯಜಾತಿಯವನನ್ನು ಮದುವೆಯಾಗಿದ್ದಲ್ಲದೇ (Marriage), ತಡರಾತ್ರಿಯವರೆಗೂ ಹೊರಗೆ ಹೋಗುತ್ತಿದ್ದಳು ಅನ್ನೋ ಕೋಪದಿಂದ ರೊಚ್ಚಿಗೆದ್ದ ತಂದೆ, ತನ್ನ ಮಗಳನ್ನು ಗುಂಡಿಕ್ಕಿ ಕೊಂದು, ಸೂಟ್‌ಕೇಸ್‌ನಲ್ಲಿ ತುಂಬಿ ಉತ್ತರಪ್ರದೇಶದ (UttarPradesh) ಯಮುನಾ ಎಕ್ಸ್‌ಪ್ರೆಸ್‌ವೇ (Yamuna Expressway) ಬಳಿ ಎಸೆದಿರುವ ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
Advertisement
ಕಳೆದ ವಾರ ಉತ್ತರ ಪ್ರದೇಶದ ಮಥುರಾದ ಯಮುನಾ ಎಕ್ಸ್‌ಪ್ರೆಸ್‌ವೇ (Yamuna Expressway) ಬಳಿ ಸೂಟ್‌ಕೇಸ್‌ನಲ್ಲಿ ಶವವಾಗಿ ಪತ್ತೆಯಾದ ದೆಹಲಿ ಮೂಲದ 22 ವರ್ಷದ ಯುವತಿಯನ್ನ ಆಕೆಯ ತಂದೆಯೇ ಕೊಂದಿದ್ದಾರೆ ಎಂಬುದು ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಆಯುಷಿ ಚೌದರಿ (22) ತಂದೆ ನಿತೇಶ್ ಯಾದವ್‌ನನ್ನ ಬಂಧಿಸಲಾಗಿದೆ ಎಂದು ಉತ್ತಪ್ರದೇಶದ ಮಥುರಾ ಎಸ್ಪಿ ತಿಳಿಸಿದ್ದಾರೆ. ಇದನ್ನೂ ಓದಿ: 25 ಬೌಂಡರಿ, 15 ಸಿಕ್ಸರ್ – 277 ರನ್ ಸಿಡಿಸಿ ವಿಶ್ವದಾಖಲೆ ಬರೆದ ಜಗದೀಶನ್ – ಹಿಟ್‌ಮ್ಯಾನ್ ದಾಖಲೆಯೂ ಉಡೀಸ್
Advertisement
Advertisement
ಮರ್ಡರ್ ಮಿಸ್ಟ್ರಿ ರೋಚಕ: ದೆಹಲಿ ಮೂಲದ ಆಯುಷಿ ಚೌದರಿ ತನ್ನ ಮನೆಯವರಿಗೆ ಹೇಳದೆ ಬೇರೆ ಜಾತಿಯ ಛತ್ರಪಾಲ್ ಎಂಬ ವ್ಯಕ್ತಿಯನ್ನು ಮದುವೆಯಾಗಿದ್ದಳು. ಆಕೆಯ ಪೋಷಕರು ತೀವ್ರವಾಗಿ ವಿರೋಧಿಸಿದ್ದರೂ ಆಕೆಯ ಹಠಮಾರಿ ತನದಿಂದ ಒಪ್ಪಿಕೊಂಡಿದ್ದರು. ಈ ಬಗ್ಗೆ ಪೋಷಕರಿಗೆ ಅಸಮಾಧಾನವಿತ್ತು. ಈ ನಡುವೆಯೂ ಮಗಳು ದಿನ ತಡರಾತ್ರಿವರೆಗೂ ಹೊರಗಡೆ ಹೋಗಿಬರುತ್ತಿದ್ದಳು. ಈ ಕೋಪದಿಂದ ತಂದೆ-ಮಗಳ ನಡುವೆ ಜಗಳ ನಡೆದಿದೆ. ಬಳಿಕ ಮಾತಿಗೆ ಮಾತು ಬೆಳೆದಿದು, ರೊಚ್ಚಿಗೆದ್ದ ತಂದೆ ತಾನು ಲೈಸೆನ್ಸ್ ಪಡೆದಿದ್ದ ಗನ್‌ನಿಂದ (Gun) ಗುಂಡು ಹಾರಿಸಿ ಕೊಂದಿದ್ದಾನೆ. ಬಳಿಕ ಪ್ಲಾಸ್ಟಿಕ್‌ನಲ್ಲಿ ಸುತ್ತಿ, ಸೂಟ್‌ಕೇಸ್‌ನಲ್ಲಿ ತುಂಬಿಕೊಂಡು ಮಥುರಾದ ಯಮುನಾ ಎಕ್ಸ್‌ಪ್ರೆಸ್ ವೇ ಬಳಿ ಎಸೆದು ಬಂದಿದ್ದಾನೆ. ಇದನ್ನೂ ಓದಿ: ಒಡಿಶಾದಲ್ಲಿ ಹಳಿ ತಪ್ಪಿ, ನಿಲ್ದಾಣಕ್ಕೆ ಡಿಕ್ಕಿ ಹೊಡೆದ ಗೂಡ್ಸ್ ರೈಲು – 3 ಸಾವು, ಹಲವರಿಗೆ ಗಾಯ
Advertisement
ಇದಾದ ಒಂದು ವಾರದ ನಂತರ ಸ್ಥಳೀಯ ಕಾರ್ಮಿಕರು ರಕ್ತದ ಮಡುವಿನಲ್ಲಿದ್ದ ಸೂಟ್‌ಕೇಸ್ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಯುವತಿಯ ಶವ ಪತ್ತೆಯಾಗಿದೆ. ಮೃತದೇಹದ ಮುಖ ಮತ್ತು ತಲೆ ಭಾಗದಲ್ಲಿ ರಕ್ತ ಬಂದಿರುವುದು ಹಾಗೂ ದೇಹದ ಹಲವು ಭಾಗಗಳಲ್ಲಿ ಗಾಯದ ಕಲೆಗಳು ಕಂಡುಬಂದಿದ್ದವು. ನಂತರ ಮೃತದೇಹ ಗುರುತಿಸಲು ಪೋಷಕರನ್ನು ಕರೆಸಿದ್ದಾರೆ. ಈ ವೇಳೆ ಅನುಮಾನಗೊಂಡ ಪೊಲೀಸರು ಪೋಷಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಬಳಿಕ ಗುಂಡಿಕ್ಕಿ ಕೊಂದ ರಹಸ್ಯ ಬಯಲಾಗಿದೆ. ಕೂಡಲೇ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.
ಮುಂಬೈ ಮೂಲದ ಶ್ರದ್ಧಾ ವಾಕರ್ ಹತ್ಯೆ ಪ್ರಕರಣ ಬಯಲಾದ ಬಳಿಕ ಉತ್ತರ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಮದುವೆ ನಂತರವೂ ಅಕ್ರಮ ಸಂಬಂಧ ಹೊಂದಿದ್ದಕ್ಕಾಗಿ ತನ್ನ ಮಾಜಿ ಪ್ರೇಯಸಿಯನ್ನ ಕೊಂದು 6 ತುಂಡುಗಳಾಗಿ ಕತ್ತರಿಸಿ ಬಾವಿಗೆ ಎಸೆದಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಈಗ ಮತ್ತೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.