ಬೆಂಗಳೂರು: ಟೆಕ್ಕಿ ಅತುಲ್ ಸುಭಾಷ್ ಪ್ರಕರಣ ಮಾಸುವ ಮುನ್ನವೇ ಹೆಂಡತಿಗಾಗಿ ಮತ್ತೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದುಹೋಗಿದೆ. ಗಂಡ-ಹೆಂಡತಿ ಜಗಳ ಕೋರ್ಟ್ (Court) ಮೆಟ್ಟಿಲೇರಿದ್ರೂ, ಹೆಂಡತಿ ಬೇಕು ಅಂತ ಮನೆ ಬಳಿ ಹೋಗಿದ್ದ ಗಂಡ ಸುಟ್ಟು ಕರಕಲಾಗಿದ್ದಾನೆ.
ಮಂಜುನಾಥ್ (39) ಮೃತ ದುರ್ದೈವಿ. ಸ್ವಂತ ಕ್ಯಾಬ್ (Cab) ಇಟ್ಟುಕೊಂಡು ಜೀವನ ನಡೆಸುತ್ತಿದ್ದ ಮಂಜುನಾಥ್ ಮೂಲತಃ ಕುಣಿಗಲ್‌ನವರು. 2013 ರಲ್ಲಿ ನಯನಾ ಎಂಬಾಕೆಯನ್ನ ಮದುವೆಯಾಗಿದ್ದರು. ಮದುವೆ ನಂತರ ಬೆಂಗಳೂರಿನ (Bengaluru) ನಾಗರಬಾವಿಯ ಎನ್‌ಜಿಇಎಫ್ ಬಡಾವಣೆಯ ಫ್ಲಾಟ್‌ವೊಂದರಲ್ಲಿ ವಾಸವಿದ್ದರು. ಈತನಿಗೆ 9 ವರ್ಷದ ಮಗು ಸಹ ಇತ್ತು. ಇಬ್ಬರೂ ಡಿವೋರ್ಸ್ ಮೊರೆ ಹೋಗಿದ್ದರು. ಇದನ್ನೂ ಓದಿ: ಯುಪಿ ಕಾಲುವೆಯೊಂದರಲ್ಲಿ ವ್ಯಕ್ತಿಯ ಶವ ಪತ್ತೆ – ಆತ್ಮಹತ್ಯೆಗೆ ಒಳ್ಳೆಯ ಜಾಗ ಯಾವ್ದು ಅಂತ ಸರ್ಚ್ ಮಾಡಿದ್ದ ಭೂಪ!
- Advertisement
ಗುರುವಾರ (ಇಂದು) ಬೆಳಗ್ಗೆ 8 ಗಂಟೆಗೆ ಪತ್ನಿ ವಾಸವಿದ್ದ ಮನೆ ಬಳಿ ಬಂದಿದ್ದ. ಗಂಡನಿಂದ ದೂರವಿದ್ದ ನಯನಾಳನ್ನ ಮನವೊಲಿಸಲು ಮುಂದಾಗಿದ್ದ. ಆದ್ರೆ ಆಕೆ ಒಪ್ಪದೇ ಇದ್ದಾಗ 10:30ಕ್ಕೆ ಪೆಟ್ರೋಲ್ ಹಿಡಿದು ವಾಪಸ್ ಮನೆ ಬಳಿ ಬಂದಿದ್ದ. ಏಕಾಏಕಿ ಮನೆ ಕಾರಿಡಾರ್ ಮುಂದೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಇದನ್ನೂ ಓದಿ: ಪಕ್ಷದ ವಿದ್ಯಮಾನಗಳು ಸಂತೋಷ ತಂದಿಲ್ಲ – ರಾಮುಲು ಅಪಾರ್ಥಕ್ಕೆ ಅವಕಾಶ ಕೊಡೋ ಮಾತಾಡಬಾರದು: ವಿಜಯೇಂದ್ರ
- Advertisement
ಕೂಡಲೇ ಸ್ಥಳಕ್ಕೆ ಧಾವಿಸಿದ ಜ್ಞಾನ ಭಾರತಿ ಪೊಲೀಸರು ಪ್ರಾಥಮಿಕ ಮಾಹಿತಿ ಕಲೆ ಹಾಕಿದ್ರು. ದಂಪತಿಗಳಿಬ್ಬರ ನಡುವೆ ಆಗಾಗ ಜಗಳ ಕೂಡಾ ಆಗ್ತಾಯಿತ್ತು. ಜಗಳ ತಾರಕ್ಕಕ್ಕೇರಿದ್ದು 2 ವರ್ಷಗಳ ಹಿಂದೆ ಇಬ್ಬರೂ ಡಿವೋರ್ಸ್ ಮಾಡಿಕೊಳ್ಳಲು ನಿರ್ಧರಿಸಿದ್ರು. ಎರಡು ವರ್ಷದಿಂದ ಬೇರೆ ಮನೆ ಮಾಡಿಕೊಂಡಿದ್ದ ಮಂಜುನಾಥ, ಹೆಂಡತಿ ಬೇಕು ಅನ್ನೋ ಆಸೆಯಿಂದ ನಯನಾ ಮನೆ ಬಳಿ ಬಂದಿದ್ದರು. ಆದರೆ ಆಕೆ ನೀನು ಹಿಂದೆ ಕೊಟ್ಟಿರುವ ಕಷ್ಟ ಅಷ್ಟಿಷ್ಟಲ್ಲ. ನಿನ್ನಿಂದ ಹಲ್ಲೆ ಮಾಡಿಸಿಕೊಂಡು ನನಗೆ ಸಾಕಾಗಿದೆ ನಾನು ಬರೋದಿಲ್ಲ ಎಂದಿದ್ದಾಳೆ. ಇದರಿಂದ ಬೇಸತ್ತ ಮಂಜುನಾಥ್ ಪೆಟ್ರೋಲ್ ತೆಗೆದುಕೊಂಡು ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇನ್ನು ಮಂಜುನಾಥ್ ಮನೆಯವರು ಮಗನನ್ನ ಆ ಸ್ಥಿತಿಯಲ್ಲಿ ನೋಡಿದಾಗ ಆಕ್ರಂದನ ಮುಗಿಲು ಮುಟ್ಟಿತ್ತು. ಮಗನನ್ನ ಹೆಂಡ್ತಿಯೇ ಕೊಲೆ ಮಾಡಿದ್ದಾಳೆ ಅಂತಾ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಪ್ರಕರಣ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸ್ತಿದ್ದಾರೆ. ಇದನ್ನೂ ಓದಿ: ಹಿಂದೂ ದೇವಾಲಯಕ್ಕೆ ಮುಸ್ಲಿಂ ವ್ಯಕ್ತಿ ಉಸ್ತುವಾರಿ – ದೇವಿ ಕನಸಲ್ಲಿ ಬಂದು ಮೊಹಮ್ಮದ್ ಅಲಿಗೆ ಹೇಳಿದ್ದೇನು?