ಬಾಗಲಕೋಟೆ: ನಡುರಸ್ತೆಯಲ್ಲೇ ವಕೀಲೆಯೊಬ್ಬರ ಮೇಲೆ ಹಿಗ್ಗಾಮುಗ್ಗ ಥಳಿಸಿ, ಮಾರಣಾಂತಿಕ ಹಲ್ಲೆ ನಡೆಸಿರುವ ನೀಚಕೃತ್ಯ ಬಾಗಲಕೋಟೆಯ ವಿನಾಯಕನಗರದ ಕ್ರಾಸ್‌ನಲ್ಲಿ ನಡೆದಿದೆ.
ವಿನಾಯಕ ನಗರದ ನಿವಾಸಿ ಮಹಾಂತೇಶ್ ಚೊಳಚಗುಡ್ಡ ಎಂಬವನೇ ವಕೀಲೆ ಸಂಗೀತಾ ಶಿಕ್ಕೇರಿ ಹಾಗೂ ಆಕೆಯ ಪತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಮಹಿಳೆ ಅಂತಾನೂ ನೋಡದೇ ಸಾರ್ವಜನಿಕರ ಎದುರಲ್ಲೇ ಜಾಡಿಸಿ ಒದ್ದು ನೀಚ ಕೃತ್ಯ ಎಸಗಿದ್ದಾನೆ. ಇದನ್ನೂ ಓದಿ: ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಹಿಂದೂಗಳಿಗೆ ಬಿಟ್ಟು ಕೊಡುವಂತೆ ಆಗ್ರಹ
Advertisement
Advertisement
ಇದರಿಂದ ತೀವ್ರ ಗಾಯಗೊಂಡಿರುವ ದಂಪತಿಯ ಕಾಲು, ಎದೆಭಾಗ, ತಲೆಗೆ ಪೆಟ್ಟಾಗಿದೆ. ಆಕೆಯ ಪತಿಗೆ ಕಿವಿ ಹಾಗೂ ತಲೆಯ ಭಾಗಕ್ಕೆ ತೀವ್ರ ಪೆಟ್ಟಾಗಿದ್ದು, ರಕ್ತಸ್ರಾವವೂ ಆಗಿದೆ. ತೀವ್ರ ಪೆಟ್ಟಾಗಿರುವ ವಕೀಲೆಯನ್ನು ಚಿಕಿತ್ಸೆಗಾಗಿ ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಆರೋಪಿ ನಾಗೇಶ್ ಬಂಧಿಸಿದ ಪೊಲೀಸರಿಗೆ ಆರಗ ಜ್ಞಾನೇಂದ್ರ ಧನ್ಯವಾದ
Advertisement
ಕೆಲ ದಿನಗಳ ಹಿಂದೆ ಬಿಜೆಪಿ ಮುಖಂಡ ರಾಜು ನಾಯ್ಕರ್ ತಮ್ಮ ಮೇಲೆ ದೌರ್ಜನ್ಯ ಮಾಡಿದ್ದಾರೆ ಎಂದು ವಕೀಲೆ ಸಂಗೀತಾ ಶಿಕ್ಕೇರಿ ಆರೋಪಿಸಿದ್ದರು. ಅಲ್ಲದೆ ಬಿಜೆಪಿ ಮುಖಂಡ ರಾಜು ನಾಯ್ಕರ್ ಕಳೆದ ಮೇ 8 ರಂದು ನಸುಕಿನ ಜಾವ ಬುಲ್ಡೋಜರ್‌ನಿಂದ ತಮ್ಮ ಮನೆಯ ಮುಂದಿನ ಕಂಪೌಂಡ್ ಹಾಗೂ ಶೌಚಾಲಯ ಕೆಡವಿದ್ದರು. ಈ ಕುರಿತ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಇದೀಗ ಬಿಜೆಪಿ ಮುಖಂಡ ರಾಜು ನಾಯ್ಕರ್‌ನ ಕುಮ್ಮಕ್ಕಿನಿಂದಲೇ ಮಹಾಂತೇಶ ಚೋಳಚಗುಡ್ಡ ಹಲ್ಲೆ ನಡೆಸಿದ್ದಾನೆ ಎಂದು ವಕೀಲೆ ಆರೋಪಿಸಿದ್ದಾರೆ.
Advertisement
ತಮ್ಮ ಮನೆಗೆ ಸಂಬಂಧಿಸಿದ ವ್ಯಾಜ್ಯ ನ್ಯಾಯಾಲಯದಲ್ಲಿ ಇರೋದ್ರಿಂದ ರಾಜು ನಾಯ್ಕರ್ ಹಾಗೂ ವಕೀಲೆ ನಡುವೆ ಆರೋಪ ಪ್ರತ್ಯಾರೋಪಗಳು ನಡೆಯುತ್ತಿತ್ತು. ರಾಜು ನಾಯ್ಕರ್ ವಿರುದ್ಧ ಠಾಣೆಯಲ್ಲಿ ದೂರು ಕೊಡುತ್ತಿರುವುದರಿಂದ ಮಹಾಂತೇಶ ಚೊಳಚಗುಡ್ಡ ಹಲ್ಲೆ ಮಾಡಿದ್ದಾರೆಂದು ದೂರಿದ್ದಾರೆ.
ಇದಕ್ಕೆ ಪ್ರತಿಯಾಗಿ ಹೇಳಿಕೆ ನೀಡಿರುವ ಮಹಾಂತೇಶ್ ಚೋಳಚಗುಡ್ಡ, ಬಿಜೆಪಿ ಮುಖಂಡ ರಾಜುನಾಯ್ಕರ್‌ಗೂ ನನಗೂ ಯಾವುದೇ ಸಂಬಂಧವಿಲ್ಲ. ನಿನ್ನೆ ಪೊಲೀಸರು ಬಂದಾಗ ಸಂಗೀತಾ ಶಿಕ್ಕೇರಿ ಅವರ ಮನೆ ಎಲ್ಲಿ ಎಂದಾಗ ತೋರಿಸಿದ್ದೆ. ನಮ್ಮ ಮನೆಯ ಹತ್ತಿರವೇ ಇರೋದ್ರಿಂದ ತೋರಿಸಿದ್ದೆ. ಅದೇ ದ್ವೇಷದ ಹಿನ್ನೆಲೆ ನಮ್ಮ ಅಂಗಡಿಗೆ ಬಂದು ನನಗೆ ಚಪ್ಪಲಿಯಿಂದ ಹೊಡೆದು, ಅವಾಚ್ಯ ಶಬ್ದಗಳಿಂದ ನಿಂಧಿಸಿದ್ದಾರೆ. ಗಲಾಟೆಯಲ್ಲಿ ತಳ್ಳಾಟವಾಗಿದೆ. ಆದರೆ ನಾನು ಯಾರ ಕುಮ್ಮಕ್ಕಿನಿಂದ ಏನು ಮಾಡಿಲ್ಲ. ನಾನೂ ಕೂಡ ಪೊಲೀಸ್ ಠಾಣೆಗೆ ದೂರು ಕೊಡುತ್ತೇನೆ ಎಂದು ಹೇಳಿದ್ದಾರೆ.