– ಬೆಂಗಳೂರಲ್ಲಿ ಎಂಎಸ್ಸಿ ಓದುತ್ತಿದ್ದ ಸ್ವರ್ಣ
ಚಿಕ್ಕಬಳ್ಳಾಪುರ: ತಂದೆಯ ಸಾವಿನಿಂದ ಮನನೊಂದ ಮಗಳು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ಚಿಕ್ಕಬಳ್ಳಾಪುರದಲ್ಲಿ (Chikkaballapura) ನಡೆದಿದೆ.
ಗೌರಿಬಿದನೂರು ನಗರೆದ ನಾಗಿರೆಡ್ಡಿ ಬಡಾವಣೆಯ 22 ವರ್ಷದ ಸ್ವರ್ಣ ಮೃತ ಮಗಳು. ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ಎಂಎಸ್ಸಿ ಪದವಿ ವ್ಯಾಸಂಗ ಮಾಡ್ತಿದ್ದ ಸ್ವರ್ಣ ಕಾಲೇಜಿನ ಹಾಸ್ಟೆಲ್‌ನಲ್ಲಿ (College Hostel) ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಇದನ್ನೂ ಓದಿ: ತಾಲಿಬಾನ್ ಸಚಿವನ ಸುದ್ದಿಗೋಷ್ಠಿಯಲ್ಲಿ ಮಹಿಳಾ ಪತ್ರಕರ್ತರಿಗೆ ನಿಷೇಧ – ನಮ್ಮ ಪಾತ್ರ ಇಲ್ಲ ಅಂತ ಕೇಂದ್ರ ಸ್ಪಷ್ಟನೆ
ಮನೆಗೆ ಬಂದಿದ್ದ ಮಗಳನ್ನ ತಾಯಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಳು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಮಗಳು ಸ್ವರ್ಣ ಸಾವನ್ನಪ್ಪಿದ್ದಾಳೆ. ಈಕೆ ತಂದೆ ಕಳೆದ 3 ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದರು. ಅಂದಿನಿಂದಲೂ ಮಾನಸಿಕವಾಗಿ ಕುಗ್ಗಿ ಹೋಗಿ ಕಿನ್ನೆತೆಗೆ ಓಳಗಾಗಿದ್ದ ಸ್ವರ್ಣ ಸೂಸೈಡ್ ಮಾಡಿಕೊಂಡು ಈಗ ತಂದೆಯ ಹಾದಿ ಹಿಡಿದಿದ್ದಾಳೆ. ಇದನ್ನೂ ಓದಿ: ಬಿಹಾರ ಮತದಾರರ ಪಟ್ಟಿಯಲ್ಲಿ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದ್ದ ಐವರು ಅಧಿಕಾರಿಗಳ ಮುಂದೆ ಹಾಜರ್!
ಇನ್ನೂ ಒಂದ್ಕಡೆ ಗಂಡ ಮತ್ತೊಂದ್ಕಡೆ ಮಗಳು ಆತ್ಮಹತ್ಯೆ ಹಾದಿ ಹಿಡಿದಿದ್ದು ಇರೋ ಮಗನೊಂದಿಗೆ ತಾಯಿ ದಿಕ್ಕು ತೋಚದಂತಾಗಿದ್ದಾರೆ. ಅಕ್ಕನ ಸಾವಿನಿಂದ ತಮ್ಮ ಸಹ ಕುಗ್ಗಿ ಹೋಗಿದ್ದು ತಾಯಿಗೆ ಆತಂಕ ಭಯ ಮೂಡಿಸಿದೆ. ಈ ಸಂಬಂಧ ಬೆಂಗಳೂರಿನ ಹೈಗ್ರೌಂಡ್ ಪೊಲೀಸರು ಚಿಕ್ಕಬಳ್ಳಾಪುರಕ್ಕೆ ಆಗಮಿಸಿ ಮೃತ ಸ್ವರ್ಣ ತಾಯಿ ಬಳಿ ಹೇಳಿಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ರಸ್ತೆಗುಂಡಿ ತಪ್ಪಿಸಲು ಹೋಗಿ ಕಾರು ಪಲ್ಟಿ – ಕುಟುಂಬಸ್ಥರನ್ನ ರಕ್ಷಿಸಿದ ʻಪಬ್ಲಿಕ್ ಟಿವಿʼ ತಂಡ