ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ (Social Media) ಆದ ಪರಿಚಯನ್ನು ನಂಬಿ ಆಕೆ ಪ್ರೀತಿಯಲ್ಲಿ ಬಿದ್ದಿದ್ದಳು. ಪ್ರೀತಿ (Love) ಸಲುಗೆಯಿಂದ ಆಕೆ, ಅವನ ಜೊತೆ ಸುತ್ತಾಡಿದಳು. ಕೊನೆಗೆ ಆಕೆಯನ್ನ ಮಿಸ್ ಯೂಸ್ ಮಾಡಿಕೊಂಡು ಆಕೆಯನ್ನ ಕರೆಸಿ ಸ್ನೇಹಿತರ ಜೊತೆಗೆ ಸೇರಿ ಗ್ಯಾಂಗ್ ರೇಪ್ ಮಾಡಿದ್ದಾರೆ.
ಹೌದು. ಇತ್ತೀಚಿನ ದಿನಗಳಲ್ಲಿ ಈ ಸಾಮಾಜಿಕ ಜಾಲತಾಣಗಳಲ್ಲಿ ಪ್ರೀತಿ-ಪ್ರೇಮ ಅಂತಾ ಪ್ರೀತಿಯಲ್ಲಿ ಬಿಳುವವರ ಸಂಖ್ಯೆ ಜಾಸ್ತಿಯಾಗಿದೆ. ಅದರಂತೆ ಮೋಸ ಹೋದವರ ಸಂಖ್ಯೆ ಕೂಡ ಅಷ್ಟೇ ಇದೆ. ಇದೀಗ ಅದೇ ಸಾಮಾಜಿಕ ಜಾಲತಾಣ ನಂಬಿ ಪ್ರೀತಿಗೆ ಬಿದ್ದ ಯುವತಿ ಮೇಲೆ ಅತ್ಯಾಚಾರ ಆಗಿದೆ. ಕೋಡಿಗೆಹಳ್ಳಿ ಪೊಲೀಸ್ ಠಾಣಾ (Kodigehalli Police Station) ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಏನಿದು ಪ್ರಕರಣ..?: ಆ್ಯಂಡಿ ಜಾರ್ಜ್ ಅನ್ನುವ ವ್ಯಕ್ತಿ ಡ್ಯಾನ್ಸ್ ಮಾಸ್ಟರ್ ಆಗಿ ಖಾಸಗಿ ಶಾಲೆಯಲ್ಲಿ ಕೆಲಸ ಮಾಡ್ತಿದ್ದ. ಎರಡು ವರ್ಷದ ಹಿಂದೆ ಕಾಲೇಜೊಂದರ ವಿದ್ಯಾರ್ಥಿನಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪರಿಚಯ ಮಾಡಿಕೊಳ್ಳುತ್ತಾನೆ. ಪರಿಚಯ ಮಾಡಿಕೊಂಡ ಯುವತಿಗೆ ನಾನು ಪ್ರೀತಿಸ್ತೀನಿ ಎಂದು ನಂಬಿಸಿ ಸುತ್ತಾಡಿಸಿರುತ್ತಾನೆ. ಜೊತೆಗೆ ಆಕೆ ಖಾಸಗಿ ಫೋಟೋಗಳನ್ನ ಇಟ್ಟುಕೊಂಡು, ಅವುಗಳನ್ನ ವೈರಲ್ ಮಾಡ್ತೀನಿ ಎಂದು ಆಕೆಯನ್ನ ಕರೆಸಿ ಹಲವು ಬಾರಿ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ.
ಇಷ್ಟು ಮಾತ್ರವಲ್ಲದೇ ಈ ಖರ್ತನಾಕ್ ಆಸಾಮಿ, ಆಕೆ ಖಾಸಗಿ ವೀಡಿಯೋಗಳನ್ನ ಕೂಡ ಸೆರೆಹಿಡಿದು ಇಟ್ಟುಕೊಂಡಿದ್ದಾನಂತೆ. ಅದನ್ನೇ ಬಂಡವಾಳವಾಗಿ ಮಾಡಿಕೊಂಡು ಪ್ರತಿ ಬಾರಿ ಆಕೆಗೆ ಕಾಲ್ ಮಾಡಿ ವೀಡಿಯೋ ಶೇರ್ ಮಾಡೋದಾಗಿ ಬೆದರಿಕೆ ಹಾಕಿ ಕರೆಸಿಕೊಂಡು ಅತ್ಯಾಚಾರ ಎಸಗುತ್ತಿದ್ದನು. ಇದರ ಜೊತೆಗೆ ತನ್ನ ಸ್ನೇಹಿತ ಸಂತೋಷ್, ಶಶಿಯಿಂದ ಕೂಡ ಅತ್ಯಾಚಾರ ಎಸಗಲಾಗಿದಂತೆ. ಇದರಿಂದ ಆತಂಕಗೊಂಡ ಆಕೆ ಆ್ಯಂಡಿ ಜಾರ್ಜ್ ನಿಂದ ದೂರವಾಗಿದ್ದಳು. ಆದರೆ ಆಕೆ ದೂರ ಆಗಿದ್ದು ಸಹಿಸಲಾಗದೇ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್ ಮಾಡಿ ತನ್ನ ಸ್ನೇಹಿತರಿಗೆ ಶೇರ್ ಮಾಡಿದ್ದಾನೆ.
ಸದ್ಯ ಸಂತ್ರಸ್ತೆ ಕೋಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದು, ಈಗಾಗಲೇ ಪೊಲೀಸರು ಆರೋಪಿ ಜಾರ್ಜ್, ಸಂತೋಷ್, ಶಶಿ ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
Web Stories