ಕೋಲಾರ: ಜಿಲ್ಲೆಯ ಮಾಲೂರಿನ ದಂಪತಿ (Couple) ತಮ್ಮ ದಿವಂಗತ ಪುತ್ರನ ಸ್ಮರಣಾರ್ಥವಾಗಿ ಹೆಲ್ಮೆಟ್ (Helmet) ವಿತರಿಸಿ ಕೆಲ ಸಮಾಜಮುಖಿ ಕೆಲಸದಿಂದ ಗಮನ ಸೆಳೆದಿದ್ದಾರೆ.
Advertisement
ಸಾರ್ವಜನಿಕರಿಗೆ ಉಚಿತವಾಗಿ ಹೆಲ್ಮೆಟ್ ವಿತರಣೆ, ರಕ್ತದಾನ ಶಿಬಿರ ಸೇರಿದಂತೆ ಹಲವು ಸಮಾಜ ಸೇವೆಯನ್ನು ಹುಂಗೇನಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೃಷ್ಣಪ್ಪ ದಂಪತಿ ಹಲವು ವರ್ಷಗಳಿಂದ ಮಾಡುತ್ತಿದ್ದಾರೆ. ಕೃಷ್ಣಪ್ಪ ದಂಪತಿ ಪುತ್ರ ವಿಕ್ರಮ್ ಕಳೆದ ಐದು ವರ್ಷಗಳ ಹಿಂದೆ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದ. ಇದನ್ನೂ ಓದಿ: ರಸ್ತೆ, ಚರಂಡಿಯಂತಹ ಸಣ್ಣ ವಿಚಾರಗಳನ್ನು ಕೇಳ್ಬೇಡಿ, ಲವ್ ಜಿಹಾದ್ ಬಗ್ಗೆ ಮಾತನಾಡಿ: ಕಟೀಲ್
Advertisement
Advertisement
ಆ ಬಳಿಕ ಪ್ರತಿವರ್ಷ ಮೃತಪಟ್ಟ ಪುತ್ರನ ಪುಣ್ಯ ಸ್ಮರಣೆಯನ್ನು ಅರ್ಥವತ್ತಾಗಿ ಆಚರಿಸುತ್ತಿರುವ ಈ ದಂಪತಿ, ಈ ಭಾರಿಯೂ ಕೋಲಾರದ ಮಾಲೂರಿನ ಲಿಂಗಾಪುರ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ 1,500 ಹೆಲ್ಮೆಟ್‍ಗಳನ್ನು ವಿತರಿಸಿದ್ದಾರೆ. ಪುತ್ರ ಅಪಘಾತ ಹೊಂದಿದ ಬಳಿಕ ಅಂದಿನಿಂದ ಮಗನ ಸ್ಮರಣಾರ್ಥ ಉಚಿತ ಹೆಲ್ಮೆಟ್ ವಿತರಣೆ, ಸಮವಸ್ತ್ರ ವಿತರಣೆ, ರಕ್ತದಾನ, ಅಂಗನವಾಡಿಗಳಿಗೆ ಬೀರು ವಿತರಣೆ, ಅಪಘಾತಗಳ ಬಗ್ಗೆ ಜಾಗೃತಿ ಸೇರಿದಂತೆ ಹಲವು ಸೇವೆಯನ್ನು ಮಾಡುತ್ತಾ ಬರುತ್ತಿದ್ದಾರೆ. ಇದನ್ನೂ ಓದಿ: ಪಂಚಭೂತಗಳಲ್ಲಿ ಸರಳತೆಯ ಶತಮಾನದ ಸಂತ ಸಿದ್ದೇಶ್ವರ ಶ್ರೀ ಲೀನ